Select Your Language

Notifications

webdunia
webdunia
webdunia
webdunia

ಅಮೆರಿಕಕ್ಕೆ ತೆರಳಲು ಭಾರತೀಯರ ಹಿಂದೇಟು: ಸುಷ್ಮಾ ಸ್ವರಾಜ್`ಗೆ ಮೊರೆ

ಅಮೆರಿಕಕ್ಕೆ ತೆರಳಲು ಭಾರತೀಯರ ಹಿಂದೇಟು: ಸುಷ್ಮಾ ಸ್ವರಾಜ್`ಗೆ ಮೊರೆ
ನವದೆಹಲಿ , ಸೋಮವಾರ, 6 ಮಾರ್ಚ್ 2017 (12:49 IST)
ನವದೆಹಲಿ(ಮಾ.06): ಅಮೆರಿಕದಲ್ಲಿ ಒಂದರ ಹಿಂದೊಂದರಂತೆ ಭಾರತೀಯರ ಮೇಲೆ ನಡೆಯುತ್ತಿರುವ ಜನಾಂಗೀಯ ದಾಳಿಗಳ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ತೆರಳಲು ಭಾರತೀಯರು ಹಿಂದೇಟು ಹಾಕುತ್ತಿದ್ದಾರೆ. ವರ್ಷಕ್ಕೆ ಸರಿ ಸುಮಾರು 10 ಲಕ್ಷ ಮಂದಿ ಭಾರತದಿಂದ ಅಮೆರಿಕಕ್ಕೆ ಹೋಗಿ ಬರುತ್ತಾರೆ. ಆದರೆ, ಕನ್ಸಾಸ್`ನಲ್ಲಿ ಶ್ರೀನಿವಾಸ್ ಹತ್ಯೆ, ಉದ್ಯಮಿ ಮೇಲೆ ಗುಂಡಿನ ದಾಳಿ ಮತ್ತು ಟ್ರೇನಿನಲ್ಲಿ ಮಹಿಳೆ ಮೇಲೆ ದೌರ್ಜನ್ಯ. ಸಿಖ್ ವ್ಯಕ್ತಿ ಮೇಲೆ ಗುಂಡಿನ ದಾಳಿ. ಈ 4 ಪ್ರಕರಣಗಳು ಜನಾಂಗೀಯ ದಾಳಿ ಎಂಬುದು ಸ್ಪಷ್ಟವಾಗಿದೆ ದಾಳಿಗೂ ಮುನ್ನ ನಮ್ಮ ದೇಶಬಿಟ್ಟು ನಿಮ್ಮ ದೇಶಕ್ಕೆ ಹೋಗಿ ಎಂದು ಕೂಗಾಡಿದ್ದಾರೆ. ಹೀಗಾಗಿ, ಅಮೆರಿಕಕ್ಕೆ ತೆರಳುವ ಯೋಜನೆ ಇದ್ದ ಹಲವರು ಹಿಂದೇಟು ಹಾಕಿದ್ದಾರೆ. ಅಮೆರಿಕಕ್ಕೆ ತೆರಳುವವರಿಗೆ ಟ್ರಾವೆಲ್ಲರ್ ವಾರ್ನಿಂಗ್ ನೀಡುವಂತೆ ಟ್ವಿಟ್ಟರ್`ನಲ್ಲಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನ ಒತ್ತಾಯಿಸಿದ್ದಾರೆ.


`ಈ ಹಿಂದೆ ಯಾವತ್ತೂ ಅಮೆರಿಕ ಭಯಗ್ರಸ್ಥ ಸ್ಥಳವಾಗಿರಲಿಲ್ಲ.  ಜನಾಂಗೀಯ ದಾಳಿಗಳು ನಡೆದ ಬಳಿಕ ಻ಲ್ಲಿಗೆ ತೆರಳುವ ಮುನ್ನ ನಾನು 2 ಬಾರಿ ಯೋಚಿಸುವಂತಾಗಿದೆ’ ಮುಂಬೈನ ಪತ್ರಿಕೋದ್ಯಮ ವಿದ್ಯಾರ್ಥಿ ಅನ್ಮೋಲ್ ಅಲ್ಫಾನ್ಸೋ ಟ್ವಿಟ್ ಮಾಡಿದ್ದಾರೆ.ಅಮೆರಿಕ ದಾಳಿಗಳು ದೈಹಿಕವಾಗಿವೆ. ಅಲ್ಲಿ ನಮ್ಮನ್ನ ನಿಂದಿಸುವುದಷ್ಟೇ ಅಲ್ಲ, ಪ್ರಾಣವನ್ನೇ ತೆಗೆದುಬಿಡುತ್ತಿದ್ದಾರೆ ಎಂದು ಭಯ ವ್ಯಕ್ತಪಡಿಸಿದ್ದಾರೆ.

ವರ್ಜಿನಿಯಾದಲ್ಲಿರುವ ನನ್ನ ಸಹೋದರಿಯನ್ನ ನೋಡಲು ಜೂನ್`ನಲ್ಲಿ ತೆರಳುವ ಯೋಜನೆ ಇತ್ತು. ನನ್ನ ಯೋಜನೆಯನ್ನ ಮರುಪರಿಶೀಲಿಸುತ್ತಿದ್ದೇನೆ. 8 ವರ್ಷದಿಂದ ಅಲ್ಲಿರುವ ನನ್ನ ಸೋದರಿಯ ಭದ್ರತೆ ಬಗ್ಗೆಯೂ ಆತಂಕ ಕಾಡುತ್ತಿದೆ ಎಂದು ದೆಹಲಿ ವಿವಿ ವಿದ್ಯಾರ್ಥಿ ಪವನ್ ಶುಕ್ಲಾ ಹೇಳಿದ್ದಾರೆ.

ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಮಂದಿ ಅಮೆರಿಕ ಭೆಟಿಯ ಬಗ್ಗೆ ಆತಂಕಗೊಂಡು ಸುಷ್ಮಾ ಸ್ವರಾಜ್`ಗೆ ಟ್ವಿಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

122 ಶಾಸಕರಿಗೂ ನೆಮ್ಮದಿಯಿಂದ ಇರಗೊಡುವುದಿಲ್ಲ ಜಯಾ ಆತ್ಮ