Webdunia - Bharat's app for daily news and videos

Install App

ಕೊನೆಯುಸಿರೆಳೆದ ಕಿರಣ್ ಬೇಡಿ ಪತಿ

Webdunia
ಸೋಮವಾರ, 1 ಫೆಬ್ರವರಿ 2016 (15:58 IST)
ಮಾಜಿ ಐಪಿಎಸ್, ಬಿಜೆಪಿ ನಾಯಕಿ ಕಿರಣ್ ಬೇಡಿಯವರ ಪತಿ ಬ್ರಿಜ್ ಬೇಡಿ ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಗುರ್ಗಾಂವ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 
ಪ್ರಖ್ಯಾತ ಫೋಟೋಗ್ರಾಫರ್ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದ ಅವರು ಪಂಜಾಬ್‌ನ ಅಮೃತಸರ್‌ನಲ್ಲಿ ವಾಸವಾಗಿದ್ದರು.ಅವರು ಕೊನೆಯುಸಿರೆಳೆಯುವ ಸಂದರ್ಭದಲ್ಲಿ ಪತ್ನಿ ಕಿರಣ್ ಬೇಡಿ ಸಹ ಜತೆಗಿದ್ದರು.
 
ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಬ್ರಿಜ್ ಬೇಡಿಯವರ ನಿಧನಕ್ಕೆ ತೀವ್ರ ಸಂತಾಪವನ್ನು ವ್ಯಕ್ತ ಪಡಿಸಿದ್ದಾರೆ. ತಮ್ಮ ಪರೋಪಕಾರಿ ಕಾರ್ಯಗಳು ಮತ್ತು ಮನುಕುಲದ ಸೇವೆಯಲ್ಲಿಟ್ಟಿದ್ದ ಬದ್ಧತೆಯಿಂದಾಗಿ ಅವರು ಜನಮಾನಸದಲ್ಲಿ ಸ್ಥಿರವಾಗಿರುತ್ತಾರೆ ಎಂದು ಅವರು ಹೇಳಿದ್ದಾರೆ. 
 
ಬ್ರಿಜ್ ತಮ್ಮ ಯುವ ವಯಸ್ಸಿನಲ್ಲಿ ವಿಶ್ವ ವಿದ್ಯಾಲಯ ಮಟ್ಟದ ಟೆನ್ನಿಸ್ ಆಟಗಾರರು ಸಹ ಆಗಿದ್ದರು.
 
ತನ್ನನ್ನು ಬಹುವಾಗಿ ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಅಮೃತ್‌ಸರ್‌ ಕಳೆದುಕೊಂಡಿದೆ. ಅವರು ಅಸಹಾಯಕರ ಪರವಾಗಿ ಧ್ವನಿ ಎತ್ತುತ್ತ ಜೀವನ ಸವೆಸಿದರು. ಅವರ ಸೇವಾಕಾರ್ಯವನ್ನು ನಾವು ಮುಂದುವರೆಸುತ್ತೇವೆ ಎಂದು ಕಿರಣ್ ಬೇಡಿ ಟ್ವೀಟ್ ಮಾಡಿದ್ದಾರೆ. 
 
1972ರಲ್ಲಿ ವಿವಾಹವಾಗಿದ್ದ ದಂಪತಿಗಳಿಗೆ ಸೈನಾ ಎಂಬ ಮಗಳಿದ್ದಾಳೆ. ಪವಿತ್ರ ನಗರಿ ಅಮೃತ್‌ಸರ್‌ನಲ್ಲಿಯೇ ತಮ್ಮ ಜೀವನದ ಬಹುಭಾಗವನ್ನು ಕಳೆದ ಬ್ರಿಜ್ ಅವರ ಅಂತ್ಯಸಂಸ್ಕಾರವನ್ನು ಇಂದು ಅಲ್ಲಿಯೇ ನಡೆಸಲಾಗುವುದು. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments