Webdunia - Bharat's app for daily news and videos

Install App

ಆಪ್ ಶಾಸಕ ಸೋಮನಾಥ್ ಭಾರ್ತಿ ವಿರುದ್ಧ ತನಿಖೆಗೆ ಜಂಗ್ ಗ್ರೀನ್ ಸಿಗ್ನಲ್

Webdunia
ಮಂಗಳವಾರ, 4 ಆಗಸ್ಟ್ 2015 (15:00 IST)
ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿ ವಿರುದ್ಧ ತನಿಖೆ ನಡೆಸುವಂತೆ ಲೆಫ್ಟಿನೆಂಟ್ ಗೌವರ್ನರ್ ನಜೀಬ್ ಜಂಗ್ ದೆಹಲಿ ಪೊಲೀಸರಿಗೆ ಅನುಮತಿ ನೀಡಿರುವುದು ಆಮ್ ಆದ್ಮಿ ಪಕ್ಷದ ವಲಯದಲ್ಲಿ ಕೋಲಾಹಲ ಕೆರಳಿಸಿದೆ. 
 
ನವದೆಹಲಿಯ ಖಿರ್ಕಿ ಪ್ರದೇಶದಲ್ಲಿ ಮಧ್ಯರಾತ್ರಿ ನಡೆದ ದಾಳಿ ಪ್ರಕರಣದಲ್ಲಿ ಶಾಸಕ ಭಾರ್ತಿ ಪಾತ್ರದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಕೋರಿದ್ದಾರೆ.
 
ನಜೀಬ್ ಜಂಗ್ ಇಂದು ಅಧಿಕೃತ ನಿವಾಸದಲ್ಲಿ ಶಾಸಕ ಭಾರ್ತಿ ವಿರುದ್ಧ ತನಿಖೆಗೆ ಆದೇಶಿಸಿರುವುದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಜಂಗ್ ಮಧ್ಯೆ ಮತ್ತೊಂದು ಜಂಗ್ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.
 
ಸೋಮನಾಥ್ ಭಾರ್ತಿ ಜನಪ್ರತಿನಿಧಿಯಾಗಿದ್ದರಿಂದ ಅವರ ವಿರುದ್ಧ ವಿಚಾರಣೆ ನಡೆಸಲು ಲೆಫ್ಟಿನೆಂಟ್ ಗೌವರ್ನರ್ ಅನುಮತಿ ಅಗತ್ಯವಾಗಿದೆ ಎನ್ನಲಾಗಿದೆ. 
 
ಆಮ್ ಆದ್ಮಿ ಪಕ್ಷದ ಶಾಸಕ ಭಾರ್ತಿ ಪಕ್ಷದ ಇತರ ಪದಾಧಿಕಾರಿಗಳೊಂದಿಗೆ ಖಿರ್ಕಿ ಪ್ರದೇಶಕ್ಕೆ ಬೆಳಗಿನ ಜಾವ 3 ಗಂಟೆಗೆ ತೆರಳಿ, ಆಫ್ರಿಕನ್ ಮೂಲದ ವ್ಯಕ್ತಿಗಳು ವಾಸವಾಗಿದ್ದ ಮನೆಗಳ ಮೇಲೆ ರೈಡ್ ಮಾಡಿದ್ದರು.  
 
ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆಫ್ರಿಕನ್ ವಾಸಿಗಳು ಪೊಲೀಸರ ಮುಂದೆ ಆರೋಪಿಸಿದ್ದರು.
 
ಮಧ್ಯರಾತ್ರಿ ರೈಡ್‌ಗೆ ಸಂಬಂಧಿಸಿದಂತೆ ಸೋಮನಾಥ್ ಭಾರ್ತಿ ಸೇರಿದಂತೆ 17 ಮಂದಿಯ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ