Select Your Language

Notifications

webdunia
webdunia
webdunia
webdunia

ಭಾರತದ ರೇಪ್ ರಾಜಧಾನಿ ಉತ್ತರಪ್ರದೇಶವಲ್ಲ, ಮಧ್ಯಪ್ರದೇಶ

ಭಾರತದ ರೇಪ್ ರಾಜಧಾನಿ ಉತ್ತರಪ್ರದೇಶವಲ್ಲ, ಮಧ್ಯಪ್ರದೇಶ
ನವದೆಹಲಿ , ಬುಧವಾರ, 23 ಜುಲೈ 2014 (14:56 IST)
ರೇಪ್‌ ಪ್ರಕರಣಗಳ ಹೆಚ್ಚಳದಿಂದ ಉತ್ತರಪ್ರದೇಶ ಇಂದಿನ ದಿನಗಳಲ್ಲಿ ಮುಖಪುಟದ ಸುದ್ದಿಯಾಗಿತ್ತು. ಈ ರಾಜ್ಯ ಈಗ ದೇಶದ "ರೇಪ್ ರಾಜಧಾನಿ" ಎಂಬ ಅಪಖ್ಯಾತಿಗೆ ಗುರಿಯಾಗಿದೆ. ಆದರೆ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಬಿಡುಗಡೆ ಮಾಡಿರುವ ಅಂಕಿಅಂಶದ ಪ್ರಕಾರ, ದೇಶದ ರೇಪ್ ರಾಜಧಾನಿಯೆಂದು ಮಧ್ಯಪ್ರದೇಶಕ್ಕೆ ಬಿರುದು ನೀಡಬೇಕೇ ಹೊರತು ಉತ್ತರಪ್ರದೇಶಕ್ಕಲ್ಲ.

 2001ರಿಂದೀಚೆಗೆ, ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ರಾಜ್ಯ ಮಹಿಳೆಯರ ವಿರುದ್ಧ ಲೈಂಗಿಕ ಹಿಂಸಾಚಾರದಲ್ಲಿ ಎಲ್ಲ ರಾಜ್ಯಗಳನ್ನು ಹಿಂದಿಕ್ಕಿ ಮುಂದುವರೆದಿದೆ. "2013ರಲ್ಲಿ ಭಾರತದಲ್ಲಿ ಅಪರಾಧಗಳು"  ಎಂಬ ಎನ್‌ಸಿಆರ್‌ಬಿ ವರದಿ ಪ್ರಕಾರ, ಮಧ್ಯಪ್ರದೇಶದಲ್ಲಿ 4335 ರೇಪ್ ಪ್ರಕರಣಗಳು ವರದಿಯಾಗಿದ್ದು(2001ಕ್ಕೆ ಹೋಲಿಸಿದರೆ ಶೇ. 52 ಹೆಚ್ಚಳ) 2013ರಲ್ಲಿ ನಡೆದ ರೇಪ್ ಪ್ರಕರಣಗಳಲ್ಲಿ ಅಗ್ರಸ್ಥಾನ ಪಡೆದಿದೆ.

2001ರಲ್ಲಿ 2851 ರೇಪ್ ಪ್ರಕರಣಗಳು ರಾಜ್ಯದಲ್ಲಿ ನೋಂದಣಿಯಾಗಿತ್ತು.ಅದೇ ವರ್ಷ 3285 ಮತ್ತು 3063 ರೇಪ್ ಪ್ರಕರಣಗಳೊಂದಿಗೆ ಕ್ರಮವಾಗಿ ರಾಜಸ್ಥಾನ ಮತ್ತು ಮಹಾರಾಷ್ಟ್ರ ಮಧ್ಯಪ್ರದೇಶವನ್ನು ಅನುಸರಿಸಿದೆ. ಉತ್ತರಪ್ರದೇಶದಲ್ಲಿ 2013ರಲ್ಲಿ 3,045 ರೇಪ್ ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ನಂ. 4 ಸ್ಥಾನದಲ್ಲಿದೆ.  

Share this Story:

Follow Webdunia kannada