Webdunia - Bharat's app for daily news and videos

Install App

ಮಹಿಳಾ ಆಯೋಗದ ಮುಖ್ಯಸ್ಥರಾಗಿ ಸ್ವಾತಿ ಮಲಿವಾಲ್ ಆಯ್ಕೆಗೆ ಜಂಗ್ ಅನುಮೋದನೆ

Webdunia
ಮಂಗಳವಾರ, 28 ಜುಲೈ 2015 (16:52 IST)
ಮಹಿಳೆಯರ ಆಯೋಗದ ಮುಖ್ಯಸ್ಥರಾಗಿ ಸ್ವಾತಿ ಮಲಿವಾಲ್ ಅವರ "ಏಕಪಕ್ಷೀಯ" ನಾಮನಿರ್ದೇಶನ ಮಾಡಿದ್ದ ಆಪ್ ಸರ್ಕಾರ ಮತ್ತು ಅದನ್ನು ವಿರೋಧಿಸಿದ್ದ ಉಪರಾಜ್ಯಪಾಲ ನಜೀಬ್ ಜಂಗ್ ನಡುವಿನ ಜಟಾಪಟಿಗೆ ನೇಮಕಕ್ಕೆ ಅನುಮೋದನೆ ನೀಡುವ ಮೂಲಕ ಜಂಗ್ ಅವರೇ ಇತಿಶ್ರೀ ಹಾಡಿದ್ದಾರೆ. 

30 ವರ್ಷದ ಮಲಿವಾಲ್ ಮತ್ತು ಉಳಿದ ಮೂವರು ಸದಸ್ಯರ ನೇಮಕಕ್ಕೆ ಜಂಗ್ ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ. 
 
"ಮಲಿವಾಲ್ ಮತ್ತು ಡಿಈಆರ್‌ಸಿ ಇತರ ಸದಸ್ಯರ ನೇಮಕಾತಿಗೆ ಸಂಬಂಧಿಸಿದ ಕಡತ ತೆರವುಗೊಳಿಸಲಾಗಿದೆ", ಎಂದು ಮೂಲಗಳು ಹೇಳಿವೆ.
 
ಸೂಕ್ತ ಪ್ರಕ್ರಿಯೆಯ ಅನುಸರಿಸಿದಲ್ಲಿ ನೇಮಕಕ್ಕೆ ಸಂಬಂಧಿಸಿದ ಕಡತವನ್ನು ತೆರವುಗೊಳಿಸಲು ಯಾವುದೇ ತಡೆ ಇಲ್ಲ ಎಂದು ಹೇಳಿ ಜಂಗ್ ಶುಕ್ರವಾರ ಕಡತವನ್ನು ಮರಳಿಸಿದ್ದರು.
 
ಸ್ವಾತಿ ಮಲಿವಾಲ್ ಅಧಿಕಾರವನ್ನು ಸ್ವೀಕರಿಸಿದ್ದ ಬಳಿಕ  ಅ ರೀತಿಯ ಉನ್ನತ ನೇಮಕಾತಿಗೆ ಉಪರಾಜ್ಯಪಾಲರ ಅನುಮತಿ ಪಡೆಯುವುದು ಅಗತ್ಯ ಎಂದು ಹೇಳಿದ್ದ ಜಂಗ್ ಮಲಿವಾಲ್ ಆಯ್ಕೆಯನ್ನು ತಳ್ಳಿ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಸರ್ಕಾರ ಮತ್ತು ಜಂಗ್ ನಡುವೆ ವೈಮನಸ್ಸು ತಲೆದೋರಿತ್ತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments