ವಯನಾಡು: ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ಜಿಲ್ಲೆಯಲ್ಲಿ ಎರಡನೇ ಬಾರಿ ಚುನಾವಣಾ ಪ್ರಚಾರ ಕೈಗೊಂಡು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ಪ್ರಸ್ತುತ ಕೇಂದ್ರ ಸರ್ಕಾರ ದೇಶಕ್ಕೆ ಒಬ್ಬನೇ ನಾಯಕನೆಂಬ ಪರಿಕಲ್ಪನೆಯನ್ನು ಜನರ ಮೇಲೆ ಹೇರುತ್ತಿದ್ದು, ಇದು ತುಂಬಾ ಆತಂಕಕಾರಿ ಬೆಳವಣಿಗೆ. ಅದಲ್ಲದೆ ಈ ಮೂಲಕ ಬಿಜೆಪಿ ದೇಶದ ಜನರನ್ನು ಅವಮಾನಿಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಚುನಾವಣಾ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಭಾರತವು ಹೂವಿನ ಗುಚ್ಛದಂತೆ. ಗುಚ್ಚದ ಸೌಂದರ್ಯಕ್ಕೆ ಪ್ರತಿಯೊಂದು ಹೂವಿನ ಪಾತ್ರವಿರುತ್ತದೆ. ಹಾಗಾಗಿ, ಪ್ರತಿಯೊಂದನ್ನೂ ಗೌರವಿಸಬೇಕು ಎಂದರು.
ಬ್ರಿಷಿಷ್ ಆಡಳಿತದಿಂದ ಸ್ವಾತಂತ್ರ್ಯ ಪಡೆದದ್ದು ಆರ್‌ಸ್ಸೆಸ್ಸೆ ಸಿದ್ದಾಂತಕ್ಕೆ ಒಳಪಡುವಿಕೆಗಾಗಿ ಅಲ್ಲ. ಕಾಮಗ್ರೆಸ್ ಪಕ್ಷವು ಎಲ್ಲ ಜನರು ಆಳ್ವಿಕೆಯಲ್ಲಿ ಭಾಗಿಯಾಗಬೇಕೆಂಬ ನಿಲುವಿನಲ್ಲಿದೆ. ಅದಲ್ಲದ ಎಲ್ಲ ಜನರ ಧರ್ಮ, ಸಂಸ್ಕೃತಿಯನ್ನು ಗೌರವಿಸುತ್ತದೆ. ಆದರೆ ಇದಕ್ಕೆಲ್ಲ ಬಿಜೆಪಿ ವಿರೋಧಿಸುತ್ತದೆ ಎಂದರು.