Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮಧ್ಯೆ ಹಳಸಿದ ಸಂಬಂಧ ?

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮಧ್ಯೆ ಹಳಸಿದ ಸಂಬಂಧ ?
ನವದೆಹಲಿ , ಮಂಗಳವಾರ, 2 ಫೆಬ್ರವರಿ 2016 (14:44 IST)
ಭಾರತ ತಂಡದ ಬಹುತೇಕ ಕ್ರಿಕೆಟಿಗರು ವಿವಾಹವಾಗುತ್ತಿರುವ ಸಂದರ್ಭದಲ್ಲಿಯೇ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವೆ ಬಿರುಕು ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
 
ಕಳೆದ ಕೆಲ ದಿನಗಳಿಂದ ಇಬ್ಬರ ನಡುವೆ ಮೊದಲಿದ್ದ ಪ್ರೀತಿಯಿಲ್ಲ. ಪರಸ್ಪರರು ದೂರವಾಗಿದ್ದಾರೆ ಎನ್ನುವ ವರದಿಗಳು ಕೊಹ್ಲಿ ಮತ್ತು ಅನುಷ್ಕಾ ಅಭಿಮಾನಿಗಳು ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಆತಂಕ ಮೂಡಿಸಿವೆ. 
 
ವಾಸ್ತವ ಸಂಗತಿಯಿಂದರೆ, ಸಾಮಾಜಿಕ ಜಾಲ ತಾಣಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅಭಿಮಾನಿಗಳು, ವಿರಾಟ್ ಮತ್ತು ಅನುಷ್ಕಾ ಪರಸ್ಪರ ಫಾಲೋ ಮಾಡದಿರುವುದು ಬ್ರೆಕ್ ಅಪ್ ಆಗಿರುವ ಸಾಧ್ಯತೆಗಳಿವೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. 
 
ಮಾಧ್ಯಮಗಳ ವರದಿಗಳ ಪ್ರಕಾರ, ವಿರಾಟ್ ಪ್ರಸಕ್ತ ವರ್ಷದಲ್ಲಿ ವಿವಾಹವಾಗಲು ಬಯಸಿ ಅನುಷ್ಕಾ ಮುಂದೆ ತಮ್ಮ ಬಯಕೆಯನ್ನು ಹೇಳಿಕೊಂಡಿದ್ದರು. ಆದರೆ, ಅನುಷ್ಕಾ ವಿರಾಟ್ ಪ್ರಸ್ತಾವನೆಯನ್ನು ತಳ್ಳಿಹಾಕಿದ್ದರಿಂದ ಇಬ್ಬರ ನಡುವೆ ವಿರಾಸಕ್ಕೆ ಕಾರಣವಾಗಿದೆ ಎನ್ನಲಾಗಿದೆ.
 
ಮತ್ತೊಂದು ಮೂಲಗಳ ಪ್ರಕಾರ ಅನುಷ್ಕಾ, ಪ್ರಸಕ್ತ ವರ್ಷದಲ್ಲಿ ನಟಿಯಾಗಿ ಮತ್ತು ನಿರ್ಮಾಪಕಿಯಾಗಿ ಕೇವಲ ಚಿತ್ರರಂಗದತ್ತ ಗಮನಹರಿಸಲು ಬಯಸಿದ್ದಾರೆ. ಕನಿಷ್ಠ ಮುಂಬರುವ 2017ರವರೆಗೆ ಕಾಯಬೇಕಾಗುತ್ತದೆ ಎಂದು ಹೇಳಿದ್ದಾರೆನ್ನಲಾಗಿದೆ. ಇದು ಇಬ್ಬರ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ. 

Share this Story:

Follow Webdunia kannada