Webdunia - Bharat's app for daily news and videos

Install App

ಜೇಟ್ಲಿಯನ್ನು ಕೊಂಡಾಡಿದ ಅಮಿತ್ ಶಾ

Webdunia
ಶುಕ್ರವಾರ, 21 ಅಕ್ಟೋಬರ್ 2016 (14:52 IST)
30 ತಿಂಗಳ ವಯೋಮಾನದ ಮೋದಿ ಸರ್ಕಾರದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಕ್ಕಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ಮನಸಾರೆ ಕೊಂಡಾಡಿದ್ದಾರೆ. 
65,000 ಕೋಟಿ ಲೆಕ್ಕಕ್ಕೆ ಸಿಗದ ಹಣ ವಸೂಲಿ ಮತ್ತು ರಾಷ್ಟ್ರೀಯ ಸರಕು ಮತ್ತು ಸೇವೆಗಳ ತೆರಿಗೆಗೆ ಅಡ್ಡವಾಗಿದ್ದ ಎಲ್ಲ ತೊಡಕುಗಳನ್ನು ದಾಟಿದ್ದು ನಮ್ಮ ಸರ್ಕಾರದ ಎರಡು ಮಹಾನ್ ಸಾಧನೆಗಳು. ಇವೆರಡು ಆರ್ಥಿಕ ಸಚಿವಾಲಯದಡಿಯಲ್ಲಿ ಬರುತ್ತವೆ ಎಂದು ಶಾ ಹೇಳಿದ್ದಾರೆ. 
 
ಜೇಟ್ಲಿ ಅವರು ಕಳೆದ 3 ವರ್ಷಗಳಿಂದ ಬರೆದಿರುವ ವೃತ್ತಪತ್ರಿಕೆ ಲೇಖನ, ಬ್ಲಾಗ್ ಪೋಸ್ಟ್ ಮತ್ತು ಭಾಷಣಗಳ ಹಿಂದಿ ಅನುವಾದ 'ಅಂದೇರೆಸೆ ಸೇ ಉಜಾಲೆ ತಕ್' ( ಕತ್ತಲೆಯಿಂದ ಬೆಳಕಿನವರೆಗೆ) ಅನ್ನು ಅನಾವರಣಗೊಳಿಸಿ ಶಾ ಮಾತನ್ನಾಡುತ್ತಿದ್ದರು. 
 
ಜೇಟ್ಲಿ ನಾಯಕತ್ವದ ಅಡಿಯಲ್ಲಿ ಭಾರತೀಯ ಆರ್ಥಿಕತೆ ಜಾಗತಿಕವಾಗಿ ಅತಿ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದಿರುವ ಅವರು ಕಾಂಗ್ರೆಸ್ ನೇತೃತ್ವದ ಸರ್ಕಾರ ಸರ್ಕಾರಿ ಬೊಕ್ಕಸವನ್ನು ಅತ್ಯಂತ ದಯನೀಯ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದರು ಎಂದು ಅವರು ಆರೋಪಿಸಿದ್ದಾರೆ.
 
ಹಲವಾರು ಕಲ್ಯಾಣ ಯೋಜನೆಗಳ ಮೂಲಕ ಆರ್ಥಿಕ ಬೆಳವಣಿಗೆಯನ್ನು ಖಚಿತ ಪಡಿಸಿಕೊಂಡಿರುವ ಸರ್ಕಾರ ಮೋದಿ ಸರಕಾರ ಅಂಚಿನಲ್ಲಿರುವ ಮತ್ತು ಆರ್ಥಿಕ ಬೆಳವಣಿಗೆ ಕಾಣದ  ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿಗೆ ಸೇರಿಸಲು ಪ್ರಯತ್ನಿಸಿದೆ. ಇದರ ಎಲ್ಲ ಶ್ರೇಯಸ್ಸು ಜೇಟ್ಲಿ ಅವರಿಗೆ ಸಲ್ಲುತ್ತದೆ. ಅವರಿಗೆ ಮತ್ತು ಅವರ ಸಚಿವಾಲಯಕ್ಕೆ ಧನ್ಯವಾದಗಳು ಎಂದು ಶಾ ಹೇಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments