Select Your Language

Notifications

webdunia
webdunia
webdunia
webdunia

ಜಯಲಲಿತಾ ಲವ್ ಲೆಟರ್ ಟು ಮೋದಿ ಲೇಖನಕ್ಕೆ ಭಾರಿ ಖಂಡನೆ

ಜಯಲಲಿತಾ ಲವ್ ಲೆಟರ್ ಟು ಮೋದಿ ಲೇಖನಕ್ಕೆ ಭಾರಿ ಖಂಡನೆ
ಚೆನ್ನೈ , ಶುಕ್ರವಾರ, 1 ಆಗಸ್ಟ್ 2014 (16:18 IST)
ಶ್ರೀಲಂಕಾದ ರಕ್ಷಣಾ ಇಲಾಖೆ ವೆಬ್‌ಸೈಟ್‌ನಲ್ಲಿ ಜಯಲಲಿತಾ ಲವ್ ಲೆಟರ್ ಟು ಮೋದಿ ಎನ್ನುವ ಲೇಖನ ತಮಿಳುನಾಡಿನಾದ್ಯಂತ ವ್ಯಾಪಕ ಆಕ್ರೋಶ ಮೂಡಿಸಿದ್ದು, ರಾಜ್ಯಾದ್ಯಂತ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ.
 
ಪ್ರಧಾನಮಂತ್ರಿ ಮೋದಿ ಹಾಗೂ ಸಿಎಂ ಜೆ.ಜಯಲಲಿತಾ ವಿರುದ್ಧ ಅವಹೇಳನಾಕಾರಿ ಲೇಖನ ಖಂಡಿಸಿ ತಮಿಳುನಾಡಿನಾದ್ಯಂತ ಎಐಎಡಿಎಂಕೆ ಕಾರ್ಯಕರ್ತರು ಭಾರಿ ಪ್ರತಿಭಟನೆ ಆರಂಭಿಸಿದ್ದಾರೆ.
 
ತಮಿಳುನಾಡಿನ ಪ್ರತಿಭಟನೆಯಿಂದ ಎಚ್ಚೆತ್ತ ಶ್ರೀಲಂಕಾದ ರಕ್ಷಣಾ ಇಲಾಖೆ ಲೇಖನವನ್ನು ತೆಗೆದುಹಾಕಿದೆ ಎಂದು ಮೂಲಗಳು ತಿಳಿಸಿವೆ.
 
ಶ್ರೀಲಂಕಾ ಸರಕಾರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಬರೆದ ಅವಹೇಳನಾಕಾರಿ ಲೇಖನವನ್ನು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಕೂಡಾ ಖಂಡಿಸಿದ್ದಾರೆ.

Share this Story:

Follow Webdunia kannada