Select Your Language

Notifications

webdunia
webdunia
webdunia
webdunia

ಇದು ಒಕ್ಕೂಟ ವ್ಯವಸ್ಥೆಯ ಮೇಲಿನ ರೇಪ್; ಮೋದಿ ಮುಂದೆ ಮೂದಲಿಸಿಕೊಂಡ ಜಾರ್ಖಂಡ್ ಸಿಎಂ

ಇದು ಒಕ್ಕೂಟ ವ್ಯವಸ್ಥೆಯ ಮೇಲಿನ ರೇಪ್; ಮೋದಿ ಮುಂದೆ ಮೂದಲಿಸಿಕೊಂಡ  ಜಾರ್ಖಂಡ್ ಸಿಎಂ
ಚಂದೀಗಡ್ , ಶುಕ್ರವಾರ, 22 ಆಗಸ್ಟ್ 2014 (11:30 IST)
ಪ್ರಧಾನಿ ಮೋದಿ ಜತೆ ವೇದಿಕೆ ಹಂಚಿಕೊಳ್ಳುವ ಬಿಜೆಪಿಯೇತರ ಮುಖ್ಯಮಂತ್ರಿಗಳು ಅಪಹಾಸ್ಯಕ್ಕೀಡಾಗುವ ಪ್ರಕ್ರಿಯೆ ಮುಂದುವರೆದಿದ್ದು,  ಈ ಸಾಲಿಗೆ ಮೂರನೆಯವರಾಗಿ, ಸೇರ್ಪಡೆಯಾಗಿರುವವರು  ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್.ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿಎಂ ಇದು  ದೇಶದ ಒಕ್ಕೂಟ ವ್ಯವಸ್ಥೆಯ ಮೇಲಿನ ಅತ್ಯಾಚಾರ ಎಂದು ಹೇಳಿದ್ದಾರೆ. 

ಹರಿಯಾಣ , ಮಹಾರಾಷ್ಟ್ರ ಮುಖ್ಯಮಂತ್ರಿಗಳ ಬಳಿಕ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಕೂಡ ನೆರೆದ ಜನರಿಂದ ಅಪಹಾಸ್ಯಕ್ಕೆ ಒಳಗಾಗಿದ್ದಾರೆ. 
 
ರಾಜ್ಯ ರಾಜಧಾನಿ ರಾಂಚಿಯಲ್ಲಿ ಗುರುವಾರ ನಡೆದ ವಿದ್ಯುತ್ ಯೋಜನೆ ಉದ್ಘಾಟನೆ ಸಮಾರಂಭದಲ್ಲಿ ಸೊರೆನ್ ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆಯೇ, ಸಭಿಕರು 'ಮೋದಿ, ಮೋದಿ' ಎಂದು ಘೋಷಣೆ ಕೂಗಲು ಪ್ರಾರಂಭಿಸಿದರು. ಸೊರೆನ್ ಮಾತುಗಳ ಉದ್ದಕ್ಕೂ ಈ ಕೂಗು ನಿಲ್ಲಲೇ ಇಲ್ಲ. ಸೊರೆನ್‌ಗೆ ಮಾತನಾಡಲು ಅವಕಾಶ ಕೊಡಿ ಎಂದು ಸ್ವತಃ  ಮೋದಿ ಜನರಲ್ಲಿ ವಿನಂತಿಸಿಕೊಂಡರು ಮತ್ತು ಸ್ಥಳೀಯ ಬಿಜೆಪಿ ನಾಯಕರು ಕೂಡ ಜನರನ್ನು ಸುಮ್ಮನಾಗಿಸಲು ಪ್ರಯತ್ನಪಟ್ಟರು. ಆದರೆ  ಮೋದಿ ಅಭಿಮಾನಿಗಳು ಸುಮ್ಮನಾಗಲೇ ಇಲ್ಲ. 
 
ಈ ಘಟನೆಯಿಂದ ತೀವೃ ಉದಾಸರಾದ ಸಿಎಂ "ಇದು  ದೇಶದ ಒಕ್ಕೂಟ ವ್ಯವಸ್ಥೆಯ ಮೇಲಿನ ಅತ್ಯಾಚಾರ. ಆದರೆ ಬಿಜೆಪಿಯೇತರ ರಾಜ್ಯಗಳಲ್ಲಿ ಇದು ಟ್ರೆಂಡ್ ಆಗಿ ಬೆಳೆಯುವ ಲಕ್ಷಣಗಳು ಕಾಣುತ್ತಿವೆ" ಎಂದು ಹೇಳಿದರು. 
 
ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ತಾವು ಈ ಮೊದಲು ಹೇಳಿಕೊಂಡಂತೆ, ಗುರುವಾರ  ನಾಗ್ಪುರದಲ್ಲಿ ನಡೆದ ಮೆಟ್ರೊ ರೈಲು ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. 
 
ಪ್ರಧಾನಿ ನರೇಂದ್ರ ಮೋದಿಯವರೊಡನೆ ಸಮಾರಂಭದಲ್ಲಿ ಭಾಗವಹಿಸಿದ ವೇಳೆ ದಾಖಲಾದ ಅವಮಾನಕರ ಘಟನೆಗಳ ಹಿನ್ನೆಲೆಯಲ್ಲಿ ಕೆಲವು ಕಾಂಗ್ರೆಸ್ ಮುಖ್ಯಮಂತ್ರಿಗಳು  ಮೋದಿ ಅವರಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಕೂಡ ಪಿಎಂ ಜತೆ ಸಭೆಗಳಲ್ಲಿ ಭಾಗವಹಿಸಬೇಡಿ ಎಂದು ತಮ್ಮ ಪಕ್ಷದ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದೆ. 
 
ಕಾಂಗ್ರೆಸ್ಸಿನ ಈ ಸೂಚನೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ  ಈ ರೀತಿಯ ಘಟನೆಗಳು ತಮ್ಮ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸರಕಾರ ಮತ್ತು ಮುಖ್ಯಮಂತ್ರಿಗಳ ಬಗ್ಗೆ ಜನರಿಗಿರುವ ಆಕ್ರೋಶವನ್ನು ಪ್ರತಿಬಿಂಬಿಸುತ್ತವೆ. ಯುಪಿಎ ಸರಕಾರ ಅಸ್ತಿತ್ವದಲ್ಲಿದ್ದಾಗ ಬಿಜೆಪಿ ಮುಖ್ಯಮಂತ್ರಿಗಳು ಕಾಂಗ್ರೆಸ್ ಪ್ರಧಾನಿ ಮನ್ ಮೋಹನ್ ಸಿಂಗ್ ಜತೆಗಿನ  ಸಮಾರಂಭಗಳಿಂದ ತಮ್ಮನ್ನು ತಾವು ಬಹಿಷ್ಕರಿಸಿಕೊಂಡಿರಲಿಲ್ಲ. ಅತಿ ಹಳೆಯ ಪಕ್ಷ ಪ್ರಧಾನಿ ಮೋದಿಯವರ ಜತೆ ವೇದಿಕೆ ಹಂಚಿಕೊಳ್ಳುವುದರಿಂದ ದೂರ ಓಡಬಹುದು. ಆದರೆ ಅವರ ಜನಪ್ರಿಯತೆಯಿಂದ ದೂರ ಓಡಲಾಗದು  ಎಂದು ಹೇಳಿತ್ತು. 

Share this Story:

Follow Webdunia kannada