Webdunia - Bharat's app for daily news and videos

Install App

ಅಮ್ಮ ಮತ್ತೆ ಸಿಎಂ ಆಗಲೆಂದು ಮಹಾಗಜಪೂಜಾ ಯಾಗ

Webdunia
ಸೋಮವಾರ, 30 ಮಾರ್ಚ್ 2015 (12:23 IST)
ಜಯಲಲಲಿತಾ ಮತ್ತೆ ಮುಖ್ಯಮಂತ್ರಿಯಾಗಲೆಂದು ದೇವರಲ್ಲಿ ಹರಕೆ ಹೊತ್ತುಕೊಂಡು ಎಐಡಿಎಂಕೆ ನಾಯಕರು ಮತ್ತು ಕಾರ್ಯಕರ್ತರು ಇಂದು ಕೊಯಮತ್ತೂರಿನಲ್ಲಿ ಮಹಾಗಜಪೂಜಾ ಯಾಗವನ್ನು ಕೈಗೊಂಡರು.

ಕ್ರಿಯಾವಿಧಿಗಳ ಭಾಗವಾಗಿ ಕೇರಳದ ಪಾಲಕ್ಕಾಡ್‌ನಿಂದ ತರಿಸಲಾಗಿದ್ದ  ಐದು ಆನೆಗಳನ್ನು ಯಾಗ ನಡೆಯುವ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ವೈದಿಕರ ವೇದ, ಮಂತ್ರಪಠನಗಳ ನಡುವೆ ಯಾಗ ಎರಡು ಗಂಟೆಗಳ ಕಾಲ ನಡೆಯಿತು. 
 
ರಾಜ್ಯ ಪೌರಾಡಳಿತ ಸಚಿವ ಎಸ್‌ಪಿ.ವೇಲುಮಣಿ, ನಗರದ ಮೇಯರ್ ಪಿ ರಾಜ್ ಕುಮಾರ್, ಪಕ್ಷದ ಕೆಲ ಸಂಸದರು ಮತ್ತು ಶಾಸಕರು ಅಲ್ಲದ ಪಕ್ಷದ ನೂರಾರು ಕಾರ್ಯಕರ್ತರು ಸ್ಥಳದಲ್ಲಿ ಉಪಸ್ಥಿತರಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. 
 
ಹಿಂದೂ ಪಂಚಾಂಗದ ಪ್ರಕಾರ ಮಾರ್ಚ್ 4 ರಂದು ಜಯಲಲಿತಾರವರ ಜನ್ಮದಿನವಾಗಿದ್ದು ಆ ದಿನ ಮಾಜಿ ಮುಖ್ಯಮಂತ್ರಿಗೆ ಧೀರ್ಘಾಯುಷ್ಯ ಕೋರಿ ಮತ್ತು ಅವರು ಪುನಃ ಮುಖ್ಯಮಂತ್ರಿಯಾಗಬೇಕೆಂಬ ಬಯಕೆಯೊಂದಿಗೆ  ರಾಜ್ಯಾದ್ಯಂತ ವಿವಿಧ ರೀತಿಯ ಪೂಜೆಗಳನ್ನು ಮತ್ತು ಹೋಮಹವನಗಳನ್ನು ನಡೆಸಲು ಪಕ್ಷದ ಕಾರ್ಯಕರ್ತರು, ಸಂಸದರು, ಶಾಸಕರು ನಿರ್ಧರಿಸಿದ್ದಾರೆ. 
 
ಅಕ್ರಮ ಸಂಪತ್ತುಗಳಿಕೆ ಹಿನ್ನೆಲೆಯಲ್ಲಿ ಜೈಲು ಪಾಲಾಗಿದ್ದ ಜಯಲಲಿತಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments