Select Your Language

Notifications

webdunia
webdunia
webdunia
webdunia

ಮಾನವ ಸಹಿತ ರಾಕೇಟ್ GSLV Mark-III ಉಡಾವಣೆಗೆ ಇಸ್ರೋ ಸಿದ್ಧತೆ

ಮಾನವ ಸಹಿತ ರಾಕೇಟ್ GSLV Mark-III ಉಡಾವಣೆಗೆ ಇಸ್ರೋ ಸಿದ್ಧತೆ
ಇಸ್ರೊ , ಸೋಮವಾರ, 29 ಮೇ 2017 (11:10 IST)
ಇಸ್ರೋ:ಭಾರತೀಯರನ್ನು ಭಾರತೀಯ ನೆಲದಿಂದಲೇ ಅಂತರಿಕ್ಷಕ್ಕೆ ಕೊಂಡೊಯ್ಯುವ ರಾಕೆಟ್ ಜಿಎಲ್ ವಿ-ಮಾರ್ಕ್-3 ಯನ್ನು ಇಸ್ರೋ ಸಿದ್ಧಪಡಿಸಿದ್ದು, ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಸಜ್ಜುಗೊಂಡಿದೆ.
 
ಜೂನ್ ಮೊದಲ ವಾರದಲ್ಲಿ ಇದರ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ ಎಂದು ತಿಳಿದುಬಂದಿದೆ. 640 ಟನ್ ತೂಕದ ಈ ರಾಕೆಟ್ ಇಸ್ರೊ ಈ ವರೆಗೆ ಅಭಿವೃದ್ಧಿ ಪಡಿಸಿದ ಅತ್ಯಂತ ತೂಕದ ಮತ್ತು ಬೃಹತ್ ರಾಕೆಟ್‌ ಎಂಬ ಖ್ಯಾತಿಗೆ ಒಳಗಾಗಿದೆ.
 
ಭವಿಷ್ಯದಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ಮಾನವಸಹಿತ ಬಾಹ್ಯಾಕಾಶ ಯಾತ್ರೆಗೆ ಈ ರಾಕೆಟ್ ಬಳಕೆಯಾಗಲಿದ್ದು, ಮೊದಲ ಮಾನವ ಸಹಿತ ಗಗನಯಾತ್ರೆ ಕೈಗೊಳ್ಳುವ ಭಾರತೀಯ ವ್ಯಕ್ತಿ ಮಹಿಳೆಯೇ ಆಗಿರಲಿದ್ದಾರೆ ಎಂದು ಇಸ್ರೋ ಹೇಳಿದೆ. ಸುಮಾರು 3-4ಶತಕೋಟಿ ಡಾಲರ್ ಗಳನ್ನು ಕೇಂದ್ರ ಸರ್ಕಾರ ಅನುಮೋದನೆ ನೀದಿದ ತಕ್ಷಣ 2-3  ಬಾಹ್ಯಾಕಾಶ ಯಾನಿಗಳಿರುವ ಮಾನವ ಸಹಿತ ಬಾಹ್ಯಾಕಾಶ ಯಾನ ಹಮ್ಮಿಕೊಳ್ಲಲು ಸಿದ್ಧ ಎಂದು ಇಸೋ ತಿಳಿಸಿದೆ.
 
ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾಗಲಿರುವ ಈ ರಾಕೆಟ್‌ 4 ಸಾವಿರ ಕೆಜಿ ತೂಕವನ್ನು ಹೊರುವ ಸಾಮರ್ಥ್ಯವನ್ನು ಹೊಂದಿದ್ದು, ಪ್ರಯಾಣಿಕರಿಂದ ಸಂಪೂರ್ಣ ಭರ್ತಿಯಾಗಿರುವ ಐದು ಜಂಬೋಜೆಟ್‌  ವಿಮಾನಗಳಿಗೆ ಈ ತೂಕ ಸಮ ಎಂಬುದು ಗಮನಾರ್ಹ.  
 

Share this Story:

Follow Webdunia kannada

ಮುಂದಿನ ಸುದ್ದಿ

ಮಹಾತ್ಮಾ ಗಾಂಧಿ ಹತ್ಯೆ ಹಿಂದೆ ಇನ್ನೊಬ್ಬ ವ್ಯಕ್ತಿ ಇದ್ದನೇ..?