Webdunia - Bharat's app for daily news and videos

Install App

ಕೊಲೆಯಾಗಲಿದ್ದೇನೆ ಎಂದಳು, ಮರುದಿನ ಕೊಲೆಯಾದಳು

Webdunia
ಶುಕ್ರವಾರ, 26 ಆಗಸ್ಟ್ 2016 (17:05 IST)
ಉತ್ತರ ಪ್ರದೇಶ್ ಪೊಲೀಸರಿಗೆ ಇತ್ತೀಚಿಗೆ ಒಂದು ವಿಡಿಯೋ ದೊರೆಯಿತು. ಅದು ರೈಲಿನ ಟಾಯ್ಲೆಟ್‌ರೂಮ್‌ನಲ್ಲಿ ತೆಗೆದುಕೊಂಡಂತಿತ್ತು. ಅದರಲ್ಲಿ ಕ್ಯಾಮರಾವನ್ನು ನೇರವಾಗಿ ನೋಡುತ್ತಿರುವ ಯುವತಿ ಸ್ಥಿರ ಧ್ವನಿಯಲ್ಲಿ ಹೇಳಿದ್ದಾಳೆ: ನನ್ನ ತಂದೆ, ಅಣ್ಣ ನನ್ನನ್ನು ಕೊಲ್ಲಲಿದ್ದಾರೆ. ಈ ಕಾರಣಕ್ಕಾಗಿಯೇ ನನ್ನನ್ನು ಹಳ್ಳಿಗೆ ವಾಪಸ್ ಕರೆದೊಯ್ಯುತ್ತಿದ್ದಾರೆ. ನನ್ನ ಜೀವ ಅಪಾಯದಲ್ಲಿದೆ.  ನನಗೇನಾದರು ಆದರೆ ಅವರೇ ಕಾರಣರು. ನಾನು ಇಮ್ರಾನ್‌ನನ್ನು ಮದುವೆಯಾಗ ಬಯಸುತ್ತೇನೆ.
 
ಈ ವಿಡಿಯೋವನ್ನು ಯಾರು ಅಪ್ಲೋಡ್ ಮಾಡಿದರೋ ಗೊತ್ತಿಲ್ಲ. ಗುರುವಾರ ಇದು ವೈರಲ್ ಆಗಿ ಓಡಿದೆ. ಆದರೆ ಅಷ್ಟರಲ್ಲಾಗಲೇ 26 ವರ್ಷದ ಸೋನಿ ಹೆಣವಾಗಿದ್ದಳು. 
 
ಅಂತರ್ಜಾಲದಲ್ಲಿ ಈ ವಿಡಿಯೋ ಕ್ಲಿಪ್ ನೋಡಿದ ಪೊಲೀಸರು ಆಕೆಯ ಗ್ರಾಮಕ್ಕೆ ಬಂದು, ವಿಡಿಯೋದ ಆಧಾರದ ಮೇಲೆ ತಂದೆ-ತಾಯಿ, ನಾಲ್ಕು ಜನ ಸಹೋದರರು ಸೇರಿದಂತೆ ಮನೆಯ 6 ಜನ ಸದಸ್ಯರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಮರ್ಯಾದಾ ಹತ್ಯೆ ಎಂಬ ಅನುಮಾನ ವ್ಯಕ್ತವಾಗಿದೆ. 
 
ಮುಂಬೈನಲ್ಲಿ ವಾಸವಾಗಿದ್ದ ಕುಟುಂಬ ಒತ್ತಾಯಪೂರ್ವಕವಾಗಿ ಸೋನಿಯನ್ನು ಉತ್ತರ ಪ್ರದೇಶದಲ್ಲಿರುವ ತಮ್ಮಗ್ರಾಮಕ್ಕೆ ಕರೆದೊಯ್ದಿತ್ತು ಎಂದು ತಿಳಿದು ಬಂದಿದೆ. 
 
ಆಕೆಯ ದೇಹವನ್ನು ಸಮಾಧಿಯಿಂದ ಮೇಲೆತ್ತಲಾಗಿದ್ದು ಆಕೆಯ ದೇಹದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 
 
ಕಳೆದ ಕೆಲ ದಿನಗಳ ಹಿಂದೆ ಕುಟುಂಬ ಗ್ರಾಮಕ್ಕೆ ಆಗಮಿಸಿತ್ತು. ಕಳೆದ ಶುಕ್ರವಾರ ಮಗಳು ಸಾವನ್ನಪ್ಪಿದಳು ಎಂದು ಕುಟುಂಬದವರು ಹೇಳಿದರು. ಆದರೆ ಹೇಗೆ ಸತ್ತಳು ಎಂದು ಹೇಳಿರಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments