Select Your Language

Notifications

webdunia
webdunia
webdunia
webdunia

ಹಿರಿಯ ನಾಗರಿಕರಿಗೆ ಉಚಿತ ಬಸ್ ಪ್ರಯಾಣ: ಸಿಎಂ ಜಯಲಲಿತಾ ಘೋಷಣೆ

ಹಿರಿಯ ನಾಗರಿಕರಿಗೆ ಉಚಿತ ಬಸ್ ಪ್ರಯಾಣ: ಸಿಎಂ ಜಯಲಲಿತಾ ಘೋಷಣೆ
ಚೆನ್ನೈ , ಗುರುವಾರ, 18 ಫೆಬ್ರವರಿ 2016 (17:01 IST)
ತಮಿಳುನಾಡಿನ ಹಿರಿಯ ನಾಗರಿಕರು ಒಂದು ತಿಂಗಳಲ್ಲಿ ಹತ್ತು ಬಾರಿ ಹವಾನಿಯಂತ್ರಿತವಲ್ಲದ ಎಂಟಿಸಿ ಬಸ್‌ನಲ್ಲಿ ಉಚಿತ ಬಸ್ ಪ್ರಯಾಣ ಮಾಡುವ ಯೋಜನೆಯನ್ನು ಮುಖ್ಯಮಂತ್ರಿ ಜೆ.ಜಯಲಲಿತಾ ಘೋಷಿಸಿದ್ದಾರೆ.
 
ಮುಖ್ಯಮಂತ್ರಿ ಜಯಲಲಿತಾ ಅವರ ಜನ್ಮದಿನವಾದ ಫೆಬ್ರವರಿ 24 ರಂದು ಯೋಜನೆ ಜಾರಿಗೆ ಬರಲಿದೆ ಎಂದು ಎಐಎಡಿಎಂಕೆ ಪಕ್ಷದ ಮೂಲಗಳು ತಿಳಿಸಿವೆ.
 
ಹಿರಿಯ ನಾಗರಿಕರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಚೆನ್ನೈನಲ್ಲಿ ಮೊದಲಿಗೆ ಆರಂಭಿಸಲಾಗುವುದು. ನಂತರ ಉತ್ತಮ ಸ್ಪಂದನೆ ದೊರೆತಲ್ಲಿ  ರಾಜ್ಯದ ಇತರ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
 
ಕಳೆದ 2011ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಹಲವಾರು ಭರವಸೆಗಳನ್ನು ಘೋಷಿಸಲಾಗಿತ್ತು. ಹಿರಿಯ ನಾಗರಿಕರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವುದಾಗಿಯೂ ಭರವಸೆ ನೀಡಲಾಗಿತ್ತು. ಅದರಂತೆ, ಇಂದು ತಮಿಳುನಾಡು ಸರಕಾರ ಯೋಜನೆ ಘೋಷಿಸಿ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದಂತಾಗಿದೆ ಮುಖ್ಯಮಂತ್ರಿ ಜಯಲಲಿತಾ ಸಂತಸ ವ್ಯಕ್ತಪಡಿಸಿದ್ದಾರೆ.
 
60 ವರ್ಷ ಅಥವಾ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಎಂಟಿಸಿ ಬಸ್ ಡಿಪೋಗಳಿಗೆ ತೆರಳಿ ಮಾಸಿಕ 10 ಟೋಕನ್‌ಗಳನ್ನು ಪಡೆಯಬಹುದಾಗಿದೆ. ಹಿರಿಯ ನಾಗರಿಕರು ತಮ್ಮ ಭಾವಚಿತ್ರವಿರುವ ಅರ್ಜಿಯನ್ನು ತುಂಬಿ ಎಂಟಿಸಿ ಬಸ್‌ ಡಿಪೋಗಳಲ್ಲಿ ನೀಡಿ ಗುರುತಿನ ಪತ್ರ ಪಡೆಯಬಹುದಾಗಿದೆ ಎಂದು ಮುಖ್ಯಮಂತ್ರಿ ಜಯಲಲಿತಾ ಹೇಳಿದ್ದಾರೆ.

Share this Story:

Follow Webdunia kannada