Webdunia - Bharat's app for daily news and videos

Install App

ಜಯಾ ಜನ್ಮದಿನ: ಶುಭಾಶಯ ಕೋರಲು ನೀರಿನಲ್ಲಿ ತೇಲಿದ ಶಾಸಕ

Webdunia
ಬುಧವಾರ, 24 ಫೆಬ್ರವರಿ 2016 (16:53 IST)
ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಇಂದು ತಮ್ಮ 68ನೆಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮತ್ತೆರಡು ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಈ ವರ್ಷ ಜಯಾ ಮೇನಿಯಾ ಮತ್ತಷ್ಟು ಹೆಚ್ಚಿದಂತೆ ಕಂಡುಬರುತ್ತಿದೆ.
 
ಅಮ್ಮನ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಪರಷ್ಪರ ಸ್ಪರ್ಧೆಗಿಳಿದಿರುವ ಟಿಕೆಟ್ ಆಕಾಂಕ್ಷಿಗಳು, ಅವರ ಹುಟ್ಟುಹಬ್ಬವನ್ನು ನವ-ನವೀನ ರೀತಿಯಲ್ಲಿ  ಆಚರಿಸುತ್ತಿದ್ದಾರೆ. ಅದನ್ನು ಕೇಳಿ ನೀವು ನಗುತ್ತೀರೋ, ಅಸಂಬದ್ಧವೆನ್ನುತ್ತಿರೋ? ಹುಚ್ಚುತನ, ಭಟ್ಟಂಗಿತನ, ಅಥವಾ ಓಲೈಕೆಯ ಪರಮಾವಧಿ ಎನ್ನುತ್ತಿರೋ ನೀವೇ ನಿರ್ಧರಿಸಿ. 
 
ಎಐಡಿಎಂಕೆ ಶಾಸಕನೊಬ್ಬ ಜಯಾಗೆ ಹುಟ್ಟುಹಬ್ಬದ ಶುಭಾಶಯ ಕೋರಲು 48 ನಿಮಿಷಗಳ ಕಾಲ ನೀರಿನಲ್ಲಿ ತೇಲಿದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡಿ ವ್ಯಾಪಕ ಪ್ರಚಾರವನ್ನು ಪಡೆದುಕೊಂಡಿದ್ದು ಆತನಿಗೆ ಅಮ್ಮನ ಕೃಪೆ ಸಿಗುವುದು ಖಚಿತವಾದಂತಾಗಿದೆ. ಹಲವರು ಅಮ್ಮಾ ಚಿತ್ರವನ್ನು ತಮ್ಮ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದು, ನಮಗೆಲ್ಲವೂ ಅಮ್ಮಾನೇ ಎಂದು ಬರೆದುಕೊಂಡಿದ್ದಾರೆ. 
 
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಪಕ್ಷದ ಕಾರ್ಯಕರ್ತರಲ್ಲಿ ಒಬ್ಬರಾದ ದೇವಿ, ಅಮ್ಮಾ ನಮಗೆಲ್ಲವೂ ಆಗಿದ್ದಾರೆ. ಅವಳು ನಮಗೆ ದೇವರಿದ್ದಂತೆ. ಅವರಿಗೆ ಗೌರವವನ್ನು ತೋರಿಸಲು ನಾವು ಟ್ಯಾಟೂ ಹಾಕಿಕೊಂಡಿದ್ದೇವೆ. ಪ್ರವಾಹದ ಸಮಯದಲ್ಲಿ ಅವರು ನಮಗೆಲ್ಲ ಸಹಾಯ ಮಾಡಿದರು, 5000 ರೂಪಾಯಿಯನ್ನು ನೀಡಿದರು. ನಮ್ಮ ಜೀವನ ಸಹಜ ಸ್ಥಿತಿಗೆ ಬರಲು ಅವರೇ ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ. 
 
ಅಮ್ಮ ಜನ್ಮದಿನದ ಪ್ರಯುಕ್ತ ಸಾಮೂಹಿಕ ವಿವಾಹವನ್ನು ಸಹ ಆಯೋಜಿಸಿರುವ ಕಾರ್ಯಕರ್ತರು ವರ ಮತ್ತು ವಧುವಿನ ಹಣೆಗೆ ಜಯಾ ಅವರ ಭಾವಚಿತ್ರವಿರುವ ಪಟ್ಟಿ ಕಟ್ಟಿದ್ದಾರೆ. ಮಂಟಪದ ತುಂಬ ಜಯಾ ಅವರ ಪೋಸ್ಟರ್ ಇಡಲಾಗಿದೆ. ಈ ರೀತಿಯ ನೂರಾರು ಮದುವೆಗಳು ರಾಜ್ಯದಲ್ಲಿ ನಡೆದಿವೆ. 
 
ಜತೆಗೆ ಪ್ರತಿವರ್ಷದಂತೆ ರಾಜ್ಯದಾದ್ಯಂತ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದ್ದು, ಸಾವಿರಾರು ಸಂಖ್ಯೆಯ ಜಯಾ ಅಭಿಮಾನಿಗಳು ರಕ್ತದಾನವನ್ನು ಮಾಡುತ್ತಿದ್ದಾರೆ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments