Select Your Language

Notifications

webdunia
webdunia
webdunia
webdunia

ನೇತಾಜಿ ಪರಿವಾರದವರ ಮೇಲೆ 20 ವರ್ಷ ಬೇಹುಗಾರಿಕೆ ನಡೆಸಿದ ನೆಹರು

ನೇತಾಜಿ ಪರಿವಾರದವರ ಮೇಲೆ 20 ವರ್ಷ ಬೇಹುಗಾರಿಕೆ ನಡೆಸಿದ ನೆಹರು
ನವದೆಹಲಿ , ಶುಕ್ರವಾರ, 10 ಏಪ್ರಿಲ್ 2015 (12:25 IST)
ಮಹಾನ್ ದೇಶಭಕ್ತ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದವರ ಮೇಲೆ ಜವಾಹರಲಾಲ್ ನೆಹರು ಸರಕಾರ ಸತತ 20 ವರ್ಷಗಳ ಕಾಲ ಬೇಹುಗಾರಿಕೆ ನಡೆಸಿತ್ತು ಎಂಬ ಆಘಾತಕಾರಿ ವಿಷಯ ಬಹಿರಂಗಗೊಂಡಿದೆ.

ಆಂಗ್ಲ ಪತ್ರಿಕೆಯೊಂದರಲ್ಲಿ ಬಂದ ವರದಿಯ ಪ್ರಕಾರ ಗುಪ್ತಚರ ಇಲಾಖೆಯ ಕೆಲ ದಾಖಲೆ ಪತ್ರಗಳು ಬಹಿರಂಗಗೊಂಡಿದ್ದು ನೇತಾಜಿ ಅವರ ಕುಟುಂಬದವರ ಮೇಲೆ ಬೇಹುಗಾರಿಕೆ ನಡೆಸಲು ಗುಪ್ತಚರ ಇಲಾಖೆ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿತ್ತು ಎಂಬ ಸತ್ಯವನ್ನು ಅದು ಹೊರಹಾಕಿದೆ. ಕೋಲಕತ್ತಾದಲ್ಲಿನ ನೇತಾಜಿ ಸಂಬಂಧಿಗಳ ಎರಡು ಮನೆಗಳ ಮೇಲೆ ಐಬಿ ಕಣ್ಣಿಟ್ಟಿತ್ತು. ಅವರ ಪತ್ರವ್ಯವಹಾರ, ದೂರವಾಣಿ ಸಂದೇಶ, ವಿದೇಶ ಪ್ರವಾಸಗಳ ಬಗ್ಗೆಯೂ ತೀವೃ ನಿಗಾ ವಹಿಸಲಾಗಿತ್ತು ಎಂದು ತಿಳಿದು ಬಂದಿದೆ. 
 
1948 ರಿಂದ- 1968ರವರೆಗಿನ ಎರಡು ದಶಕಗಳ ಅವಧಿಯಲ್ಲಿ ಈ ಬೇಹುಗಾರಿಕೆ ನಡೆದಿದ್ದು, ಅದರಲ್ಲಿ 16 ವರ್ಷ ನೆಹರೂರವರೇ ಆಡಳಿತದಲ್ಲಿದ್ದರು ಎನ್ನುವುದು ಗಮನಾರ್ಹ ಸಂಗತಿ. ಅಲ್ಲದೇ ಬೇಹುಗಾರಿಕೆ ವರದಿಯನ್ನು ನೇರವಾಗಿ ನೆಹರೂಗೆ ತಲುಪಿಸಲಾಗುತ್ತಿತ್ತು ಎಂಬ ವಿಷಯ ಕೂಡ ಬಹಿರಂಗಗೊಂಡಿದೆ. ಈ ಗೂಢಾಚಾರಿಕೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ನೇತಾಜಿಯ ಕೆಲ ಸಂಬಂಧಿಗಳು ಸಹ ಅವರ ಹೋರಾಟಕ್ಕೆ ಸಾಥ್ ನೀಡುತ್ತಿದ್ದುದು ಇದಕ್ಕೆ ಕಾರಣವಿರಬಹುದೆಂದು ಊಹಿಸಲಾಗಿದೆ. 
 
ಈ ಸುದ್ದಿ ಕೇಳಿ ನೇತಾಜಿ ಸಂಬಂಧಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಕಾಂಗ್ರೆಸ್‌ನ ಮಾಜಿ ನಾಯಕರ ಧೋರಣೆಯನ್ನು ಬಿಜೆಪಿ ತೀವೃವಾಗಿ ಖಂಡಿಸಿದೆ. 

Share this Story:

Follow Webdunia kannada