ನವದೆಹಲಿ : ಮುಸ್ಲಿಂ ಮಹಿಳೆಯರನ್ನು ಕಾಡುತ್ತಿದ್ದ ತ್ರಿವಳಿ ತಲಾಖ್ ನ್ನು ನಿಷೇಧಿಸಿ ಕೇಂದ್ರ ಸರ್ಕಾರ ಯಾವುದೇ ರೀತಿಯ ಕಾನೂನುಗಳನ್ನು ಜಾರಿಗೆ ತಂದರೂ ಕೂಡ ಈ ತ್ರಿವಳಿ ತಲಾಖ್ ಪೀಡೆ ನಿರ್ಮೂಲನೆಯಾಗಿಲ್ಲ.
ಹೌದು. ಉತ್ತರ ಪ್ರದೇಶದಲ್ಲಿ ಅಮ್ರಾಯ್ ಗ್ರಾಮದ ಸೈಯದ್ ರಶೀದ್ ಎಂಬಾತ ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಆತನ ವಿರುದ್ಧ ಲಕ್ನೋದ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.
ಇದರ ವಿಚಾರಣೆಗೆಂದು ಸೈಯದ್ ರಶೀದ್ ಹಾಗೂ ಆತನ ಪತ್ನಿ ನ್ಯಾಯಾಲಯಕ್ಕೆ ಬಂದಿದ್ದ ವೇಳೆ ಆತ ಪತ್ನಿಗೆ ಚುಯಿಂಗ್ ಗಮ್ ನೀಡಿದ್ದಾನೆ. ಇದನ್ನು ತಿನ್ನಲು ಆಕೆ ನಿರಾಕರಿಸಿದ್ದಕ್ಕೆ ಆತ ಕೋರ್ಟ್ ಆವರಣದಲ್ಲಿಯೇ ತ್ರಿವಳಿ ತಲಾಖ್ ಹೇಳಿ ಅಲ್ಲಿಂದ ತೆರಳಿದ್ದಾನೆ.