Select Your Language

Notifications

webdunia
webdunia
webdunia
webdunia

ರಾಜ್ಯಪಾಲರಿಂದ ಪರ್ಯಾಯ ಸರಕಾರ: ಕೇಂದ್ರಕ್ಕೆ ಮಮತಾ, ಕೇಜ್ರಿವಾಲ್ ವಾರ್ನಿಂಗ್

ರಾಜ್ಯಪಾಲರಿಂದ ಪರ್ಯಾಯ ಸರಕಾರ: ಕೇಂದ್ರಕ್ಕೆ ಮಮತಾ, ಕೇಜ್ರಿವಾಲ್ ವಾರ್ನಿಂಗ್
ನವದೆಹಲಿ , ಗುರುವಾರ, 1 ಅಕ್ಟೋಬರ್ 2015 (15:25 IST)
ದೆಹಲಿ ಗವರ್ನರ್ ನಜೀಬ್ ಜ್ಂಗ್ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಥ್ ನೀಡಿದ್ದಾರೆ. ಕೇಂದ್ರ ಸರಕಾರ ರಾಜ್ಯಪಾಲರ ಮೂಲಕ ರಾಜ್ಯಗಳಲ್ಲಿ ಪರ್ಯಾಯ ಸರಕಾರ ನಡೆಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
 
ಸಹಕಾರಿ ಪ್ರಜಾಪ್ರಭುತ್ವ ಮತ್ತು ಕೇಂದ್ರ- ರಾಜ್ಯ ಸರಕಾರಗಳ ಸಂಬಂಧ ಕುರಿತಂತೆ ಮಾತನಾಡಿದ ಉಭಯ ನಾಯಕರು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 
 
ತಮ್ಮನ್ನು ತಾವು ನೋವು ತುಂಬಿದ ವ್ಯಕ್ತಿ ಎಂದು ಬಣ್ಣಿಸಿಕೊಂಡ ಕೇಜ್ರಿವಾಲ್, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಭೂ ಮಾಲೀಕರಿಗೆ ಹೆಚ್ಚಿನ ಪರಿಹಾರ ದೊರಕಿಸಿಕೊಡು ತಮ್ಮ ಸರಕಾರದ ಪ್ರಯತ್ನಕ್ಕೆ ಜಂಗ್ ತಣ್ಣೀರು ಎರಚಿದರು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
 
ಕೇಂದ್ರ ಸರಕಾರ ಮತ್ತು ನಜೀಬ್ ಜಂಗ್ ಅಸಹಕಾರದಿಂದಾಗಿ ಆಮ್ ಆದ್ಮಿ ಪಕ್ಷದ ಸರಕಾರ ಹಾಕಿಕೊಂಡು ಜನಪರ ಕಾರ್ಯಕ್ರಮಗಳು ಜಾರಿಗೆ ಬರದಂತಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.
  
ಆಮ್ ಆದ್ಮಿ ಪಕ್ಷದ ಶಾಸಕರು ನೇರವಾಗಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವವರಾಗಿದ್ದಾರೆ. ಒಂದು ವೇಳೆ ಶಾಸಕರು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಲ್ಲಿ ಮತದಾರರಿಗೆ ಉತ್ತರ ನೀಡಬೇಕಾಗುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

Share this Story:

Follow Webdunia kannada