Select Your Language

Notifications

webdunia
webdunia
webdunia
webdunia

ಮನಮೋಹನ್‌ ಸಿಂಗ್‌ ಸರ್ಕಾರದಲ್ಲಿ ಹೆಚ್ಚಾಗಿದ್ದ ಉದ್ಯೋಗಾವಕಾಶಗಳಯ

ಮನಮೋಹನ್‌ ಸಿಂಗ್‌ ಸರ್ಕಾರದಲ್ಲಿ ಹೆಚ್ಚಾಗಿದ್ದ ಉದ್ಯೋಗಾವಕಾಶಗಳಯ
ನವದೆಹಲಿ , ಗುರುವಾರ, 31 ಜುಲೈ 2014 (18:26 IST)
ದೇಶದಲ್ಲಿ ಉದ್ಯೋಗಾವಕಾಶ ಪಡೆವರ ಸಂಖ್ಯೆ ಕಳೆದ 8 ವರ್ಷದಲ್ಲಿ ಶೇ.34.35ರಷ್ಟು ಹೆಚ್ಚಳವಾಗಿ 12.77 ಕೋಟಿಗೆ ತಲುಪಿದೆ ಎಂದು ಆರನೇ ಆರ್ಥಿಕ ಗಣನೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. 
 
ನಗರ ಭಾಗಗಳಲ್ಲಿ, 2005ಕ್ಕೆ ಹೋಲಿಸಿದರೆ 2013ರಲ್ಲಿ ಉದ್ಯೋಗಾವಕಾಶಗಳು ಶೇ.37.46 ರಷ್ಟು ಹೆಚ್ಚಳವಾಗಿ 6.14 ಕೋಟಿಗೆ ತಲುಪಿದೆ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಶೇ.31.59ರಷ್ಟು ಹೆಚ್ಚಳವಾಗಿ 6.62 ಕೋಟಿಗೆ ತಲುಪಿದೆ. 
 
ಒಟ್ಟು ಉದ್ಯೋಗಿಗಳ ಮಹಿಳೆಯರ ಅನುಪಾತ 2013ರಲ್ಲಿ ಶೇ.25.56 ರಷ್ಟಾಗಿದೆ ಆದರೆ 2005ರಲ್ಲಿ ಶೇ.20ರಷ್ಟು ಇತ್ತು. ನಗರ ಭಾಗದಲ್ಲಿ ಮಹಿಳಾ ಉದ್ಯೋಗಿಗಳ ಅನುಪಾತ ಶೇ.19.8 ಮತ್ತು ಗ್ರಾಮೀಣ ಭಾಗದಲ್ಲಿ ಶೇ.30.09ರಷ್ಟಾಗಿದೆ. 
 
ಮಹಾರಾಷ್ಟ್ರದಲ್ಲಿ ಎಲ್ಲಕ್ಕಿಂತ ಹೆಚ್ಚು ಅಂದರೆ 1.43 ಕೋಟಿ ಉದ್ಯೋಗಿಗಳಾಗಿದ್ದಾರೆ. ಇದರ ನಂತರ ಉತ್ತರ ಪ್ರದೇಶ ಎರಡನೇ ಸ್ಥಾನ ಪಡೆದುಕೊಂಡಿದೆ. ಇಲ್ಲಿ 1.37 ಉದ್ಯೋಗಿಗಳು ಇದ್ದಾರೆ. ಪಶ್ಚಿಮ ಬಂಗಾಳದಲ್ಲಿ 1.15 ಕೋಟಿ, ತಮಿಳುನಾಡಿನಲ್ಲಿ 1.08 ಕೋಟಿ ಮತ್ತು ಗುಜರಾತಿನಲ್ಲಿ 90.63 ಲಕ್ಷ ಉದ್ಯೋಗಿಗಳು ಇದ್ದಾರೆ. 
 
ಕೇಂದ್ರಾಡಳಿತ ಪ್ರದೇಶದಲ್ಲಿ 2013ರಲ್ಲಿ 29.84 ಲಕ್ಷ ಅತ್ಯಧಿಕ ಉದ್ಯೋಗಿಗಳಿದ್ದಾರೆ. ಇದರ ನಂತರ ಚಂಡಿಗಡ್‌‌ ಎರಡನೇ ಸ್ಥಾನ ಪಡೆದುಕೊಂಡಿದ್ದು ಇಲ್ಲಿ 2.38 ಲಕ್ಷ ಉದ್ಯೋಗಿಗಳು ಇದ್ದಾರೆ ಮತ್ತು ಪಾಂಡಿಚೇರಿಯಲ್ಲಿ 2.17 ಲಕ್ಷ ಉದ್ಯೋಗಿಗಳು ಇದ್ದಾರೆ. 
 
2011ರ ಜನಗಣತಿ ಅನುಸಾರ ದೇಶದ ಜನಸಂಖ್ಯೆ 2011ರಲ್ಲಿ 121 ಕೋಟಿಗಿಂತ ಅಧಿಕವಾಗಿತ್ತು. 
.
ಆರ್ಥಿಕ ಗಣನೆಯಲ್ಲಿ ಕೃಷಿ, ಸಾರ್ವಜನಿಕ ಆಡಳಿತ, ರಕ್ಷಣಾ ವಿಭಾಗ ಮತ್ತು ಕಡ್ಡಾಯ ಸಾಮಾಜಿಕ ಭದ್ರತೆ ಸೇರಿಸಲಾಗುವುದಿಲ್ಲ. 
 
" ಉದ್ಯೋಗಾವಕಾಶಗಳ ಬಗ್ಗೆ ರಾಷ್ಟ್ರೀಯ ಸಾಂಖಿಕ ಆಯೋಗದ ಚೇರ್‌ಮೆನ್‌ ಪ್ರಣಬ್‌ ಸೆನ್‌‌ಗೆ ಮಾಧ್ಯಮದವರು ಕೇಳಿದಾಗ " 8 ವರ್ಷದಲ್ಲಿ (2013ರವರೆಗೆ) ಉದ್ಯೋಗಾವಕಾಶಗಳಲ್ಲಿ ಶೇ.34ರಷ್ಟು ವೃದ್ದಿಯಾಗಿದೆ, ಇದು ಒಳ್ಳೆಯ ಬೆಳವಣಿಗೆಯಾಗಿದೆ. ಇದರ ಅರ್ಥ ಉದ್ಯೋಗಾವಕಾಶ ವಾರ್ಷಿಕ ಆಧಾರದಲ್ಲಿ ಶೇ.4 ಕ್ಕಿಂತ ಅಧಿಕ ದರಕ್ಕಿಂತ ಹೆಚ್ಚಿಗಿದೆ ಆದರೆ ಜನಸಂಖ್ಯೆ ಶೇ.2 ರಷ್ಟು ದರದಲ್ಲಿ ಹೆಚ್ಚಳವಾಗಿದೆ" ಎಂದು ತಿಳಿಸಿದ್ದಾರೆ.  

Share this Story:

Follow Webdunia kannada