Select Your Language

Notifications

webdunia
webdunia
webdunia
webdunia

ಪಾಕ್ ಜತೆ ಸಮಕಾಲೀನ, ಪ್ರಸ್ತುತ ವಿಷಯ ಚರ್ಚೆಗೆ ಭಾರತ ಸಿದ್ಧ

ಪಾಕ್ ಜತೆ ಸಮಕಾಲೀನ, ಪ್ರಸ್ತುತ ವಿಷಯ ಚರ್ಚೆಗೆ ಭಾರತ ಸಿದ್ಧ
ಇಸ್ಲಮಾಬಾದ್: , ಸೋಮವಾರ, 15 ಆಗಸ್ಟ್ 2016 (20:36 IST)
ಕಾಶ್ಮೀರ ವಿವಾದ ಕುರಿತು ಮಾತುಕತೆಗೆ ಬರುವಂತೆ ಪಾಕಿಸ್ತಾನ ಭಾರತಕ್ಕೆ ಸೋಮವಾರ ಆಹ್ವಾನ ನೀಡಿ ಉಭಯದೇಶಗಳು ಈ ಸಮಸ್ಯೆ ಪರಿಹರಿಸುವುದು ಅಂತಾರಾಷ್ಟ್ರೀಯ ಹೊಣೆಗಾರಿಕೆ ಎಂದು ನೆನಪಿಸಿದೆ. ಆದರೆ ಭಾರತ-ಪಾಕ್ ಸಂಬಂಧಗಳ ಸಮಕಾಲೀನ ಮತ್ತು ಪ್ರಸ್ತುತ ವಿಷಯ ಮಾತ್ರ ಚರ್ಚಿಸಲು ಭಾರತ ಸಿದ್ಧವೆಂದು ಈ ನಡುವೆ ಹೇಳಿಕೆ ನೀಡಿದ್ದರೂ ಮಾತುಕತೆಗೆ ಆಹ್ವಾನಿಸಿದೆ.
 
ಪಾಕ್ ವಿದೇಶಾಂಗ ಕಾರ್ಯದರ್ಶಿ ಭಾರತದ ಹೈಕಮೀಷನರ್ ಅವರನ್ನು ಕರೆದು ಭಾರತದ ವಿದೇಶಾಂಗ ಕಾರ್ಯದರ್ಶಿಗೆ ಉದ್ದೇಶಿಸಿ ಬರೆದ ಪತ್ರ ನೀಡಿ ಭಾರತ ಪಾಕಿಸ್ತಾನ ನಡುವೆ ವಿವಾದದ ಮೂಲ ವಿಷಯವಾಗಿರುವ ಜಮ್ಮು ಕಾಶ್ಮೀರ ವಿವಾದ ಕುರಿತು ಮಾತುಕತೆಗೆ ಆಹ್ವಾನಿಸಲಾಗಿದೆ ಎಂದು ವಿದೇಶಾಂಗ ಕಚೇರಿ ವಕ್ತಾರ ಜಕಾರಿಯಾ ತಿಳಿಸಿದ್ದಾರೆ. 
 
 ಗೃಹಸಚಿವ ರಾಜನಾಥ್ ಸಿಂಗ್ ಸಂಸತ್ತನ್ನು ಉದ್ದೇಶಿಸಿ ಪಾಕ್ ಆಕ್ರಮಿತ ಕಾಶ್ಮೀರ ವಿಷಯವನ್ನು ಚರ್ಚಿಸಲು ಭಾರತ ಸಿದ್ಧವಿದೆ. ಆದರೆ ಜಮ್ಮುಕಾಶ್ಮೀರ ವಿಷಯವನ್ನು ಇಸ್ಲಮಾಬಾದ್‌ನಲ್ಲಿ ಚರ್ಚಿಸುವ ಪ್ರಮೇಯ ಉದ್ಭವಿಸುವುದಿಲ್ಲ ಎಂದಿದ್ದರು. 
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ತೂಕಡಿಸಿದ ಕೇಜ್ರಿವಾಲ್