Select Your Language

Notifications

webdunia
webdunia
webdunia
webdunia

ಮದ್ರಾಸ್ ಹೈಕೋರ್ಟ್ ಜನತೆಯ ಧ್ವನಿಯನ್ನು ಪ್ರತಿಧ್ವನಿಸುತ್ತಿದೆ: ಡಿಎಂಕೆ

ಮದ್ರಾಸ್ ಹೈಕೋರ್ಟ್ ಜನತೆಯ ಧ್ವನಿಯನ್ನು ಪ್ರತಿಧ್ವನಿಸುತ್ತಿದೆ: ಡಿಎಂಕೆ
ಚೆನ್ನೈ , ಶುಕ್ರವಾರ, 30 ಡಿಸೆಂಬರ್ 2016 (19:45 IST)
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸಾವಿನ ವಿಚಾರದಲ್ಲಿ ಮದ್ರಾಸ್ ಹೈಕೋರ್ಟ್ ಎತ್ತಿರುವ ಅನುಮಾನಗಳು ತಮಿಳುನಾಡಿನ ಜನರ ಧ್ವನಿಯನ್ನು ಪ್ರತಿಧ್ವನಿಸುತ್ತದೆ ಎಂದು ಡಿಎಂಕೆ ಶುಕ್ರವಾರ ಹೇಳಿದೆ. 
 
ಸುದ್ದಿ ಮಾಧ್ಯಮದ ಜತೆ ಮಾತನಾಡುತ್ತಿದ್ದ ಡಿಎಂಕೆ ನಾಯಕ ಸರವಣನ್, ಕೋರ್ಟ್ ಎತ್ತಿರುವ ಅನುಮಾನ ರಾಜ್ಯದ ಜನತೆಯ ಧ್ವನಿಯನ್ನು ಪ್ರತಿನಿಧಿಸುತ್ತದೆ ಎಂದೆನಿಸುತ್ತಿದೆ. ಜಯಾ ಆಸ್ಪತ್ರೆಯಲ್ಲಿ ದಿನಗಳುದ್ದಕ್ಕೂ ಅಪೋಲೋ ಆಸ್ಪತ್ರೆ ಹೊರಡಿಸಿದ ಆರೋಗ್ಯ ಪ್ರಕಟಣೆಗಳು ವಿರೋಧಾತ್ಮಕ ವರದಿಗಳನ್ನು ಒಳಗೊಂಡಿದ್ದವು. ವಾಸ್ತವ ಎನ್ನಿಸುವಂತಹ ವರದಿ ಬರಲಿಲ್ಲ ಎಂದು ಅವರು ಹೇಳಿದ್ದಾರೆ.
 
ಎಲ್ಲಕ್ಕಿಂತ ವಿಚಿತ್ರ ಸಂಗತಿ ಏನೆಂದರೆ ಸಿಎಂ ಆರೋಗ್ಯದ ಬಗ್ಗೆ ತಮಿಳುನಾಡು ಸರ್ಕಾರ ಒಂದೇ ಒಂದು ಶಬ್ಧವನ್ನು ಹೊರಹಾಕಲಿಲ್ಲ ಅದನ್ನು ಹೊರತು ಪಡಿಸಿ, ವೈದ್ಯರ ವರದಿಗಳು ಬಹಳ ವಿರೋಧಾತ್ಮಕವಾಗಿದ್ದವು. ಜಯಾ ಆರೋಗ್ಯಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಿಂದ 10 ಬುಲಿಟಿನ್‌ಗಳು ಬಂದವು. ಆದರೆ ಸತ್ಯಾ (ಅಪೋಲೋ ಆಸ್ಪತ್ರೆ ವೈದ್ಯಕೀಯ ಸೇವೆಗಳ ನಿರ್ದೇಶಕಿ) ಅವರು ಬಿಡುಗಡೆಗೊಳಿಸಿದ ಒಂದು ಬುಲಿಟಿನ್ ಬಿಟ್ಟರೆ ಯಾವುದರ ಮೇಲೂ ವೈದ್ಯರ ಸಹಿ ಇರಲಿಲ್ಲ. ಅವುಗಳೆಲ್ಲವನ್ನು ಬಿಡುಗಡೆಗೊಳಿಸಿದ್ದು  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಅವರು ವೈದ್ಯರು ಅಲ್ಲ ಮತ್ತು ಜಯಲಲಿತಾ ಅವರಿಗೆ ಚಿಕಿತ್ಸೆ  ನೀಡಿದವರ ಜತೆ ಯಾವ ಸಂಪರ್ಕ ಹೊಂದಿದವರೂ ಅಲ್ಲ ಎಂದಿದ್ದಾರೆ ಶರವಣನ್.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐಟಿ ದಾಳಿ: ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣಗೆ ಸಮನ್ಸ್