Select Your Language

Notifications

webdunia
webdunia
webdunia
webdunia

ಹಾಲುಣಿಸುವ ತಾಯಂದಿರಿಗೆ ಜಯಾ ತಂದಿದ್ದಾರೆ ಹೊಸ ಕಲ್ಯಾಣ ಯೋಜನೆ

ಹಾಲುಣಿಸುವ ತಾಯಂದಿರಿಗೆ ಜಯಾ ತಂದಿದ್ದಾರೆ ಹೊಸ ಕಲ್ಯಾಣ ಯೋಜನೆ
ಇಂದೋರ್ , ಶನಿವಾರ, 4 ಜುಲೈ 2015 (17:52 IST)
ಮರಳಿ ಮುಖ್ಯಮಂತ್ರಿಯಾಗಿರುವ ಎಐಎಡಿಎಂಕೆ ಮುಖ್ಯಸ್ಥೆ ಹಾಲುಣಿಸುವ ತಾಯಂದಿರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ತಾಯಂದಿರು ಪ್ರಯಾಣ 
ಮಾಡುವಾಗ ಮಗುವಿಗೆ ಸ್ತನ್ಯಪಾನ ಮಾಡಿಸಲು ಸಹಾಯವಾಗುವಂತೆ ಬಸ್ ನಿಲ್ದಾಣಗಳಲ್ಲಿ ಮತ್ತು ಟರ್ಮಿನಲ್‌ಗಳಲ್ಲಿ ಹಾಲುಣಿಸುವ ಕೊಠಡಿ ಸ್ಥಾಪನೆಗೆ ಜಯಾ ಆದೇಶ ನೀಡಿದ್ದಾರೆ. 

ಆಗಾಗ ಸಾರ್ವಜನಿಕರಿಗೆ ಅನುಕೂಲಕರವಾದ ವಿಭಿನ್ನ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವಲ್ಲಿ ಜನಪ್ರಿಯರಾಗಿರುವ ಜಯಲಲಿತಾ ಇದೀಗ ನವಜಾತ ಶಿಶುಗಳ ತಾಯಂದಿರಿಗೆ ಸಹಾಯ ಹಸ್ತ ಚಾಚ ಹೊರಟಿದ್ದಾರೆ. ನೂತನವಾದ ಈ ಯೋಜನೆಯನ್ನು ತಮಿಳುನಾಡು ಮುಖ್ಯಮಂತ್ರಿ ಆಗಸ್ಟ್ ಮೊದಲ ವಾರದಲ್ಲಿ ಪ್ರಾರಂಭವಾಗುವ ವಿಶ್ವ ಸ್ತನ್ಯ ವಾರದ ಆರಂಭದ ದಿನದಿಂದ ಕಾರ್ಯಗತವಾಗಬೇಕೆಂದು ಆದೇಶಿಸಿದ್ದಾರೆ.
 
ಮುಖ್ಯಮಂತ್ರಿಯಾಗಿ ಮರಳಿ ಪಟ್ಟಕೇರಿದಾಗಿನಿಂದ ಜಯಾ ಹಲವು ಯೋಜನೆಗಳನ್ನು ಪರಿಚಯಿಸಿದ್ದಾರೆ. ಎ ಗ್ರೇಡ್  'ಪಾರಿವಾಳ ಬಟಾಣಿ' ಮತ್ತು 'ಕಪ್ಪು ಕಡಲೆ'ಗಳ 500 ಗ್ರಾಂ ಪ್ಯಾಕೆಟ್‌ನ್ನು ಸಬ್ಸಿಡಿ ದರದಲ್ಲಿ ಕ್ರಮವಾಗಿ ರೂ 53.50 ಮತ್ತು ರೂ 56 ದರದಲ್ಲಿ 
ಮಾರಾಟ ಮಾಡುವ ಯೋಜನೆಯನ್ನವರು ಜಾರಿಗೆ ತಂದಿದ್ದಾರೆ. 
 
ಬಡವರಿಗೆ  ವಸತಿ, ರಸ್ತೆ ಅಭಿವೃದ್ಧಿ (18,000 ಕೋಟಿ ವೆಚ್ಚ) ಕುಡಿಯುವ ನೀರು (77.13 ಕೋಟಿ) ಮತ್ತು 100 ಕೋಟಿ ರೂಪಾಯಿ ವೆಚ್ಚದಲ್ಲಿ ಜೀವನಾಧಾರ ತರಬೇತಿ ಕಾರ್ಯಕ್ರಮಗಳ ಆಯೋಜನೆಗೆ ಸರಕಾರ ಮುಂದಾಗಿದೆ.

Share this Story:

Follow Webdunia kannada