Webdunia - Bharat's app for daily news and videos

Install App

ಪ್ರೇಮಿಗಳ ತಲೆಬೋಳಿಸಿದ್ದಲ್ಲದೇ ನಗ್ನಗೊಳಿಸಿ ಗ್ರಾಮದ ತುಂಬಾ ಪರೇಡ್ ನಡೆಸಿದ ಗ್ರಾಮಸ್ಥರು

Webdunia
ಮಂಗಳವಾರ, 4 ಆಗಸ್ಟ್ 2015 (15:16 IST)
ಉತ್ತರಪ್ರದೇಶದಲ್ಲಿ ಪ್ರೇಮಿಗಳನ್ನು ಕ್ರೂರವಾಗಿ ನಡೆಸಿಕೊಳ್ಳುವುದು ತೀರಾ ಸಾಮಾನ್ಯ ಸಂಗತಿಯಾಗಿದೆ. ಇದೀಗ ಮತ್ತೊಂದು ಘಟನೆ ನಗರದಲ್ಲಿ ನಡೆದಿದ್ದು, ಪ್ರೇಮಿಗಳ ತಲೆಯನ್ನು ಬೋಳಿಸಿ ನಗ್ನವಾಗಿಸಿ ಕೊಯಿರಾಪುರ್ ಗ್ರಾಮದ ತುಂಬಾ ಪರೇಡ್ ಮಾಡಿಸಿದ ಹೇಯ ಘಟನೆ ಬಾರ್ಗವಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  
 
ಗ್ರಾಮದ ತುಂಬಾ ಪುತ್ರನನ್ನು ನಗ್ನವಾಗಿ ಮೆರವಣಿಗೆ ಮಾಡಿಸುತ್ತಿರುವುದು ಕಂಡು ಆಘಾತಗೊಂಡ ತಂದೆ, ಕೂಡಲೇ ಪೊಲೀಸ್ ಠಾಣೆಗೆ ತೆರಳಿ, ಸಹಾಯ ನೀಡುವಂತೆ ಕೋರಿದ್ದಾರೆ. ಆದರೆ, ಠಾಣೆಯಲ್ಲಿದ್ದ ಪೊಲೀಸರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ದೂರು ಕೊಡು ಎಂದು ಹೀಯಾಳಿಸಿದ್ದಾರೆ. 
 
ವಾರಣಾಸಿ ಲೋಕಸಭಾ ಕ್ಷೇತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿದ್ದಾರೆ.
 
ಪ್ರೇಮಿಗಳು ವಿವಾಹವಾಗುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಪ್ರೇಮಿಗಳು ವಿವಾಹವಾಗಿ ನಾಲ್ಕು ದಿನಗಳ ಹಿಂದೆ ಉರಿಗೆ ಮರಳಿರುವುದು ಗ್ರಾಮಸ್ಥರಿಗೆ ಆಕ್ರೋಶ ತಂದಿತ್ತು.
 
ಗ್ರಾಮಸ್ಥರು ನಮ್ಮಿಬ್ಬರ ತಲೆಗಳನ್ನು ಬೋಳಿಸಿದ್ದಲ್ಲದೇ ನಗ್ನಗೊಳಿಸಿ ಒತ್ತಾಯಪೂರ್ವಕವಾಗಿ ಗ್ರಾಮದ ತುಂಬಾ ಪರೇಡ್ ಮಾಡಿಸಿದ್ದಾರೆ. ಆರಂಭದಲ್ಲಿ ನನ್ನ ತಂದೆ ತಾಯಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಎರಡು ದಿಗಳ ಹಿಂದೆ ವಿವಾಹಕ್ಕೆ ಸಮ್ಮತಿ ನೀಡಿದ್ದಾರೆ ಎಂದು ಯುವಕ ಲಾಲ್ಜಿ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
 
ನಾವು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದಾಗ ಪೊಲೀಸರು, ವಾರಣಾಸಿಯ ಸಂಸದರಾಗಿರುವ ಪ್ರಧಾನಿ ಮೋದಿಗೆ ದೂರು ನೀಡುವಂತೆ ಲೇವಡಿ ಮಾಡಿದ್ದರು ಎಂದು ಯುವಕನ ಸಂಬಂಧಿಯೊಬ್ಬರು ಆರೋಪಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments