Select Your Language

Notifications

webdunia
webdunia
webdunia
webdunia

ಶಂಕಿತ ಮಾವೋವಾದಿಗಳಿಂದ ರೈಲು ಹಳಿ ಸ್ಫೋಟ:ಹಳಿ ತಪ್ಪಿದ ಪಲಾಮು ಎಕ್ಸ್‌ಪ್ರೆಸ್

ಶಂಕಿತ ಮಾವೋವಾದಿಗಳಿಂದ ರೈಲು ಹಳಿ ಸ್ಫೋಟ:ಹಳಿ ತಪ್ಪಿದ ಪಲಾಮು ಎಕ್ಸ್‌ಪ್ರೆಸ್
ಜಾರ್ಖಂಡ್ , ಬುಧವಾರ, 24 ಜೂನ್ 2015 (13:37 IST)
ರಾಜ್ಯದ ಲಾಟೇಹಾರ್ ಜಿಲ್ಲೆಯಲ್ಲಿ ಶಂಕಿತ ಮಾವೋವಾದಿಗಳು ರೈಲ್ವೆ ಹಳಿಯನ್ನು ಸ್ಫೋಟಿಸಿದ ಹಿನ್ನೆಲೆಯಲ್ಲಿ ಪಾಟ್ನಾದಿಂದ ತೆರಳುತ್ತಿದ್ದ ಪಲಾಮು ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು ಹಳಿ ತಪ್ಪಿದ ಘಟನೆ ವರದಿಯಾಗಿದೆ.  
 
ಬಾರ್ಕಾಕಾನಾದಿಂದ ಪಾಟ್ನಾಗೆ ತೆರಳುತ್ತಿದ್ದ ರೈಲಿನ ಇಂಜಿನ್ ಹಾಗೂ ಮೂರು ಬೋಗಿಗಳು ಹಳಿ ತಪ್ಪಿವೆ ಎಂದು ಛಿಪಾಡೊಹರ್ ರೈಲ್ವೆ ನಿಲ್ದಾಣದ ಅಧಿಕಾರಿ ಆರ್.ಪಿ.ಭಾಗೋಶಿಯಾ ತಿಳಿಸಿದ್ದಾರೆ. 
 
ಇಕ್ಕಟ್ಟಾದ ಪ್ರದೇಶದಲ್ಲಿ ರೈಲು ಹಳಿ ತಪ್ಪಿದ್ದರಿಂದ ಪರಿಹಾರ ಕಾರ್ಯಗಳಲ್ಲಿ ವಿಳಂಬವಾಗುತ್ತಿದೆ. ರಿಲೀಫ್ ರೈಲನ್ನು ಘಟನಾ ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.
 
ಆದರೆ, ಘಟನೆಯಲ್ಲಿ ಯಾವೊಬ್ಬ ಪ್ರಯಾಣಿಕರಿಗೂ ಗಾಯಗಳಾಗಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕ  ಸಾಕೇತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
 
ಛಿಪಾಡೊಹರ್ ಮತ್ತು ಬಾರ್ವಾದ್ ರೈಲು ನಿಲ್ದಾಣಗಳ ಮಧ್ಯೆಯಿರುವ ಕುಚಿಲಾ ಗ್ರಾಮದಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ರೈಲು ದುರ್ಘಟನೆ ಸಂಭವಿಸಿದೆ.
 

Share this Story:

Follow Webdunia kannada