Select Your Language

Notifications

webdunia
webdunia
webdunia
webdunia

ಏಕಾಂಗಿಯಾಗುತ್ತಾರಾ ಪನ್ನೀರ್ ಸೆಲ್ವಂ?

ಏಕಾಂಗಿಯಾಗುತ್ತಾರಾ ಪನ್ನೀರ್ ಸೆಲ್ವಂ?
ಚೆನ್ನೈ , ಶುಕ್ರವಾರ, 17 ಫೆಬ್ರವರಿ 2017 (09:39 IST)
ಮುಖ್ಯಮಂತ್ರಿಯಾಗಿ ಪಳನಿಸ್ವಾಮಿ ಆಯ್ಕೆ ಬಹುತೇಕ ಶಾಸಕರ ಭಿನ್ನಮತವನ್ನು ಶಮನಗೊಳಿಸಿದೆ ಎಂಬ ಮಾತು ಕೇಳಿ ಬರುತ್ತಿದೆ. ಮತ್ತೀಗ ಪನ್ನೀರ್ ಒಂಟಿಯಾಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಜಯಾ ಮತ್ತು ಶಶಿಕಲಾ ಇಬ್ಬರಿಗೂ ನಿಷ್ಠರಾಗಿದ್ದ ಪಳನಿ ಸ್ವಾಮಿಯವನ್ನು ಮುಖ್ಯಮಂತ್ರಿಯಾಗಿಸಲು ಜಯಾ ಆಸ್ಪತ್ರೆ ಸೇರಿದಾಗಲೇ ನಿರ್ಧರಿಸಲಾಗಿತ್ತು. ಆದರೆ ಕೊನೆಕ್ಷಣದಲ್ಲಿ ಪನೀರ್ ಸೆಲ್ವಂ ಸಿಎಂ ಗಾದಿಗೇರಿದ್ದರು, 
 
ಪಕ್ಷದ ಮತಬ್ಯಾಂಕ್ ಆಗಿರುವ ತೇವರ್-ಗೌಂಡರ್ ಸಮುದಾಯದ ನಡುವಿನ ಕೊಂಡಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವ ಪಳನಿಸ್ವಾಮಿ ಅವರ ಬಗ್ಗೆ ಪಕ್ಷದಲ್ಲಿ ಉತ್ತಮ ಬೆಂಬಲವಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಸೆಲ್ವಂ ಹೊರತು ಪಡಿಸಿ ಅವರ ಜತೆಗಿದ್ದವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಸಂಧಾನ ಕಾರ್ಯ ಆರಂಭಿಸಿದ್ದಾರೆ. ನಾಳೆ ಬಹುಮತ ಪಡಿಸಲು ವಿಫಲವಾದರೆ ಪಳನಿ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡೇ ದಿನಗಳಲ್ಲಿ ಪತನವಾಗಲಿದೆ.
 
ನಾಳೆ ಪಳನಿಸ್ವಾಮಿ ವಿಶ್ವಾಸಮತ ಸಾಬೀತುಪಡಿಸಬೇಕಿದ್ದು ತುರ್ತಾಗಿ 11 ಶಾಸಕರ ಬೆಂಬಲ ಸಿಕ್ಕರೆ ಸ್ಥಿರ ಸರ್ಕಾರ ರಚನೆ ಸುಲಭವಾಗುತ್ತದೆ.ಈ ರಾಜಿ ಸಂಧಾನ ಯಶ ಕಂಡರೆ ಪನ್ನೀರ್ ಸೆಲ್ವಂ ಏಕಾಗಿಯಾಗಲಿದ್ದಾರೆ. ರಾಜಿ ಸಂಧಾನ ವಿಫಲವಾದರೆ ಪನ್ನಿರ್ ಸೆಲ್ವಂಗೆ ಅಧಿಕಾರ ರಚಿಸುವ ಅವಕಾಶ ದೊರೆಯಬಹುದು.
 
 
ಈಗಾಗಲೇ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿತವಾಗಿರುವ ಸೆಲ್ವಂ ಬಣ ಮತ್ತೀಗ ಸೆಲ್ವಂ ಮತ್ತು ಅವರ ಬೆಂಬಲಿಗರ ನಡೆ ಕುತೂಹಲವನ್ನು ಕೆರಳಿಸಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಹಕೈದಿಗಳಿಂದ ಶಶಿಕಲಾಗೆ ಜೀವಕ್ಕೆ ಆಪತ್ತು!