Webdunia - Bharat's app for daily news and videos

Install App

ಜಯಾ ಆರೋಗ್ಯ ಸ್ಥಿರ; ಶೀಘ್ರದಲ್ಲಿ ಮನೆಗೆ

Webdunia
ಗುರುವಾರ, 3 ನವೆಂಬರ್ 2016 (09:19 IST)
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಆರೋಗ್ಯದಲ್ಲಿ ಗಣನೀಯ ಪ್ರಗತಿ ಕಂಡು ಬಂದಿದ್ದು  ಅವರು ಸಹಜ ಜೀವನ ಜೀವನ ನಡೆಸಲು ಪ್ರಾರಂಭಿಸಿದ್ದಾರೆ ಎಂದು ಎಂದು ಅವರು ಪ್ರತಿನಿಧಿಸುವ ಪಕ್ಷ ಎಐಡಿಎಂಕೆ ಪ್ರಕಟನೆಯಲ್ಲಿ ತಿಳಿಸಿದೆ. 
 
ಸೆಪ್ಟೆಂಬರ್ 22 ರಿಂದ ಆಸ್ಪತ್ರೆ ಸೇರಿರುವ ಜಯಲಲಿತಾ (68) ಅವರಿಗಾಗಿ ಜನರು ಸಲ್ಲಿಸಿದ್ದ ಪ್ರಾರ್ಥನೆ ಸಫಲವಾಗಿದೆ. ಶೀಘ್ರದಲ್ಲಿಯೇ  ಬಡವರ ಸೇವೆಗಾಗಿ ಮರಳಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದು ಪಕ್ಷದ ವಕ್ತಾರ ಪರ್ನುಟ್ಟಿ ಎಸ್ ರಾಮಚಂದ್ರನ್ ಹೇಳಿದ್ದಾರೆ. 
 
ಜಯಲಲಿತಾ ಆರೋಗ್ಯವಾಗಿದ್ದಾರೆ, ಆದರೆ ಕೆಲ ದಿನ ಅವರನ್ನು ನಿಗಾವಣೆಯಲ್ಲಿ ಇಡಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಪಕ್ಷದ ಮತ್ತೊಬ್ಬ ವಕ್ತಾರೆ ಸಿ.ಆರ್ ಸರಸ್ವತಿ ಹೇಳಿದ್ದಾರೆ. 
 
ಅವರು ಆರೋಗ್ಯವಾಗಿದ್ದು ಸಹಜ ಆಹಾರವನ್ನು ಸೇವಿಸುತ್ತಿದ್ದಾರೆ. ಸಹಜ ಜೀವನವನ್ನು ನಡೆಸಲು ಪ್ರಾರಂಭಿಸಿರುವ ಅವರು ಆದಷ್ಟು ಬೇಗ ಸಾರ್ವಜನಿಕ ಜೀವನಕ್ಕೆ ಮರಳಲಿದ್ದಾರೆ ಎಂದು ಸರಸ್ವತಿ ಹೇಳಿದ್ದಾರೆ.
 
ಜ್ವರ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಸೆಪ್ಟೆಂಬರ್ ತಿಂಗಳಲ್ಲಿ ಜಯಾ ಅಪೋಲೋ ಆಸ್ಪತ್ರೆ ಸೇರಿದ್ದರು. ಬಳಿಕ ಅವರ ಶ್ವಾಸಕೋಶದ ಸೋಂಕಿಗಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದವು. ಆದರೆ ಅವರ ಆರೋಗ್ಯದ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಹೊರ ಹಾಕಿರಲಿಲ್ಲ. 
 
ದೆಹಲಿಯ ಏಮ್ಸ್ ಮತ್ತು ಲಂಡನ್‌ನ ನುರಿತ ವೈದ್ಯರು ಅವರಿಗೆ ಚಿಕಿತ್ಸೆ ನೀಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ
Show comments