Webdunia - Bharat's app for daily news and videos

Install App

ಕಪ್ಪುಹಣ: ಭಾರತಕ್ಕೆ 3 ನೇ ಸ್ಥಾನ

Webdunia
ಬುಧವಾರ, 17 ಡಿಸೆಂಬರ್ 2014 (10:59 IST)
ಹೊರದೇಶಗಳಲ್ಲಿ ಕಪ್ಪು ಹಣ  ಕೂಡಿಟ್ಟಿರುವ ದೇಶಗಳ ಪೈಕಿ ಭಾರತಕ್ಕೆ 3ನೇ ಸ್ಥಾನ ದೊರಕಿದೆ ಎಂಬ ಆಂತಕಕಾರಿ ಅಂಶ ಬಹಿರಂಗವಾಗಿದೆ. ಪ್ರಸ್ತುತ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ರಷ್ಯಾಗೆ ಮೊದಲ ಸ್ಥಾನ ನೀಡಲಾಗಿದ್ದು, ಚೀನಾ ದೇಶ ಅದನ್ನು ಹಿಂಬಾಲಿಸಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಭಾರತದಿಂದ 440 ಶತಕೋಟಿ ಡಾಲರ್‌ನಷ್ಟು ಹಣ ವಿದೇಶಗಳಿಗೆ ಹರಿದುಹೋಗಿದೆ ಎಂದು ಅಮೆರಿಕ ಮೂಲದ ಸಂಸ್ಥೆಯ ಸಮೀಕ್ಷೆ ಸ್ಪಷ್ಟಪಡಿಸಿದೆ.
2003ರಿಂದ 2012ರ ಅವಧಿಯಲ್ಲಿ ಭಾರತೀಯರಿಂದ ವಿದೇಶಗಳಲ್ಲಿರುವ ಬ್ಯಾಂಕ್‌ಗಳಲ್ಲಿ  ಜಮಾ ಆದ ಹಣ ಸುಮಾರು 94.76 ಬಿಲಿಯನ್ ಡಾಲರ್‌‌ಗಳೆಂದು  ಮಾಹಿತಿ ಲಭಿಸಿದೆ. 
 
ಜಾಗತಿಕ ಆರ್ಥಿಕ ಸಮಗ್ರತೆ ಸಂಸ್ಥೆ ನಡೆಸಿದ ಅಧ್ಯಯನ ಈ ಫಲಿತಾಂಶವನ್ನು ನೀಡಿದೆ. ಭಾರತದಿಂದ ವಿದೇಶೀ ಬ್ಯಾಂಕುಗಳಲ್ಲಿ ಹೂಡಿಕೆಯಾಗಿರುವ ಒಟ್ಟಾರೆ ಮೊತ್ತಕ್ಕಿಂತ 2003-2012ರ ಅವಧಿಯಲ್ಲಿ ಜಮಾ ಆದ ಹಣದ ಪ್ರಮಾಣ ಪ್ರತಿಶತ 10 ರಷ್ಟು ಅಧಿಕ ಎಂದು ಮಾಹಿತಿ ಲಭಿಸಿದೆ. ಈ ಅವಧಿಯಲ್ಲಿ ಭಾರತೀಯರಿಂದ ವಿದೇಶಿ ಬ್ಯಾಂಕುಗಳ ಖಜಾನೆ ಸೇರಿದ ಹಣ ಸುಮಾರು 6 ಲಕ್ಷ ಕೋಟಿ.  2003ರಿಂದ 2012ರ ವರೆಗೆ (10 ವರ್ಷಗಳಲ್ಲಿ) ವಿದೇಶಿ ಬ್ಯಾಂಕ್‌ಗಳ ಪಾಲಾಗಿರುವ ಭಾರತದ ಹಣದ ಮೊತ್ತ ಒಟ್ಟು 439.59 ಶತಕೋಟಿ.
 
ಇಷ್ಟೊಂದು ಪ್ರಮಾಣದ ಹಣ ಹೊರದೇಶಗಳಲ್ಲಿ ಜಮಾ ಆಗಿರುವುದು ಭಾರತದಲ್ಲಿ  ಭ್ರಷ್ಟಾಚಾರ, ಅಪರಾಧ ಮತ್ತು ತೆರಿಗೆಗಳ್ಳತನ ಮೀತಿ ಮೀರಿದೆ ಎಂಬುದನ್ನು ತೋರಿಸುತ್ತವೆ ಎಂದು  ಅಧ್ಯಯನ ನಡೆಸಿದ ಸಂಸ್ಥೆ ಹೇಳಿದೆ.
 
ಪ್ರತಿವರ್ಷವೂ ಭಾರತದಿಂದ ಸರಾಸರಿ 43.49 ಶತಕೋಟಿ ಡಾಲರ್ ವಿದೇಶಗಳಿಗೆ ರವಾನೆಯಾಗುತ್ತದೆ ಎಂದು ಗ್ಲೋಬಲ್ ಫೈನಾನ್ಷಿಯಲ್ ಇಂಟಿಗ್ರಿಟಿ ಸಂಸ್ಥೆ ಹೇಳಿದೆ.
 
ಗ್ಲೋಬಲ್ ಫೈನಾನ್ಷಿಯಲ್ ಇಂಟಿಗ್ರಿಟಿ (ಜಿಎಫ್‌ಐ) ವರದಿಯಿಂದ ಇದು ಬಯಲಾಗಿದೆ. 2012ರ ಸಾಲಿನಲ್ಲಿ ಚೀನಾದಿಂದ 249.57 ಶತಕೋಟಿ  ಡಾಲರ್ ಹಾಗೂ ರಷ್ಯಾದಿಂದ 122.66 ಶತಕೋಟಿ ಡಾಲರ್‌ನಷ್ಟು ಹಣ ವಿದೇಶಿ ಬ್ಯಾಂಕ್‌ಗಳಲ್ಲಿ ಜಮಾ ಆಗಿವೆ. 
 
ಇದಷ್ಟೇ ಅಲ್ಲದೇ ಭಾರತದಲ್ಲೇ ಸುಮಾರು 14.958 ಸಾವಿರ ಕೋಟಿ ರೂಪಾಯಿ ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂಬ ಮಾಹಿತಿಗಳು ಸಹ ಲಭ್ಯವಾಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments