Webdunia - Bharat's app for daily news and videos

Install App

ಕರ್ನಾಟಕದ 5 ಸೇರಿ 37 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಳ: ಕೇಂದ್ರ!

Webdunia
ಬುಧವಾರ, 11 ಆಗಸ್ಟ್ 2021 (14:50 IST)
ನವದೆಹಲಿ(ಆ.11): ಕಳೆದ 2 ವಾರದಲ್ಲಿ ಕರ್ನಾಟಕದ 5 ಜಿಲ್ಲೆಗಳು ಸೇರಿ 37 ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದೆ. ಇದು ಕಳವಳಕಾರಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.

ಕರ್ನಾಟಕದ ಆ 5 ಜಿಲ್ಲೆಗಲೆಂದರೆ ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಾಮರಾಜನಗರ ಹಾಗೂ ಉಡುಪಿ. ಇದೇ ವೇಳೆ, ಹಿಮಾಚಲ ಪ್ರದೇಶ, ಪಂಜಾಬ್, ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಸೋಂಕು ಮರುಉತ್ಪತ್ತಿ (ಒಬ್ಬರಿಂದ ಇನ್ನೊಬ್ಬರಿಗೆ ಹರಡುವಿಕೆ- ‘ಆರ್’ ದರ) ಪ್ರಮಾಣ 1ಕ್ಕಿಂತ ಹೆಚ್ಚಿದೆ. ಇದೂ ಕೂಡ ಅಪಾಯಕಾರಿ ಎಂದಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವಾಲಯದ ಅಧಿಕಾರಿಗಳು, ಕಳೆದ 7 ದಿನಗಳಿಂದ ಭಾರತದಲ್ಲಿ ಪತ್ತೆಯಾಗುತ್ತಿರುವ ಒಟ್ಟು ಕೋವಿಡ್ ಪ್ರಕರಣಗಳ ಪೈಕಿ ಶೇ.51.51ರಷ್ಟುಕೇಸುಗಳು ಕೇರಳವೊಂದರಲ್ಲಿಯೇ ಪತ್ತೆಯಾಗುತ್ತಿವೆ ಎಂದಿದೆ.
ಕೇರಳದ 11 ಜಿಲ್ಲೆ, ತಮಿಳುನಾಡಿನ 7, ಕರ್ನಾಟಕದ 5 ಜಿಲ್ಲೆಗಳೂ ಸೇರಿ ದೇಶದ 9 ರಾಜ್ಯಗಳ 37 ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಪ್ರಮಾಣ ಏರುಗತಿಯಲ್ಲಿದೆ. 11 ರಾಜ್ಯಗಳ 44 ಜಿಲ್ಲೆಗಳಲ್ಲಿ ವಾರದ ಸೋಂಕು ಪ್ರಮಾಣ ಶೇ.10ಕ್ಕಿಂತ ಅಧಿಕವಿದೆ,
ಈ ನಡುವೆ ಮಹಾರಾಷ್ಟ್ರದಲ್ಲಿ 34 ಸೋಂಕಿತರೂ ಸೇರಿ ದೇಶದಲ್ಲಿ ಒಟ್ಟು 86 ಅಪಾಯಕಾರಿ ಡೆಲ್ಟಾಪ್ಲಸ್ ವೈರಸ್ ಮಾದರಿ ಪತ್ತೆಯಾಗಿವೆ ಎಂದು ಎಚ್ಚರಿಸಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕ ಸೇರಿ 5 ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ, ಇಲ್ಲಿದೆ ಡೀಟೆಲ್ಸ್‌

ಮುಂಬೈ: ಆಕಾಸ ಏರ್‌ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಕಾರ್ಗೋ ಟ್ರಕ್‌

ಕಾಫ್ ಸಿರಪ್ ವಿಷಯದಲ್ಲಿ ಕೆಮ್ಮುತ್ತಿರುವ ಬಿಜೆಪಿಯವರು ಪುತ್ತೂರು ಬಿಜೆಪಿ ನಾಯಕನ ಪುತ್ರನ ಪ್ರಕರಣದಲ್ಲಿ ಮೌನವೇಕೆ: ಪ್ರಿಯಾಂಕ್ ಖರ್ಗೆ

ತಮಿಳುನಾಡು, 30 ವರ್ಷಗಳಿಂದ ಬೇಕಾಗಿದ್ದ ಮೋಸ್ಟ್ ವಾಟೆಂಡ್‌ ಭಯೋತ್ಪಾದಕರ ಬಂಧನ

ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಲಿಂಗರಾಜ್ ಬಂಧನವಾಗುತ್ತಿದ್ದ ಹಾಗೇ ಪಕ್ಷದಿಂದ ಉಚ್ಚಾಟನೆ

ಮುಂದಿನ ಸುದ್ದಿ
Show comments