Webdunia - Bharat's app for daily news and videos

Install App

ಜೂನಿಯರ್ ಹಾಕಿ ವಿಶ್ವಕಪ್ ಗೆದ್ದ ತಂಡಕ್ಕೆ ಮೋದಿ ಅಭಿನಂದನೆ

Webdunia
ಸೋಮವಾರ, 19 ಡಿಸೆಂಬರ್ 2016 (12:40 IST)
15 ವರ್ಷಗಳ ಅಂತರದ ಬಳಿಕ ಭಾರತಕ್ಕೆ ವಿಶ್ವಕಪ್ ತಂದಕೊಟ್ಟ ಜೂನಿಯರ್ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತ ಪ್ರಶಸ್ತಿ ಗೆಲ್ಲುತ್ತಿದ್ದಂತೆ ಪ್ರಧಾನಿ ಮೋದಿ, ನಮ್ಮ ಯುವತಂಡದ ಬಗ್ಗೆ ಅತ್ಯಂತ ಹೆಮ್ಮೆಯಾಗುತ್ತಿದೆ. ವಿಶ್ವಕಪ್ ಗೆದ್ದ ನಮ್ಮ 
ಜೂನಿಯರ್ ಹಾಕಿ ತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
 
ಲಕ್ನೋದಲ್ಲಿ ನಡೆದ ಕಿರಿಯರ ವಿಶ್ವಕಪ್ ಹಾಕಿ ಪಂದ್ಯಾವಳಿಯ ಫೈನಲ್ ನಲ್ಲಿ ಭಾರತ ತಂಡ ಬೆಲ್ಜಿಯಂ ತಂಡವನ್ನು 2-1 ಅಂತರದಿಂದ ಸೋಲಿಸಿತ್ತು. ಈ ಮೂಲಕ 15 ವರ್ಷಗಳ ಬರ ನೀಗಿಸಿತ್ತು.
 
ತವರಿನ ಪ್ರೇಕ್ಷಕರೆದುರು ವಿಜೃಂಭಿಸಿದ ಭಾರತದ ಹುಡುಗರ ಮೊದಲಾರ್ಧದಲ್ಲಿಯೇ ಎರಡು ಗೋಲು ಗಳಿಸಿದರು. ಬೆಲ್ಜಿಯಂ ಪಂದ್ಯ ಅಂತ್ಯವಾಗುವ ಕೆಲವೇ ಕ್ಷಣಗಳ ಮೊದಲು ಒಂದು ಗೋಲು ಬಾರಿಸಿ ಮಾನ ಉಳಿಸಿಕೊಂಡಿತು.
 
ಭಾರತದ ಪರ 8 ನೇ ನಿಮಿಷದಲ್ಲಿ ಗುರ್ಜಂತ್ ಸಿಂಗ್ ಮತ್ತು ಸಿಮ್ರತ್ ಜಿತ್ ಸಿಂಗ್ 22 ನೇ ನಿಮಿಷದಲ್ಲಿ ಒಂದು ಗೋಲು ಬಾರಿಸಿದರು. ವಿಶೇಷವೆಂದರೆ ಪಂದ್ಯ ವೀಕ್ಷಿಸಲು ಖುದ್ದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ಆಗಮಿಸಿದ್ದರು.
 
ಈ ಹಿಂದೆ 2001ರಲ್ಲಿ ಭಾರತ ಕಿರಿಯರ ತಂಡ ವಿಶ್ವಕಪ್ ಹಾಕಿಯನ್ನು ಎತ್ತಿ ಹಿಡಿದಿತ್ತು. ಹಿರಿಯರ ವಿಭಾಗದಲ್ಲಿ ಭಾರತ 8 ಬಾರಿ ಒಲಿಂಪಿಕ್ ಚಾಂಪಿಯನ್ ಆಗಿದ್ದು ಒಂದು ಬಾರಿ ವಿಶ್ವ ಕಪ್‌ನ್ನು ಗೆದ್ದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋಸ್ಟ್ ವಾಂಟೆಡ್‌ ಗ್ಯಾಂಗ್‌ಸ್ಟರ್‌ ರೂಮಿ ವೊಗ್ರಾ ಎನ್‌ಕೌಂಟರ್‌ನಲ್ಲಿ ಸಾವು

ಸಿದ್ದರಾಮಯ್ಯನವರೇ ಯಾವುದೇ ಕಾರಣಕ್ಕೂ ಡಿಕೆಶಿ ಕೈಗೆ ಕರ್ನಾಟಕವನ್ನು ನೀಡಬೇಡಿ: ಬಸನಗೌಡ ಪಾಟೀಲ್

ಕುಮಾರಸ್ವಾಮಿ ಪತ್ರಕ್ಕೆ ಸಿಕ್ತು ಕೇಂದ್ರದಿಂದ ಸ್ಪಂದನೆ: ಮಾವು ಬೆಳೆಗಾರರಿಗೆ ಗುಡ್‌ನ್ಯೂಸ್‌

ವಾಟ್ಸಾಪ್‌ ಸ್ಟೇಟಸ್‌ಗೆ ರೀಲ್ಸ್ ಅಪ್ಲೋಡ್ ಮಾಡಿದ್ದಕ್ಕೆ ಪ್ರಿಯಕರ ಕಿರಿಕಿರಿ: ಯುವತಿ ಸಾವಿಗೆ ಶರಣು

ರೈಲ್ವೆ ಪ್ರಯಾಣಿಕರಿಗೆ ಬಿಗ್ ಶಾಕ್‌: ಜುಲೈ 1ರಿಂದ ಟಿಕೆಟ್ ದರದಲ್ಲಿ ಹೆಚ್ಚಳ

ಮುಂದಿನ ಸುದ್ದಿ
Show comments