Select Your Language

Notifications

webdunia
webdunia
webdunia
webdunia

ಅತ್ಯಾಚಾರಕ್ಕೊಳಗಾದವರಿಗೆ 10 ಲಕ್ಷ ರೂ.ಗಳ ಪರಿಹಾರ ನೀಡಿ: ರಾಜ್ಯಗಳಿಗೆ ಸುಪ್ರೀಂ ಆದೇಶ

ಅತ್ಯಾಚಾರಕ್ಕೊಳಗಾದವರಿಗೆ 10 ಲಕ್ಷ ರೂ.ಗಳ ಪರಿಹಾರ ನೀಡಿ: ರಾಜ್ಯಗಳಿಗೆ ಸುಪ್ರೀಂ ಆದೇಶ
ನವದೆಹಲಿ , ಶುಕ್ರವಾರ, 12 ಫೆಬ್ರವರಿ 2016 (16:06 IST)
ಅತ್ಯಾಚಾರಕ್ಕೊಳಗಾದ ಮತ್ತು ಲೈಂಗಿಕ ಕಿರುಕುಳಕ್ಕೊಳಗಾದ ವಿಶೇಷವಾಗಿ ಅಂಗವಿಕಲೆಯಾದವರಿಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳು 10 ಲಕ್ಷ ರೂಪಾಯಿಗಳ ಪರಿಹಾರ ನೀಡುವುದಲ್ಲದೇ ಅವರಿಗೆ ಪುನರ್‌ವಸತಿ ಕಲ್ಲಿಸುವ ಏಕರೂಪ ಕಾನೂನು ಜಾರಿಗೆ ತರಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. 
 
ಇತ್ತೀಚೆಗೆ ಗೋವಾ ಸರಕಾರ ಅತ್ಯಾಚಾರಕ್ಕೊಳಗಾದ ಯುವತಿಯರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡಲು ಆರಂಭಿಸಲು ನಿರ್ಧರಿಸಿದೆಯಲ್ಲದೇ ಅವರಿಗೆ ಪುನರ್‌ವಸತಿ ಕಲ್ಪಿಸುವ ನಿಯಮ ಜಾರಿಗೆ ತಂದಿದೆ. ಅದರಂತೆ, ದೇಶದ ಇತರ ರಾಜ್ಯಗಳು ಕೂಡಾ ಇಂತಹದ್ದೆ ಕಾನೂನು ಜಾರಿಗೆ ತರಬೇಕು ಎಂದು ಸಲಹೆ ನೀಡಿದೆ.   
 
ಸುಪ್ರೀಂಕೋರ್ಟ್‌ನ ಎಂ.ವೈ.ಇಕ್ಬಾಲ್ ಮತ್ತು ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ, ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅತ್ಯಾಚಾರಕ್ಕೊಳಗಾದ ಮಹಿಳೆಯರಿಗಾಗಿ ಒಂದೇ ಕಾನೂನು ಜಾರಿಗೊಳಿಸಬೇಕು ಎಂದು ಆದೇಶ ನೀಡಿದೆ.
 
ಅತ್ಯಾಚಾರಕ್ಕೊಳಗಾದ ಯುವತಿಯ ಕುಟುಂಬ ಅಥವಾ ಅವಲಂಬಿತರಿಗೆ ದೌರ್ಜನ್ಯದಿಂದಾದ ನಷ್ಟವನ್ನು ಭರಿಸುವ ಬಗ್ಗೆ ಸ್ಥಳೀಯ ಅಧಿಕಾರಿಗಳು ಕಾಯ್ದೆ 357-ಎ ಅನ್ವಯ ಪುನರ್ವಸತಿ ಕಲ್ಪಿಸಬೇಕು ಎಂದು ಹೇಳಿದೆ.
 
ಅತ್ಯಾಚಾರಕ್ಕೊಳಗಾದ ಬಲಿಪಶುವಿಗೆ ಪರಿಹಾರ ಅಥವಾ ಪುನರ್ವಸತಿ ಕಲ್ಪಿಸುವ ಬಗ್ಗೆ ದೇಶದ ಎಲ್ಲಾ ರಾಜ್ಯಗಳಲ್ಲಿ ಏಕರೂಪದ ಕಾನೂನು ಜಾರಿಯಲ್ಲಿಲ್ಲ. ಕೆಲ ರಾಜ್ಯಗಳು ಅತ್ಯಾಚಾರಕ್ಕೊಳಗಾದವರಿಗೆ 20 ಸಾವಿರ ರೂಪಾಯಿಗಳಿಂದ 10 ಲಕ್ಷ ರೂಪಾಯಿಗಳವರೆಗೆ ಪರಿಹಾರ ನೀಡಲಾಗುತ್ತಿದೆ. ಆದ್ದರಿಂದ, ದೇಶದ ಎಲ್ಲಾ ರಾಜ್ಯಗಳು ಏಕರೂಪದ ಕಾನೂನು ಜಾರಿಗೆ ತರುವುದು ಅನಿವಾರ್ಯವಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

Share this Story:

Follow Webdunia kannada