Select Your Language

Notifications

webdunia
webdunia
webdunia
webdunia

ಜೇಟ್ಲಿಗೆ ತಿರುಗೇಟು ನೀಡಿದ ಜೋಷಿ: ರಾಜ್ಯಸಭೆಯ ಅಧಿಕಾರ ಕಡಿತಗೊಳಿಸುವುದು ಸಲ್ಲದು

ಜೇಟ್ಲಿಗೆ ತಿರುಗೇಟು ನೀಡಿದ ಜೋಷಿ: ರಾಜ್ಯಸಭೆಯ ಅಧಿಕಾರ ಕಡಿತಗೊಳಿಸುವುದು ಸಲ್ಲದು
ನವದೆಹಲಿ , ಮಂಗಳವಾರ, 24 ನವೆಂಬರ್ 2015 (16:06 IST)
ರಾಜ್ಯಸಭೆಯ ಅಧಿಕಾರವನ್ನು ಮೊಟಕುಗೊಳಿಸಬೇಕು ಎನ್ನುವ ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಹೇಳಿಕೆಯನ್ನು ತಳ್ಳಿಹಾಕಿದ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ, ರಾಜ್ಯಸಭೆಯ ಅಧಿಕಾರವನ್ನು ಮೊಟಕುಗೊಳಿಸುವುದರಿಂದ ಸಂವಿಧಾನಕ್ಕೆ ಧಕ್ಕೆಯಾಗಲಿದೆ ಎಂದು ಹೇಳಿದ್ದಾರೆ. 
 
ಜನರಿಂದ ನೇರವಾಗಿ ಸಂಸತ್ತಿಗೆ ಆಯ್ಕೆಯಾದಂತಹ ಲೋಕಸಭೆಯ ತೀರ್ಮಾನವನ್ನು, ಪರೋಕ್ಷವಾಗಿ ಆಯ್ಕೆಯಾಗಿ ಬಂದ ರಾಜ್ಯ ಸಭೆಯ ಸದಸ್ಯರು ಪ್ರಶ್ನಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಜೇಟ್ಲಿ ಬಹಿರಂಗವಾಗಿ ಪ್ರಶ್ನಿಸಿದ್ದರು.
 
ನೇರವಾಗಿ ಅಥವಾ ಪರೋಕ್ಷವಾಗಿ ಆಯ್ಕೆಯಾದವರು ಎನ್ನುವ ವಿಂಗಡಣೆ ಸರಿಯಲ್ಲ. ರಾಜ್ಯಸಭೆ ಸಂಸತ್ತಿಗೆ ಮುಕುಟವಿದ್ದಂತೆ. ರಾಜ್ಯಸಭೆ ದೇಶದ ಆಯಾ ರಾಜ್ಯಗಳ ಸಭೆಯಂತೆ. ರಾಜ್ಯಗಳಲ್ಲಿರುವ ಸಮಸ್ಯೆಗಳಿಗೆ ಪ್ರತಿಧ್ವನಿಸುವಂತಹ ಸದನ. ಸಂವಿಧಾನದಲ್ಲೂ ಕೂಡಾ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಭಿನ್ನತೆಗಳಿಲ್ಲ ಎಂದು ಜೋಷಿ ತಿಳಿಸಿದ್ದಾರೆ.  
 
ಲೋಕಸಭೆಯ ತೀರ್ಮಾನವನ್ನು ಪರೋಕ್ಷವಾಗಿ ಆಯ್ಕೆಯಾಗಿ ಬಂದ ರಾಜ್ಯ ಸಭೆಯ ಸದಸ್ಯರು ಪ್ರಶ್ನಿಸುವುದು ಎಷ್ಟರಮಟ್ಟಿಗೆ ಸರಿ. ಇದರಿಂದ ಲೋಕಸಭೆಯ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಸಚಿವ ಜೇಟ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

Share this Story:

Follow Webdunia kannada