Select Your Language

Notifications

webdunia
webdunia
webdunia
webdunia

ಶ್ರೀಮಂತ ದೇವಸ್ಥಾನಗಳಲ್ಲಿನ ಚಿನ್ನದತ್ತ ಮೋದಿ ಚಿತ್ತ

ಶ್ರೀಮಂತ ದೇವಸ್ಥಾನಗಳಲ್ಲಿನ ಚಿನ್ನದತ್ತ ಮೋದಿ ಚಿತ್ತ
ನವದೆಹಲಿ , ಶುಕ್ರವಾರ, 10 ಏಪ್ರಿಲ್ 2015 (18:34 IST)
ಭಾರತ ಎದುರಿಸುತ್ತಿರುವ ದೀರ್ಘಕಾಲದ ವಾಣಿಜ್ಯ ಅಸಮತೋಲನವನ್ನು ಸರಿದೂಗಿಸಲು ದೇಶದ ಶ್ರೀಮಂತ ದೇವಸ್ಥಾನಗಳಲ್ಲಿ ಶೇಖರವಾಗಿರುವ ಬಂಗಾರವನ್ನು ಬಳಸಿಕೊಳ್ಳಲು ಪ್ರಧಾನಿ ಮೋದಿ ಆಲೋಚಿಸಿದ್ದಾರೆ. 

ಭಾರತ ಜಗತ್ತಿನಲ್ಲಿಯೇ ಅತಿ ದೊಡ್ಡ ಚಿನ್ನದ ಗ್ರಾಹಕ ರಾಷ್ಟ್ರವಾಗಿದ್ದು, ದೇಶದ ಪ್ರಾಚೀನ ದೇವಸ್ಥಾನಗಳು ಅನೇಕ ಶತಮಾನಗಳಿಂದ ಕೋಟಿಗಟ್ಟಲೆ ಚಿನ್ನವನ್ನು ಸಂಗ್ರಹಿಸಿಟ್ಟಿವೆ. 
 
ಕೆಲ ವರ್ಷಗಳ ಹಿಂದ ಕೇರಳದ  ಶ್ರೀ ಪದ್ಮನಾಭ ಸ್ವಾಮಿ ದೇವಾಲಯದ ರಹಸ್ಯ ನೆಲಮಾಳಿಗೆಯಲ್ಲಿ ಅಂದಾಜು $ 20 ಬಿಲಿಯನ್ ಮೌಲ್ಯದ ಚಿನ್ನ ಪತ್ತೆಯಾಗಿತ್ತು. ಹೀಗೆ ದೇಶದ ವಿವಿಧ ದೇವಸ್ಥಾನಗಳಲ್ಲಿ ಅಪಾರ ಸಂಪತ್ತು ಶೇಖರಣೆಗೊಂಡಿದೆ. 
 
ಸುಮಾರು 3,000 ಟನ್‌ಗಳಷ್ಟಿರುವ ಸಂಪತ್ತಿನ ನೆರವಿನಿಂದ ದೀರ್ಘ ಕಾಲದಿಂದ ದೇಶ ಎದುರಿಸುತ್ತಿರುವ ವಾಣಿಜ್ಯ ಅಸಮತೋಲನವನ್ನು ಸರಿದೂಗಿಸಲು ಮೋದಿ ಸರಕಾರ ಯೋಜನೆ ರೂಪಿಸಿದೆ. ದೇವಸ್ಥಾನಗಳಿಗೆ ತಮ್ಮಲ್ಲಿರುವ ಚಿನ್ನ ಸಂಪತ್ತನ್ನು ಬ್ಯಾಂಕ್‌ನಲ್ಲಿ ಠೇವಣಿ ಇರಿಸುವಂತೆ ಪ್ರೋತ್ಸಾಹಿಸಲು ಅದಕ್ಕೆ ಬಡ್ಡಿಯನ್ನು ನೀಡಲು ಸರಕಾರ ಚಿಂತಿಸುತ್ತಿದೆ. 
 
ದೇವಾಲಯಗಳು ಈ ಯೋಜನೆಯಲ್ಲಿ ಭಾಗವಹಿಸಲು ನಿರ್ಧರಿಸಿದರೆ ಭಾರತದ ಚಿನ್ನದ ಆಮದು ಈಗಿರುವದಕ್ಕಿಂತ ಕಾಲು ಪ್ರತಿಶತ ಕಡಿಮೆಯಾಗುತ್ತದೆ. ಈಗ ದೇಶದಲ್ಲಿ ವಾರ್ಷಿಕವಾಗಿ 800 ರಿಂದ 1,000 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. 
 
ಈ ಕುರಿತು ಪ್ರತಿಕ್ರಿಯಿಸಿರುವ , ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಟ್ರಸ್ಟ್ ಅಧ್ಯಕ್ಷ, ನರೇಂದ್ರ ಮುರಳಿ ರಾಣೆ, "ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಮ್ಮ ಚಿನ್ನವನ್ನು ಠೇವಣಿ ಇಡಲು ನಮ್ಮ ಒಪ್ಪಿಗೆ ಇದೆ. ಇದು ಸುರಕ್ಷಿತ, ಅನುಕೂಲಕರ. ಉತ್ತಮ ಬಡ್ಡಿಯನ್ನು ಕೂಡ ಸಂಪಾದಿಸಬಹುದು", ಎಂದಿದ್ದಾರೆ. 

Share this Story:

Follow Webdunia kannada