Webdunia - Bharat's app for daily news and videos

Install App

ಅಪ್ರಾಪ್ತ ಮಗಳ ಕೈಕಾಲು ಕಟ್ಟಿ ಪಕ್ಕದ ಮನೆಯವನಿಂದ ರೇಪ್ ಮಾಡಿಸುತ್ತಿದ್ದ ತಾಯಿ

Webdunia
ಬುಧವಾರ, 11 ಮೇ 2016 (09:20 IST)
ಹಿಂದೆಂದೂ ಕೇಳರಿಯದಂತಹ, ಕಲ್ಪಿಸಲಾಗದ ಘಟನೆ ಇದು. ತಾಯಂದಿರ ದಿನಾಚರಣೆಯ ಒಂದು ದಿನದ ಬಳಿಕ ಈ ಹೇಯ ಕೃತ್ಯ ಬೆಳಕಿಗೆ ಬಂದಿದೆ. 
 
ತನ್ನ ಸ್ವಂತ ಮಗಳ ಕೈಕಾಲು ಕಟ್ಟಿ ಪಕ್ಕದ ಮನೆಯ ಯುವಕನಿಗೆ ಅತ್ಯಾಚಾರ ನಡೆಸಲು ತಾಯಿಯೇ ಅನುವು ಮಾಡಿಕೊಡುತ್ತಿದ್ದ ಘಟನೆ ಕಾನ್ಪುರದಲ್ಲಿ ನಡೆದಿದೆ. ಬಾಲಕಿ ಅಪ್ರಾಪ್ತಳಾಗಿದ್ದು ಕಳೆದೆರಡು ವರ್ಷಗಳಿಂದ ಮನೆಯಲ್ಲಿ ತಂದೆ ಇಲ್ಲದ ಸಮಯದಲ್ಲಿ ಈ ದೌರ್ಜನ್ಯ ನಡೆಯುತ್ತಿತ್ತು ಎಂದು ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಹೇಳಿಕೊಂಡಿದ್ದಾಳೆ.
 
ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಬಾಲಕಿ ಮೇಲೆ ಪಕ್ಕದ ಮನೆಯ ರಾಜು ಎಂಬ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಇದಕ್ಕೆ ಬಾಲಕಿಯ ಸ್ವಂತ ತಾಯಿ ಕೂಡ ಸಾಥ್ ನೀಡಿದ್ದು, ಯಾರಿಗಾದರೂ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದರು ಎನ್ನಲಾಗಿದೆ.
 
ಮನೆಯ ಮರ್ಯಾದೆ ಹಾಳಾಗುತ್ತದೆ ಮತ್ತು ತನ್ನ ತಂದೆ-ತಾಯಿ ಸಂಬಂಧ ಕೆಡುತ್ತದೆ ಎಂಬ ಕಾರಣಕ್ಕೆ ಎಲ್ಲ ದೌರ್ಜನ್ಯವನ್ನು ಸಹಿಸಿಕೊಂಡಿದ್ದ ಬಾಲಕಿಗೆ ತಾಯಿ ಆರೋಪಿ ರಾಜುವೊಂದಿಗೆ ಮದುವೆಯಾಗುವಂತೆ ಒತ್ತಡ ಹೇರಿದಾಗ ಬೇರೆ ದಾರಿ ಕಾಣದೆ ತಂದೆ ಬಳಿ ಎಲ್ಲ ವಿಷಯವನ್ನು ಹೇಳಿಕೊಂಡಿದ್ದಾಳೆ.
 
ಪತ್ನಿಯ ದುಷ್ಕೃತ್ಯದಿಂದ ಆಘಾತಗೊಂಡ ತಂದೆ ಪತ್ನಿ ಮತ್ತು ಆರೋಪಿ ರಾಜು ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 
 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯ ತಾಯಿ ಹಾಗೂ ಆರೋಪಿ ರಾಜು ಇಬ್ಬರನ್ನೂ ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments