Select Your Language

Notifications

webdunia
webdunia
webdunia
webdunia

ತಮಿಳುನಾಡಿನಲ್ಲಿ ಮತ್ತೆ ಶುರುವಾಯಿತು ಅಮ್ಮನ ದರ್ಬಾರ್

ತಮಿಳುನಾಡಿನಲ್ಲಿ ಮತ್ತೆ ಶುರುವಾಯಿತು ಅಮ್ಮನ ದರ್ಬಾರ್
ಚೆನ್ನೈ , ಶನಿವಾರ, 23 ಮೇ 2015 (11:21 IST)
ಎಐಡಿಎಂಕೆ ನಾಯಕಿ ಜಯಲಲಿತಾ ಇಂದು 11.10ಕ್ಕೆ 5 ನೇ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲರಾದ ಕೆ. ರೋಸಯ್ಯ ಜಯಾರವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಮೂಲಕ 8 ತಿಂಗಳ ಬಳಿಕ ಜಯಾ ಮತ್ತೆ ತಮಿಳುನಾಡಿನ ಚುಕ್ಕಾಣಿ ಹಿಡಿದಂತಾಗಿದೆ. 

67 ವರ್ಷದ ಜಯಲಲಿತಾ ಮದ್ರಾಸ್ ವಿಶ್ವವಿದ್ಯಾಲಯ ಆವರಣದಲ್ಲಿ ದೇವರ ಹೆಸರಿನಲ್ಲಿ ಅಮ್ಮ ಪ್ರಮಾಣವಚನ ಓದುತ್ತಿದ್ದಂತೆ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ನೆರೆದ ಗಣ್ಯರು ಕರತಾಡನದ ಮೂಲಕ ಸಂತಷ ವ್ಯಕ್ತಪಡಿಸಿದ್ದರು. ಅವರ ಜತೆ ಪನ್ನೀರ್ ಸೆಲ್ವಂ ಸೇರಿದಂತೆ 28 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
 
ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಜ್ಯಪಾಲರಾದ ರೋಸಯ್ಯ ಹೂಗುಚ್ಛ ನೀಡಿ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದರು. 
 
ಸೂಪರ್ ಸ್ಟಾರ್ ರಜನೀಕಾಂತ್, ಶರತ್ ಕುಮಾರ್, ಐಸಿಸಿ  ಚೆರ್‌ಮನ್ ಎನ್. ಶ್ರೀನಿವಾಸನ್, ಸಂಗೀತ ಮಾಂತ್ರಿಕ ಇಳೆಯರಾಜಾ, ತಮಿಳು ಚಿತ್ರರಂಗದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
 
ಅಕ್ರಮ ಆಸ್ತಿ ಪ್ರಕರಣ ಸಂಬಂಧಿಸಿದಂತೆ 2014ರ ಸಪ್ಟೆಂಬರ್ ತಿಂಗಳಲ್ಲಿ  ಸೆಷನ್ಸ್ ಕೋರ್ಟ್ ಜಯಲಲಿತಾ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ತೀರ್ಪು ನೀಡಿತ್ತು. ಈ ಕಾರಣದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು. 
 
ಈ ತೀರ್ಪಿನ ವಿರುದ್ಧ ಜಯಲಲಿತಾರವರು ಮೇಲನ್ಮವಿ ಸಲ್ಲಿಸಿದ್ದರು. ಮೇ 11 ರಂದು ಕರ್ನಾಟಕ ಹೈಕೋರ್ಟ್ ಅವರನ್ನು ನಿರ್ದೋಷಿ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಪಟ್ಟಕ್ಕೇರಿಸುವ ಚಟುವಟಿಕೆಗಳು ಗರಿಗೆದರಿದ್ದವು.
 
ಮೇ 22 ರಂದು ಪನ್ನೀರ್ ಸೆಲ್ವಂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ ನಿನ್ನೆಯೇ ಜಯಲಲಿತಾ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಜಯಲಲಿತಾ ಅವಿರೋಧವಾಗಿ ಆಯ್ಕೆಯಾಗಿದ್ದರು. 

Share this Story:

Follow Webdunia kannada