Select Your Language

Notifications

webdunia
webdunia
webdunia
webdunia

ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ, ಈ ಮೇಲ್ ಕಳಿಸಿದ್ರೆ 3 ವರ್ಷ ಜೈಲು

ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ, ಈ ಮೇಲ್ ಕಳಿಸಿದ್ರೆ 3 ವರ್ಷ ಜೈಲು
ನವದೆಹಲಿ , ಸೋಮವಾರ, 24 ನವೆಂಬರ್ 2014 (19:53 IST)
ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ಕಳಿಸುವ,  ಈ ಮೇಲ್‌ನಲ್ಲಿ ಸ್ನೇಹಿತರಿಗೆ ಅಶ್ಲೀಲ ಎಂಎಂಎಸ್  ಕಳಿಸುವವರಿಗೆ ಇನ್ನು ಮೇಲೆ ಕಾದಿದೆ 3 ವರ್ಷಗಳ ಜೈಲುಶಿಕ್ಷೆ ಜೊತೆಗೆ ಒಂದು ಲಕ್ಷ ರೂ. ದಂಡ.

ಇಂತಹ ಆರೋಪಿಗಳ ವಿರುದ್ಧ ವಿಚಾರಣೆ ಇಲ್ಲದೆಯೇ ಚಾರ್ಜ್‌ಶೀಟ್ ಸಲ್ಲಿಸಬಹುದಾಗಿದೆ. ಮಹಿಳೆಯರ ಅಶ್ಲೀಲ ಪ್ರದರ್ಶನ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಂಪುಟ ಅನುಮತಿ ನೀಡುವ ಸಾಧ್ಯತೆಯಿದ್ದು, ಕಾಯ್ದೆ ವ್ಯಾಪ್ತಿಗೆ ಎಲೆಕ್ಟ್ರಾನಿಕ್ ಮೀಡಿಯಾ ಕೂಡ ಬರಲಿದೆ.

ದೇಶಾದ್ಯಂತ ಅತ್ಯಾಚಾರ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ. ಅಶ್ಲೀಲ ಚಿತ್ರಗಳಿಗೆ ತಡೆ ವಿಧಿಸಬೇಕೆಂದು ರಾಜ್ಯಸರ್ಕಾರಗಳು  ಮನವಿ ಮಾಡಿರುವ  ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕುರಿತು ಗಂಭೀರ ಚಿಂತನೆ ನಡೆಸಿದೆ.

Share this Story:

Follow Webdunia kannada