Select Your Language

Notifications

webdunia
webdunia
webdunia
webdunia

ಕಂದಹಾರ್ ಹೈಜಾಕ್ ನಮ್ಮನ್ನು ಬೆಸ್ತು ಬೀಳಿಸಿತ್ತು : ಮಾಜಿ ರಾ ಮುಖ್ಯಸ್ಥ

ಕಂದಹಾರ್ ಹೈಜಾಕ್ ನಮ್ಮನ್ನು ಬೆಸ್ತು ಬೀಳಿಸಿತ್ತು : ಮಾಜಿ ರಾ ಮುಖ್ಯಸ್ಥ
ನವದೆಹಲಿ , ಶುಕ್ರವಾರ, 3 ಜುಲೈ 2015 (17:26 IST)
"ಕಂದಹಾರ್ ಹೈಜಾಕ್ ನಮ್ಮನ್ನು ಗೊಂದಲಕ್ಕೀಡು ಮಾಡಿತ್ತು. ಜೀವ ಹಾನಿಯಾಗುವ ಭಯದಿಂದ ಯಾರು ಕೂಡ ನಿರ್ಣಯವನ್ನು ತೆಗೆದುಕೊಳ್ಳಲು ತಯಾರಿರಲಿಲ್ಲ", ಎಂದು ಬೇಹುಗಾರಿಕಾ ಸಂಸ್ಥೆ 'ರಾ'ದ ಮಾಜಿ ಮುಖ್ಯಸ್ಥ ಎ.ಎಸ್ ದುಲತ್ ತಿಳಿಸಿದ್ದಾರೆ. 

ಇಂಡಿಯನ್ ಏರ್‌ಲೈನ್ಸ್ ಐಸಿ 814 ವಿಮಾನ 1999 ಅಪಹರಿಸಲ್ಪಟ್ಟಾಗ ನೇಮಕ ಮಾಡಲಾಗಿದ್ದ ಬಿಕ್ಕಟ್ಟು ನಿರ್ವಹಣಾ ತಂಡದಲ್ಲಿ  ದುಲತ್ ಸದಸ್ಯರಾಗಿದ್ದರು. "ವಿಮಾನವನ್ನು ಅಮೃತಸರ್‌ನಿಂದ ಹೋಗಲು ಬಿಡಬಾರದು ಎಂದು ನಿರ್ಣಯಿಸುವಲ್ಲಿ ನಾವು ಸೋತೆವು', ಎಂದು ದುಲತ್ ಹೇಳಿದ್ದಾರೆ. 
 
"ನಾವೆಲ್ಲರೂ ಗೊಂದಲದಲ್ಲಿದ್ದೆವು. ಜನರ ಜೀವ ಭದ್ರತೆಯ ಚಿಂತೆ ಎಲ್ಲರನ್ನು ಸತಾಯಿಸುತ್ತಿತ್ತು. ವಾಜಪೇಯಿ ಸರಕಾರದಲ್ಲಿ ಯಾರು ಕೂಡ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಯಾವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂಬ ಗೊಂದಲದಲ್ಲಿದ್ದರು", ಎಂದು ಸಂದರ್ಶನವೊಂದರಲ್ಲಿ ದುಲತ್ ಹೇಳಿದ್ದಾರೆ. 
 
"ಪ್ರಾರಂಭದಲ್ಲಿ ಭಯೋತ್ಪಾದಕರು 105 ಉಗ್ರರ ಬಿಡುಗಡೆಯ ಬೇಡಿಕೆಯನ್ನಿಟ್ಟಿದ್ದರು. ನಂತರ ಅವರು 35 ಉಗ್ರರ ಬಿಡುಗಡೆಗೆ ಬೇಡಿಕೆ ಇಟ್ಟರು. ಅದಕ್ಕೂ ಒಪ್ಪದಿದ್ದಾಗ 15 ಉಗ್ರರ ಬಿಡುಗಡೆಗೆ ಬೇಡಿಕೆ ಇಟ್ಟ ಉಗ್ರರು ಕೊನೆಗೆ ಮೂವರು ಉಗ್ರರ ಬಿಡುಗಡೆ ಮಾಡಿದರೆ ವಿಮಾನವನ್ನು ಬಿಟ್ಟು ಕೊಡುವ ಒಪ್ಪಂದಕ್ಕೆ ಒಪ್ಪಿದರು. ಕಂದಹಾರ್‌ಗೆ ಹೋದ ರಾ ತಂಡ ಪ್ರಕರಣಕ್ಕೆ ಅಂತ್ಯ ನೀಡಲು ಯಶಸ್ವಿಯಾಯಿತು", ಎಂದು ಅವರು ತಿಳಿಸಿದ್ದಾರೆ.
 
"ಒಪ್ಪಂದದಂತೆ ಮೂವರು ಉಗ್ರರನ್ನು ಬಿಡುಗಡೆ ಮಾಡಬೇಕಿತ್ತು. ಅವರಲ್ಲಿ ಇಬ್ಬರು ಜಮ್ಮು ಕಾಶ್ಮೀರ ಜೈಲಿನಲ್ಲಿ ಬಂಧಿಯಾಗಿದ್ದರು. ಪ್ರಯಾಣಿಕರನ್ನು ಉಳಿಸಲು ಮೂವರು ಉಗ್ರರನ್ನು ಬಿಡುಗಡೆ ಮಾಡಲು ತೆಗೆದುಕೊಂಡ ನಿರ್ಧಾರವನ್ನು ಜಮ್ಮು ಸಿಎಂ ಫಾರುಕ್ ಅಬ್ದುಲ್ಲಾಗೆ ತಿಳಿಸಿದೆ. ಆಗವರು ನನ್ನ ಮೇಲೆ ಅವರು ರೇಗಾಡಿದರು",  ಎಂದು ದುಲತ್ ಹೇಳಿದ್ದಾರೆ. 

Share this Story:

Follow Webdunia kannada