Select Your Language

Notifications

webdunia
webdunia
webdunia
webdunia

ಕಾಶ್ಮಿರ: ಮುಫ್ತಿ ಮೊಹಮ್ಮದ್ ಸಿಎಂ, ನಿರ್ಮಲ್ ಸಿಂಗ್ ಡಿಸಿಎಂ

ಕಾಶ್ಮಿರ: ಮುಫ್ತಿ ಮೊಹಮ್ಮದ್ ಸಿಎಂ, ನಿರ್ಮಲ್ ಸಿಂಗ್ ಡಿಸಿಎಂ
ನವದೆಹಲಿ , ಭಾನುವಾರ, 1 ಮಾರ್ಚ್ 2015 (12:10 IST)
ಜಮ್ಮು-ಕಾಶ್ಮೀರದಲ್ಲಿ ಮೊದಲ ಬಾರಿಗೆ ಪಿಡಿಪಿ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ಭಾನುವಾರ ಬೆಳಗ್ಗೆ ಪಿಡಿಪಿಯ ಮುಖ್ಯಸ್ಥ ಮುಫ್ತಿ ಮೊಹಮ್ಮದ್ ಸಯೀದ್ 12ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬಿಜೆಪಿಯ ನಿರ್ಮಲ್ ಕುಮಾರ್ ಸಿಂಗ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
 
ರಾಜಕೀಯ ಬಿಕ್ಕಟ್ಟಿನಿಂದಾಗಿ ಕಳೆದ 49 ದಿನಗಳಿಂದ ಕಣಿವೆ ರಾಜ್ಯದಲ್ಲಿದ್ದ ಗವರ್ನರ್ ಆಡಳಿತಕ್ಕೆ ಇಂದು ತೆರೆ ಬಿದ್ದಂತಾಗಿ, ಪಿಡಿಪಿ&ಬಿಜೆಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
 
ಪ್ರಧಾನಿ ನರೇಂದ್ರ ಮೋದಿ ಹಾಜರಿದ್ದ ಸಮಾರಂಭದಲ್ಲಿ ಮುಫ್ತಿಗೆ ಜಮ್ಮು-ಕಾಶ್ಮೀರ ರಾಜ್ಯಪಾಲ ನರೇಂದ್ರನಾಥ್ ವೊಹ್ರಾ ಪ್ರತಿಜ್ಞಾವಿಧಿ ಭೋದಿಸಿದರು. ಮುಫ್ತಿ ಜೊತೆಗೆ ಬಿಜೆಪಿಯ ನಿರ್ಮಲ್ ಕುಮಾರ್ ಸಿಂಗ್ ಡಿಸಿಎಂ ಆಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. 
 
ಸಜ್ಜಾದ್ ಲೊನ್, ಅಬ್ದುಲ್ ರೆಹಮಾನ್ ಭಟ್ ಸಚಿವರಾಗಿ, ಬಿಜೆಪಿ ಮುಖಂಡ ಚಂದ್ರಪ್ರಕಾಶ್ ಕ್ಯಾಬಿನೆಟ್ ದರ್ಜೆ ಸಚಿವರಾಗಿ, ಜಾವೇದ್ ಮುಸ್ತಾಫಾ ಮೀರ್, ಬಿಜೆಪಿ ಶಾಸಕ ಲಾಲ್ ಸಿಂಗ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
 
ಜಮ್ಮು ಯೂನಿರ್ವಸಿಟಿ ಝೋರಾವರ್ ಸಿಂಗ್ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಆಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
 
ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ:
 
ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಬಳಿಯ ಬಿಜೆಪಿ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
 

Share this Story:

Follow Webdunia kannada