Select Your Language

Notifications

webdunia
webdunia
webdunia
webdunia

ಐಆರ್‌ಸಿಟಿಸಿ ವೆಬ್‌ಸೈಟ್ ಹ್ಯಾಕ್: ವೈಯಕ್ತಿಕ ಮಾಹಿತಿ ಕದ್ದು ಮಾರಾಟ

ಐಆರ್‌ಸಿಟಿಸಿ ವೆಬ್‌ಸೈಟ್ ಹ್ಯಾಕ್: ವೈಯಕ್ತಿಕ ಮಾಹಿತಿ ಕದ್ದು ಮಾರಾಟ
ನವದೆಹಲಿ , ಗುರುವಾರ, 5 ಮೇ 2016 (09:52 IST)
ರೈಲ್ವೆ ಇಲಾಖೆಯ ವೆಬ್‌ಸೈಟ್‌ನಿಂದ ಗ್ರಾಹಕರ ವೈಯಕ್ತಿಕ ಮಾಹಿತಿ ಕದ್ದು ಮಾರಾಟ ಮಾಡಲಾಗಿದೆ ಎಂದು ಐಆರ್‌ಸಿಟಿಸಿ ಮತ್ತು ರೈಲ್ವೆ ಬೋರ್ಡ್‌ಗೆ ಮಹಾರಾಷ್ಟ್ರ ಸರ್ಕಾರ ದೂರು ನೀಡಿದೆ. ಆದರೆ ಐಆರ್‌ಸಿಟಿಸಿ ಇದನ್ನು ಅಲ್ಲಗಳೆದಿದೆ.

ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಪ್ರಯಾಣಿಕರು ನೀಡುವ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ವಿವರಣೆಯನ್ನು ನೀಡಿರುತ್ತಾರೆ. ಇಂತಹ 1 ಕೋಟಿಗೂ ಹೆಚ್ಚು ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಪಿಎನ್ಆರ್ ಸ್ಟೇಟಸ್‌ನಿಂದ ಹ್ಯಾಕ್ ಮಾಡಿ ಕದ್ದು  ಪ್ರತಿಯೊಂದು ಡೇಟಾವನ್ನು 15,000 ರೂಪಾಯಿಗೆ ಮಾರಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ದಾಖಲೆ ಕದ್ದು ಕಾರ್ಪೋರೇಟ್ ಕಂಪನಿಗಳಿಗೆ ಮಾರಬಹುದು ಅಥವಾ ಫೋರ್ಜರಿ ದಾಖಲೆ ಸೃಷ್ಟಿಸಿ ಬಳಸಬಹುದೆಂಬ ಆತಂಕ ಎದುರಾಗಿದೆ. 
 
ನಮ್ಮ ದೇಶದಲ್ಲಿ ಹ್ಯಾಕ್ ಮಾಡಿದ್ದಾರಾ ಅಥವಾ ಪಾಕ್ ಅಥವಾ ಚೀನಾದವರು ಹ್ಯಾಕ್ ಮಾಡಿದ್ದಾರಾ ಎಂಬುದು ತನಿಕೆಯ ಬಳಿಕವೇ ಗೊತ್ತಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ಬಹಿರ್ದೆಸೆ ಹೋದಾಗ ಕದ್ದು ನೋಡಿ, ವಿಡಿಯೋ ಮಾಡುತ್ತಿದ್ದ ವಿಕೃತ ಕಾಮಿ