Select Your Language

Notifications

webdunia
webdunia
webdunia
webdunia

ದೆಹಲಿ ಬಿಕ್ಕಟ್ಟಿನ ಬಳಿಕ ಪಂಜಾಬ್ ದಾರಿತಪ್ಪಿಸುವ ಕೇಜ್ರಿವಾಲ್ : ಬಿಜೆಪಿ

ದೆಹಲಿ ಬಿಕ್ಕಟ್ಟಿನ ಬಳಿಕ ಪಂಜಾಬ್ ದಾರಿತಪ್ಪಿಸುವ ಕೇಜ್ರಿವಾಲ್ : ಬಿಜೆಪಿ
ನವದೆಹಲಿ: , ಶುಕ್ರವಾರ, 9 ಸೆಪ್ಟಂಬರ್ 2016 (20:00 IST)
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಂಜಾಬ್‌ನಲ್ಲಿ ಚುನಾವಣೆ ಪ್ರಚಾರದ ಪ್ರಯೋಗಕ್ಕೆ ಇಳಿದ ಕೂಡಲೇ ದೆಹಲಿ ಬಿಜೆಪಿ ಆರೋಪಗಳ ಸುರಿಮಳೆ ಸುರಿಸಿದೆ. ದೆಹಲಿಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು ಸೃಷ್ಟಿಸಿದ ಪಕ್ಷವು ಪಂಜಾಬಿನ ಜನರ ದಿಕ್ಕು ತಪ್ಪಿಸುತ್ತಿದ್ದಾರೆಂದು ಟೀಕಿಸಿದರು.
 
ಪಂಜಾಬ್‌ನ ಮೂಲೆ ಮೂಲೆಯಲ್ಲೂ ಪಂಜಾಬಿನ ಜನರು  ಕೇಜ್ರಿವಾಲ್ ದುಷ್ಕರ್ಮಗಳನ್ನು ಬಯಲುಮಾಡುವುದನ್ನು ದೆಹಲಿ ಬಿಜೆಪಿ ಖಾತರಿ ಮಾಡಲಿದೆ ಎಂದು ನಗರ ಬಿಜೆಪಿ ಮುಖಂಡ ಸತೀಶ್ ಉಪಾಧ್ಯಾಯ ತಿಳಿಸಿದರು.

ದೆಹಲಿ ಬಿಜೆಪಿ ಘಟಕದ ಕಚೇರಿಯಲ್ಲಿ ಉಪಾಧ್ಯಾಯ, ಪ್ರತಿಪಕ್ಷದ ನಾಯಕ ವಿಜೇಂದ್ರ ಗುಪ್ತಾ, ಸಂಸದ ಮೀನಾಕ್ಷಿ ಲೇಖಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. 
 
ಸಂಸದೀಯ ಕಾರ್ಯದರ್ಶಿಗಳ ನೇಮಕವನ್ನು ಗುಪ್ತಾ ತರಾಟೆಗೆ ತೆಗೆದುಕೊಂಡು ಸಚಿವರ ರೀತಿ ಎಲ್ಲಾ ಸೌಲಭ್ಯಗಳನ್ನು ಅವರಿಗೆ ಕಲ್ಪಿಸಲಾಗಿದೆ ಎಂದು ಟೀಕಿಸಿದರು.
 
ಕೇಜ್ರಿವಾಲ್ ಸರ್ಕಾರ 21 ಎಎಪಿ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಿಸಿದ ಆದೇಶವನ್ನು ಬದಿಗಿರಿಸುವಂತೆ ದೆಹಲಿ ಹೈಕೋರ್ಟ್ ಆದೇಶ ನೀಡುವ ಮೂಲಕ ಕೇಜ್ರಿವಾಲ್ ಸರ್ಕಾರಕ್ಕೆ ಹೊಸ ಪೆಟ್ಟು ಬಿದ್ದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀಮಿಯರ್ ರೈಲುಗಳ ಪ್ರಯಾಣ ದರ ಏರಿಕೆಗೆ ಪ್ರತಿಪಕ್ಷದ ವಾಗ್ದಾಳಿ