Webdunia - Bharat's app for daily news and videos

Install App

ಮಗುವನ್ನು ಹೆತ್ತು ಮಕ್ಕಳಿಲ್ಲದವರಿಗೆ ನೀಡುತ್ತೇನೆ; ತಂದೆಯಿಂದಲೇ ಗರ್ಭಿಣಿಯಾದ ಬಾಲಕಿಯ ದಿಟ್ಟತನ

Webdunia
ಸೋಮವಾರ, 3 ಆಗಸ್ಟ್ 2015 (16:56 IST)
14 ವರ್ಷದ ಆ ಬಾಲಕಿ ಆಡುವ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾಳೆ. ಅದು ಕೂಡ ತನ್ನ ತಂದೆಯಿಂದಲೇ. ಕಾನ್ಪುರದಲ್ಲಿ ಈ ಘೋರ ಘಟನೆ ನಡೆದಿದ್ದು ಗರ್ಭಪಾತ ಮಾಡಿಸಿಕೊಳ್ಳುವಂತೆ ಬಾಲಕಿಗೆ ವೈದ್ಯರು ಸಲಹೆ ನೀಡಿರುವ ನಡುವೆಯೂ ಬಾಲಕಿ ಮಗುವನ್ನು ಹೆರಲು ಅವಕಾಶ ಕಲ್ಪಿಸಿಕೊಡಿ ಎಂದು ಸ್ಥಳೀಯ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದಾಳೆ. 

ಆಕೆಯ ಮೇಲೆ ಅತ್ಯಾಚಾರವೆಸಗಿ, ಗರ್ಭ ಧರಿಸುವಂತೆ ಮಾಡಿರುವ ತಂದೆಯನ್ನು ಜುಲೈ 16 ರಂದು ಜೈಲಿಗಟ್ಟಲಾಗಿದೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಆಕೆಗೆ ಗರ್ಭಪಾತ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಆಕೆ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ವಿಳಂಬ ಮಾಡಿದರೆ ಆರೋಗ್ಯಕ್ಕೆ ಅಪಾಯ ಎಂದು ವೈದ್ಯರು ಎಚ್ಚರಿಕೆಯನ್ನು ಸಹ ನೀಡಿದ್ದರು. ಆದರೆ ಬಾಲಕಿ ಗರ್ಭಪಾತ ಮಾಡಿಕೊಳ್ಳಲು ನಿರಾಕರಿಸಿದ್ದು ಮಗು ಈ ಜಗತ್ತಿಗೆ ಬರಲಿ, ಜನಿಸಿದ ಬಳಿಕ ನಾನದರ ಸಂಪರ್ಕದಲ್ಲಿ ಇರುವುದಿಲ್ಲ ಎಂದು ಹೇಳಿದ್ದಾಳೆ. 
 
"ನಾನು ಗರ್ಭವನ್ನು ಕತ್ತರಿಸುವುದಿಲ್ಲ. ಬದಲಾಗಿ ಅದನ್ನು ಹೆತ್ತು  ಮಕ್ಕಳಿಲ್ಲದ ದಂಪತಿಗಳಿಗೆ ನೀಡುತ್ತೇನೆ. ಅದಕ್ಕೆ ಅವಕಾಶ ಮಾಡಿಕೊಡಿ", ಎಂದು ಬಾಲಕಿ ಕೋರ್ಟ್‌ನಲ್ಲಿ ಕೋರಿಕೊಂಡಿದ್ದಾಳೆ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರೊಬ್ಬರು ಮಾಹಿತಿ ನೀಡಿದ್ದಾರೆ. 
 
ಆದರೆ ಬಾಲಕಿಯ ಈ ದಿಟ್ಟ ನಿರ್ಧಾರಕ್ಕೆ ಕುಟುಂಬದವರು ಬೆಂಬಲ ನೀಡಿಲ್ಲ. ನಗರದ ಸಾಮಾಜಿಕ ಕಾರ್ಯಕರ್ತರು ಪೊಲೀಸರ ಸಹಾಯದೊಂದಿಗೆ ಬಾಲಕಿಯನ್ನು ಕೋರ್ಟ್‌ಗೆ ಕರೆದೊಯ್ದಿದ್ದಾರೆ. ಆದರೆ ಆಕೆ ಗರ್ಭವನ್ನಿಟ್ಟುಕೊಂಡರೆ ಜೀವಕ್ಕೆ ಅಪಾಯ ಎಂದು ವೈದ್ಯರು ಹೇಳಿರುವುದರಿಂದ ಕೋರ್ಟ್ ವಿಚಾರಣೆ ನಡೆಸಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಿದೆ. ಸದ್ಯ ನ್ಯಾಯಾಲಯ ಬಾಲಕಿಯನ್ನು ಸ್ವರೂಪ್ ನಗರದಲ್ಲಿರುವ ಮಹಿಳಾ ಆಶ್ರಯ ತಾಣಕ್ಕೆ ಕಳುಹಿಸಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments