Webdunia - Bharat's app for daily news and videos

Install App

ಕೊನೆ ಕ್ಷಣದಲ್ಲಿ ದಾವೂದ್ ಬೇಟೆಯನ್ನು ತಡೆದ ನಿಗೂಢ ಪೋನ್ ಕರೆ!

Webdunia
ಶನಿವಾರ, 13 ಡಿಸೆಂಬರ್ 2014 (11:54 IST)
ಸುಮಾರು ಒಂದು ವರ್ಷದ ಹಿಂದೆ ಭಾರತೀಯ ಕಮಾಂಡೋಗಳು ದಾವೂದ್ ಇಬ್ರಾಹಿಂನನ್ನು ಮುಗಿಸುವ ಅವಕಾಶ ಪಡೆದಿದ್ದರು. ಆದರೆ ಕೊನೆ ಕ್ಷಣದಲ್ಲಿ ಬಂದ ಒಂದು ರಹಸ್ಯ ಪೋನ್ ಕಾಲ್ ಉಗ್ರನ ಬೇಟೆಯನ್ನು ನಿಷ್ಫಲಗೊಳಿಸಿತು ಎಂಬ ಸ್ಪೋಟಕ ಸತ್ಯ ಬೆಳಕಿಗೆ ಬಂದಿದೆ.  
ದೇಶದ ಮೋಸ್ಟ್ ವಾಂಟೆಡ್ ಭಯೋತ್ಪಾದಕ, 1993 ರ ಮುಂಬೈ ಸರಣಿ ಸ್ಫೋಟದ ಆರೋಪಿ ಈಗ ಪಾಕಿಸ್ತಾನದ ರಕ್ಷಣೆಯಲ್ಲಿದ್ದಾನೆ. ಭಾರತೀಯ ಕಮಾಂಡೊಗಳ ಒಂದು ತಂಡ ದಾವೂದ್ ಬೇಟೆಯಾಡಲು ರಹಸ್ಯವಾಗಿ ಪಾಕಿಸ್ತಾನಕ್ಕೆ ಹೋಗಿತ್ತು . ತಮ್ಮ ರಹಸ್ಯ ಕಾರ್ಯಾಚರಣೆಯಲ್ಲಿ ಬಹುತೇಕ ಸಫಲತೆ ಸಾಧಿಸಿದ್ದ ಅವರು ಇನ್ನೇನು ಆತನನ್ನು ಮುಗಿಸಬೇಕು ಎಂದು ಅನುವಾಗುವಷ್ಟರಲ್ಲಿ   ಬಂದ ಪೋನ್ ಕರೆಯೊಂದು ಅವರ ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ಬಲ್ಲ ಮೂಲಗಳು ತಿಳಿಸಿವೆ.
 
ಭಾರತದಲ್ಲಿ ಭೀಕರ ಭಯೋತ್ಪಾದಕ ಕೃತ್ಯ ನಡೆಸಿದ ನಂತರ ಪಾಕಿಸ್ತಾನಕ್ಕೆ ಪರಾರಿಯಾಗಿ ತಲೆ ಮರೆಸಿಕೊಂಡಿರುವ ಉಗ್ರ ದಾವೂದ್‌ನನ್ನು ಪತ್ತೆ ಹಚ್ಚಲು, ದೇಶದ ಗುಪ್ತಚರ ಸಂಸ್ಥೆಗಳು ಶಕ್ತಿ ಮೀರಿ ಪ್ರಯತ್ನಿಸುತ್ತಿವೆ.
 
ಅನೇಕ ವರ್ಷಗಳಿಂದ ಆತನನ್ನು ಬಂಧಿಸುವಲ್ಲಿ ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಆದರೆ ಕಳೆದ ವರ್ಷ  ನಡೆದ ಈ ನಿಗೂಢ ಕಾರ್ಯಾಚರಣೆ ಕೊನೆಯ ಹಂತದಲ್ಲಿ ತಡೆಹಿಡಿಯಲ್ಪಟ್ಟ ಸ್ಪೋಟಕ ಸತ್ಯ ದೇಶದೊಳಗಿನ ಪ್ರಬಲ ಕೈಗಳೇ ಆತನನ್ನು ರಕ್ಷಿಸಲು ಕಾರ್ಯತ್ಪರವಾಗಿವೆ ಎಂಬುದರ ಕಡೆ ಬೆರಲು ತೋರಿಸುತ್ತವೆ.
 
ಮೂಲಗಳ ಪ್ರಕಾರ  ದಾವೂದ್ ಹತ್ಯೆಗೆ  2013 ರಲ್ಲಿ ವ್ಯವಸ್ಥಿತ ತಂತ್ರವನ್ನು ಹೆಣೆಯಲಾಯಿತು. 'ರಾ' ದ ಒಂಬತ್ತು ಏಜೆಂಟ್‌ಗಳನ್ನು ಕಾರ್ಯಾಚರಣೆಗಿಳಿಯಲು ಆಯ್ಕೆ ಮಾಡಲಾಯಿತು. ಅವರಿಗೆ ಸುಡಾನ್, ಬಾಂಗ್ಲಾದೇಶ ಮತ್ತು ನೇಪಾಳ  ವೀಸಾವನ್ನು ನೀಡಲಾಗಿತ್ತು.  "ಸೂಪರ್ ಬಾಯ್ಸ್",  ಎಂಬ ಹೆಸರಿನ ಈ ತಂಡ ಪಾಕಿಸ್ತಾನಕ್ಕೆ ರಹಸ್ಯ ಪ್ರಯಾಣ ಬೆಳೆಸಿತು. 'ರಾ', ಈ ಆಪರೇಶನ್‌ಗೆ ಇಸ್ರೇಲ್‌ನ ಮೊಸಾದ್‌ನ ಸಕ್ರಿಯ ಬೆಂಬಲ ಕೋರಿತ್ತು. ಯೋಜನೆಯನ್ನು ಕಾರ್ಯಗತಗೊಳಿಸಲು ಸಪ್ಟೆಂಬರ್ 13 ನ್ನು ನಿಗದಿ ಪಡಿಸಲಾಗಿತ್ತು. 
 
"ದಾವೂದ್ ಅನೇಕ ವರ್ಷಗಳಿಂದ ಕರಾಚಿಯಲ್ಲಿ ವಾಸವಾಗಿದ್ದಾನೆ. ಪ್ರತಿದಿನ ಕ್ಲಿಪ್ಟನ್ ರಸ್ತೆಯಲ್ಲಿರುವ ತಮ್ಮ ಮನೆಯಿಂದ, ರಕ್ಷಣಾ ವಸತಿ ಸೊಸೈಟಿಗೆ ಆತ ಪ್ರಯಾಣಿಸುತ್ತಾನೆ. ಈ ಅವಕಾಶವನ್ನು ಬಳಸಿಕೊಳ್ಳುವುದು 'ಸೂಪರ್ ಬಾಯ್ಸ್' ಯೋಜನೆಯಾಗಿತ್ತು. ದಾರಿಯಲ್ಲಿರುವ ದರ್ಗಾವೊಂದರ ಬಳಿ ದಾವುದ್‌ಗೆ ಬಲೆ ಬೀಸುವುದೆಂದು ತೀರ್ಮಾನವಾಯಿತು. ಸೆಪ್ಟೆಂಬರ್ 13, 2013 ರಂದು, ಒಂಬತ್ತು ಕಮಾಂಡೊಗಳು ಉಗ್ರನ ಬೇಟೆಗೆ ರಸ್ತೆ ಬದಿಯಲ್ಲಿ ಸನ್ನದ್ಧರಾಗಿ ನಿಂತರು. ಕಮಾಂಡೊಗಳಿಗೆ  ದಾವೂದ್` ಕಾರಿನ ವಿವರಗಳು ಗೊತ್ತಿತ್ತು . ಅಲ್ಲದೇ ಆತನ ಸದ್ಯದ ಚಹರೆ ಕುರಿತ ವಿಡಿಯೋ ಕೂಡ ಇತ್ತು. 
 
ದಾವುದ್ ಬೇಟೆಗೆ ಕ್ಷಣಗಣನೆ ಆರಂಭವಾಯಿತು. ರಾಕ್ಷಸಮನಸ್ಕ ಉಗ್ರನ ಹತ್ಯೆ ಕಲವೇ ನಿಮಿಷಗಳಲ್ಲಿ ನಡೆದು ಹೋಗುತ್ತದೆ ಎಂದುಕೊಂಡಿತ್ತು 'ರಾ'. ಆದರೆ ಅಷ್ಟರಲ್ಲಿ ಸೂಪರ್ ಬಾಯ್ಸ್ ನಾಯಕನಿಗೆ ನಿಗೂಢ ಮೊಬೈಲ್ ಕರೆಯೊಂದು ಬಂತು. ಅದು ಈ ಕಾರ್ಯಾಚರಣೆಯನ್ನು ಕೈ ಬಿಡುವಂತೆ ಆದೇಶ ನೀಡಿತು.
 
ಯೋಜನೆಯನ್ನು ಏಕೆ ಸ್ಥಗಿತಗೊಳಿಸಲಾಯಿತು?, ಆ ನಿಗೂಢ ಕರೆ  ಯಾರದು....ಈ ಕುರಿತ ವಿವರಗಳು ಬಹಿರಂಗವಾಗಿಲ್ಲ..

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments