Webdunia - Bharat's app for daily news and videos

Install App

ನಟ ಪೋಸಾನಿ ಕೃಷ್ಣ ಬಂಧನಕ್ಕೆ ಜಗನ್‌ಮೋಹನ್ ರೆಡ್ಡಿ ಆಕ್ರೋಶ, ಪತ್ನಿಗೆ ಕರೆ ಮಾಡಿ ಸಂತೈಸಿದ ಮಾಜಿ ಸಿಎಂ

Sampriya
ಗುರುವಾರ, 27 ಫೆಬ್ರವರಿ 2025 (17:32 IST)
Photo Courtesy X
ಆಂಧ್ರಪ್ರದೇಶ: ಹಿರಿಯ ತೆಲುಗು ನಟ ಮತ್ತು ಪಕ್ಷದ ಸದಸ್ಯ ಪೋಸಾನಿ ಕೃಷ್ಣ ಮುರಳಿ ಬಂಧನವನ್ನು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಅಧ್ಯಕ್ಷ ವೈಎಸ್ ಜಗನ್‌ ಮೋಹನ್ ರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ.

ಫೆ.26ರಂದು ರಾತ್ರಿ 8.45ರ ಸುಮಾರಿಗೆ ಮುರಳಿಯನ್ನು ಆಂಧ್ರಪ್ರದೇಶ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಓಬುಲವಾರಿಪಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಆಧರಿಸಿ ಆತನನ್ನು ಬಂಧಿಸಲಾಗಿದೆ. ಡಿಸಿಎಂ ಪವನ್ ಕಲ್ಯಾಣ್ ಹಾಗೂ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ ಸಂಬಂಧ ಪೋಸಾನಿ ಅವರನ್ನು ಬಂಧಿಸಲಾಗಿದೆ.

ಬಂಧನದ ನಂತರ, ವೈಎಸ್ ಜಗನ್‌ಮೋಹನ್ ರೆಡ್ಡಿ ಅವರು ಮುರಳಿ ಅವರ ಪತ್ನಿ ಕುಸುಮಲತಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ನಿಮ್ಮ ಜತೆಗೆ ನಾವಿದ್ದೇವೆ. ವೈಎಸ್‌ಆರ್‌ಸಿಪಿಯಿಂದ ಸಂಪೂರ್ಣ ಬೆಂಬಲವನ್ನು ಭರವಸೆ ನೀಡಿದರು. ಸಮ್ಮಿಶ್ರ ಸರ್ಕಾರ ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಪ್ರಸ್ತುತ ಪರಿಸ್ಥಿತಿಯನ್ನು ಸಾರ್ವಜನಿಕರು ಮತ್ತು ದೈವಿಕ ಶಕ್ತಿಗಳು ಗಮನಿಸುತ್ತಿವೆ ಎಂದು ಹೇಳಿದರು.

ವೈಎಸ್‌ಆರ್‌ಸಿಪಿ ಕಾನೂನು ಮತ್ತು ರಾಜಕೀಯವಾಗಿ ಮುರಳಿ ಅವರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ರೆಡ್ಡಿ ಒತ್ತಿ ಹೇಳಿದರು. ಪ್ರಕರಣವನ್ನು ನಿಭಾಯಿಸಲು ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಪಕ್ಷವು ಈಗಾಗಲೇ ಹಿರಿಯ ವಕೀಲರನ್ನು ತೊಡಗಿಸಿಕೊಂಡಿದೆ ಎಂದು ಅವರು ಖಚಿತಪಡಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸಲು ರಾಹುಲ್ ಗಾಂಧಿ ಪತ್ರ: ಯೆಸ್ ಬಾಸ್ ಎಂದ ಸಿದ್ದರಾಮಯ್ಯ

50 ಕೋಟಿ ಅಲ್ಲ ಲಕ್ಷಕ್ಕೂ ಬೆಲೆ ಬಾಳಲ್ಲ ಸತೀಶ್‌ ಖರೀದಿಸಿದ ನಾಯಿ, ED ದಾಳಿಯಲ್ಲಿ ಅಸಲಿಯತ್ತು ಬಯಲು

60ನೇ ವರ್ಷದಲ್ಲಿ ಹಸೆಮಣೆಯೇರಿದ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ದಿಲೀಪ್‌ ಘೋಷ್‌

ಫೇಸ್ ಬುಕ್‌ನಲ್ಲಿ ವಿಡಿಯೋ ಹಂಚಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ

ಮರಳು ಗಣಿಗಾರಿಕೆ ವೀಕ್ಷಿಸಲು ಹೋದ ವಿಜಯೇಂದ್ರಗೆ ಖರ್ಗೆ ಬೆಂಬಲಿಗರಿಂದ ಅಡ್ಡಿ: ಬಿಜೆಪಿ ಕೆಂಡಾಮಂಡಲ

ಮುಂದಿನ ಸುದ್ದಿ
Show comments