Select Your Language

Notifications

webdunia
webdunia
webdunia
webdunia

ಕೇಂದ್ರದ ಯೋಜನೆ: ಆಧಾರ ಕಾರ್ಡ್‌ನಲ್ಲಿಯೇ ಮತದಾರರ ಲಿಸ್ಟ್

ಕೇಂದ್ರದ ಯೋಜನೆ: ಆಧಾರ ಕಾರ್ಡ್‌ನಲ್ಲಿಯೇ ಮತದಾರರ ಲಿಸ್ಟ್
ನವದೆಹಲಿ , ಭಾನುವಾರ, 22 ಮಾರ್ಚ್ 2015 (10:35 IST)
ಇನ್ಮುಂದೆ ಆಧಾರ್ ಕಾರ್ಡ್ ನಂಬರ್ ಮತದಾರರ ಲಿಸ್ಟ್ ಗೆ ಸೇರ್ಪಡೆಯಾಗಲಿದೆ. ಇದರಿಂದಾಗಿ ನಕಲಿ ಮತದಾರರ ಸೇರ್ಪಡೆಗೆ ಕಡಿವಾಣ ಬೀಳಲಿದೆ. ಜೊತೆಗೆ ಜಗತ್ತಿನಲ್ಲಿಯೇ ಮಾಹಿತಿಯಾಧಾರಿತ ಬಯೋಮೆಟ್ರಿಕ್ ಹೊಂದಿರುವ ಪ್ರಪ್ರಥಮ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಈ ಕುರಿತು ಮುಖ್ಯ ಚುನಾವಣಾ ಆಯುಕ್ತ ಎಚ್.ಎಸ್.ಬ್ರಹ್ಮ ಮಾಹಿತಿ ನೀಡಿದ್ದು, ಆಧಾರ್ ಕಾರ್ಡ್ ಸಂಖ್ಯೆಯನ್ನು ಮತದಾರರ ಲಿಸ್ಟ್ ಗೆ 2015ರೊಳಗೆ ಸೇರ್ಪಡೆ ಮಾಡುತ್ತೇವೆ. ಆ ಬಳಿಕ ಭಾರತ ಮಾಹಿತಿಯಾಧಾರಿತ ಬಯೋಮೆಟ್ರಿಕ್ ಮತದಾರರನ್ನು ಹೊಂದಿರುವ ಮೊದಲ ದೇಶವಾಗಲಿದೆ.

ಇದರಿಂದಾಗಿ ಒಂದೇ ಒಂದು ನಕಲಿ ಮತದಾರರ ಸೇರ್ಪಡೆಗೆ ಅವಕಾಶವಾಗುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಏತನ್ಮಧ್ಯೆ ಸಾರ್ವಜನಿಕ ಸೇವೆಗಳಿಗೆ ಆಧಾರ್ ಕಡ್ಡಾಯವಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಉಲ್ಲೇಖಿಸಿದ ಅವರು, ಪ್ರತಿನಿತ್ಯ ಲಕ್ಷಾಂತರ ಜನ ಮತದಾರರು ಸ್ವಇಚ್ಚೆಯಿಂದಲೇ ಆಧಾರ್ ಕಾರ್ಡ್ ಮಾಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ನಾವು ಆಧಾರ್ ಕಡ್ಡಾಯವಾಗಬೇಕೆಂದು ಹೇಳುತ್ತಿಲ್ಲ. ಆದರೆ ಮತದಾರರೇ ಮಾಡಿಸಿಕೊಳ್ಳುತ್ತಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಮತದಾರರ ಪಟ್ಟಿಯಲ್ಲಿ ನಕಲಿ ಹೆಸರುಗಳನ್ನು ಸೇರಿಸುವುದನ್ನು ಕೈಬಿಡಬೇಕು ಎಂದು ಬ್ರಹ್ಮ ಈ ಸಂದರ್ಭದಲ್ಲಿ ದೇಶದ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದು, ಈ ರೀತಿ ಮಾಡುವುದು ಅಪರಾಧವಾಗಿದ್ದು, ಇದಕ್ಕೆ ಒಂದು ವರ್ಷದವರೆಗೆ ಜೈಲುಶಿಕ್ಷೆ ವಿಧಿಸಬಹುದಾಗಿದೆ.

ಈಗಾಗಲೇ ಸುಮಾರು 85 ಕೋಟಿ ಭಾರತೀಯರು ಆಧಾರ್ ನಂಬರ್ ಪಡೆದುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಇನ್ನುಳಿದ 25&30 ಕೋಟಿ ಜನರು ಈ ವರ್ಷದ ಆಗಸ್ಟ್ ತಿಂಗಳೊಳಗೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳುತ್ತಾರೆಂಬ ವಿಶ್ವಾಸ ಇದೆ ಎಂದು ತಿಳಿಸಿದರು.

ಒಂದು ಬಾರಿ ಆಧಾರ್ ನಂಬರ್ ವಿದ್ಯುನ್ಮಾನ ಮತದಾರರ ಪಟ್ಟಿಯಲ್ಲಿ ದಾಖಲಾದರೆ. ನಂತರ ವೈಯಕ್ತಿವಾಗಿಯೂ ಮತದಾರ ತನ್ನ ವಿಳಾಸವನ್ನು ಕೂಡಾ ಆನ್ ಲೈನ್ ನಲ್ಲಿ ಬದಲಾಯಿಸಬಹುದಾಗಿದೆ. ಹೇಗೆಂದರೆ ಆಧಾರ್ ಪ್ರಾಥಮಿಕ ಗುರುತುಪತ್ರವಾಗಿರುವುದರಿಂದ. ಆ ನಿಟ್ಟಿನಲ್ಲಿ ಯಾವುದೇ ನಕಲಿ ಹೆಸರು ಸೇರ್ಪಡೆಗೆ ಅವಕಾಶವಾಗುವುದಿಲ್ಲ ಎಂದು ವಿವರಿಸಿದರು.

Share this Story:

Follow Webdunia kannada