Webdunia - Bharat's app for daily news and videos

Install App

ಆಕೆ ದೊಡ್ಡವರ ಟಾರ್ಗೆಟ್ ಆಗಿದ್ದಳು, ಯಾಕೆಂದರೆ..: ಕೋಲ್ಕತ್ತಾ ಟ್ರೈನಿ ವೈದ್ಯೆಯ ಬಗ್ಗೆ ಹೊರಬಿತ್ತು ಭಯಾನಕ ಸತ್ಯ

Krishnaveni K
ಸೋಮವಾರ, 19 ಆಗಸ್ಟ್ 2024 (14:31 IST)
ಕೋಲ್ಕತ್ತಾ: ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ರೇಪ್ ಆಂಡ್ ಮರ್ಡರ್ ಆದ ಟ್ರೈನಿ ವೈದ್ಯೆ ಬಗ್ಗೆ ಆಕೆಯ ಸಹೋದ್ಯೋಗಿಗಳು ಕೆಲವೊಂದು ವಿಚಾರಗಳನ್ನು ಹೊರಹಾಕಿದ್ದು, ಇದು ಈ ಪ್ರಕರಣದ ಹಿಂದೆ ದೊಡ್ಡವರ ಕೈವಾಡವಿರುವ ಬಗ್ಗೆ ಮತ್ತಷ್ಟು ಸಂಶಯ ಹುಟ್ಟುಹಾಕಿದೆ.

31 ವರ್ಷದ ವೈದ್ಯೆಯ ಮೃತದೇಹ ಆರ್ ಜಿ ಕರ್ ಮೆಡಿಕಲ್ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಪತ್ತೆಯಾಗಿತ್ತು. ಆಕೆಯ ಖಾಸಗಿ ಅಂಗಾಂಗಳಿಂದ ರಕ್ತ ಸೋರುತ್ತಿತ್ತು. ಈ ರೇಪ್ ಆಂಡ್ ಮರ್ಡರ್ ಕೇಸ್ ಈಗ ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದಲ್ಲಿ ಈಗ ಸಂಜಯ್ ರಾಯ್ ಎಂಬ ಆರೋಪಿಯನ್ನು ಬಂಧಿಸಿ ಸಿಬಿಐ ತಂಡ ತನಿಖೆ ನಡೆಸುತ್ತಿದೆ.

ಆದರೆ ಸಂಜಯ್ ರಾಯ್ ಹಿಂದೆ ಬೇರೆಯವರ ಕೈವಾಡವಿದೆ ಎನ್ನುವುದು ಸಹೋದ್ಯೋಗಿಗಳ ಆರೋಪವಾಗಿದೆ. ಯಾಕೆಂದರೆ ಸಂತ್ರಸ್ತೆ ಆ ಸಮಯದಲ್ಲಿ ಸೆಮಿನಾರ್ ಹಾಲ್ ನಲ್ಲೇ ಇದ್ದಳು ಎಂಬ ವಿಚಾರ ಆರೋಪಿಗೆ ಹೇಗೆ ಗೊತ್ತಾಯ್ತು. ಆಸ್ಪತ್ರೆಯ ಹೊರಗೆ ಕರ್ತವ್ಯ ಮಾಡುವವನಿಗೆ ಆಸ್ಪತ್ರೆಯ ಒಳಗೆ ಆಕೆ ಒಬ್ಬಳೇ ಇದ್ದ ವಿಚಾರ ಯಾರೋ ತಿಳಿಸಿರಬೇಕು ಎಂಬುದು ಸಹೋದ್ಯೋಗಿಗಳ ಅನುಮಾನ.

ಇನ್ನು, ಆಕೆಯನ್ನು ಸತತ 36 ಗಂಟೆಗಳ ಕಾಲ ಕರ್ತವ್ಯದಲ್ಲಿರುವಂತೆ ಮಾಡಿದ್ದು ಯಾಕೆ? ಈ ರೀತಿ ವಿಶ್ರಾಂತಿಯಿಲ್ಲದೇ ದುಡಿಸಿಕೊಂಡಿರುವುದರ ಹಿಂದೆ ಬೇರೆ ಏನೋ ಕಾರಣವಿರಲೇಬೇಕು ಎಂಬುದು ಅವರ ವಾದ. ಆಕೆಯನ್ನು ಯಾರೋ ದೊಡ್ಡ ಕೈಗಳು ಬೇಕೆಂದೇ ಟಾರ್ಗೆಟ್ ಮಾಡಿವೆ ಎನ್ನುವುದು ಸಹೋದ್ಯೋಗಿಗಳ ಆರೋಪ. ಯಾಕೆಂದರೆ ಆಕೆಗೆ ಡಿಪಾರ್ಟ್ ಮೆಂಟ್ ನಲ್ಲಿ ನಡೆಯುತ್ತಿದ್ದ ಯಾವುದೋ ಅವ್ಯವಹಾರದ ಬಗ್ಗೆ ನಮ್ಮೆಲ್ಲರಿಗಿಂತ ಹೆಚ್ಚು ಅರಿವಿತ್ತು. ಅದೇ ಕಾರಣಕ್ಕೆ ಯಾವುದೋ ದೊಡ್ಡ ಕೈಯೇ ಆಕೆಯ ವಿರುದ್ಧ ಸಂಚು ರೂಪಿಸಿದೆ ಎಂಬುದು ಸಹೋದ್ಯೋಗಿಗಳ ಆರೋಪ.

ಇನ್ನು ಸಂತ್ರಸ್ತೆಯ ಪೋಷಕರೂ ಇತ್ತೀಚೆಗೆ ತಮ್ಮ ಮಗಳಿಗೆ ಆರ್ ಜಿ ಕರ್ ಆಸ್ಪತ್ರೆಗೆ ಹೋಗುವುದೇ ಇಷ್ಟವಿರಲಿಲ್ಲ ಎಂದಿದ್ದಾರೆ. ಆಕೆ ಆಸ್ಪತ್ರೆಗೆ ಹೋಗುವುದೆಂದರೇ ಬೇಸರ ವ್ಯಕ್ತಪಡಿಸುತ್ತಿದ್ದಳು. ಸಾವಿನ ಕೆಲವು ದಿನ ಮೊದಲು ನನಗೆ ಆರ್ ಜಿ ಕರ್ ಆಸ್ಪತ್ರೆಗೆ ಹೋಗಬೇಕೆಂದೇ ಅನಿಸುವುದಿಲ್ಲ ಎನ್ನುತ್ತಿದ್ದಳು ಎಂದು ಆಕೆಯ ಪೋಷಕರೂ ಹೇಳಿದ್ದಾರೆ. ಹೀಗಾಗಿ ವೈದ್ಯೆ ರೇಪ್ ಆಂಡ್ ಮರ್ಡರ್  ನ ಹಿಂದೆ ಸಾಕಷ್ಟು ಅನುಮಾನಗಳಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Monsoon rain: ರೈತರಿಗೆ ಗುಡ್‌ನ್ಯೂಸ್‌

ನಮ್ಮಲ್ಲಿರುವುದು ಬರೀ 6 ಲಕ್ಷ ಸೈನಿಕರು, ನಾವು ಉಳಿಯುವುದಿಲ್ಲ ಎಂದ ಪಾಕ್‌ನ ಮಾಜಿ ಸೇನಾಧಿಕಾರಿ

Operation Sindoor: ಶಾಲೆ, ಆಸ್ಪತ್ರೆ ಗುರಿಯಾಗಿಸಿ ನಡೆಸಿದ ಪಾಕ್‌ ಮಿಸೈಲ್‌ ದಾಳಿಗೆ ತಕ್ಕ ಉತ್ತರ

ಪಾಕಿಸ್ತಾನದ ಸೇನಾ ಪಡೆಯ ಗುಂಡಿನ ದಾಳಿಗೆ ರಜೌರಿಯ ಹೆಚ್ಚುವರಿ ಜಿಲ್ಲಾಧಿಕಾರಿ ಸಾವು, ಹಲವರಿಗೆ ಗಾಯ

Operation Sindoor: ಪಾಕಿಸ್ತಾನದ ಮಿಲಿಟರಿ ಪೋಸ್ಟ್‌, ಡ್ರೋನ್ ಲಾಂಚ್‌ಪ್ಯಾಡ್‌ ಉಡೀಸ್‌

ಮುಂದಿನ ಸುದ್ದಿ
Show comments