Webdunia - Bharat's app for daily news and videos

Install App

ಅವರೊಮ್ಮೆ ಕರೆದರೆ ಸಾಕು, ನಾನವರ ಜತೆ ಹೆಜ್ಜೆ ಹಾಕುತ್ತೇನೆ: ನರೇಂದ್ರ ಮೋದಿ ಪತ್ನಿ

Webdunia
ಮಂಗಳವಾರ, 25 ನವೆಂಬರ್ 2014 (18:34 IST)
ತನ್ನಿಂದ 43 ವರ್ಷಗಳಿಂದ ದೂರವಿದ್ದರೂ ಸಹ ಪತಿ ನರೇಂದ್ರ ಮೋದಿ, ತಮ್ಮ ಬಗ್ಗೆ ಸ್ವಲ್ಪವಾದರೂ ಭಾವನೆಗಳನ್ನು ಹೊಂದಿದ್ದಾರೆ ಎಂದು ಅವರ ಪತ್ನಿ ಖಚಿತವಾಗಿ ನಂಬಿದ್ದಾರೆ.

ಸದಾ ಮಾಧ್ಯಮಗಳಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ 64 ವರ್ಷದ ಜಶೋಧಾಬೆನ್, ಮೀರಾ ರೋಡ್‌ನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಪತ್ರಕರ್ತರ ಜತೆ ಮನಸ್ಸು ಬಿಚ್ಚಿ ಮಾತನಾಡಿದ್ದು ವಿಶೇಷವಾಗಿತ್ತು.
 
ಇಷ್ಟು ವರ್ಷಗಳ ಅಗಲಿಕೆಯ ನಂತರವೂ ಆಕೆಯ ಕಣ್ಣಲ್ಲಿರುವ ಭರವಸೆಯ ಮಿಂಚು ಹಾಗೆಯೇ ಇದೆ. ಅವರು ಬಾ ಎಂದು ಕರೆದರೆ ನಾನವರ ಜತೆ ಹೋಗುತ್ತೇನೆ ಎನ್ನುವುದರ ಮೂಲಕ ತಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಅವರು ಹೊರಹಾಕಿದ್ದಾರೆ. ಮೋದಿ ಪ್ರಧಾನಿಯಾದ ನಂತರ ಅವರು ಮುಂಬೈಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. 
 
ಅವರೆಲ್ಲಿಗೆ ಹೋದರೂ ಸಹ 5 ಜನ ಪೊಲೀಸ್ ಅಧಿಕಾರಿಗಳು ಅವರನ್ನು ಹಿಂಬಾಲಿಸುತ್ತಾರೆ. ಮೇ 30 ರಿಂದ ಅವರಿಗೆ ಬೆಂಗಾವಲು ವಾಹನವನ್ನು ನೀಡಲಾಗಿದೆ. ಆದರೆ ದೇಶದ ಪ್ರಥಮ ಮಹಿಳೆ ಎಂಬುದನ್ನು ತೋರಿಸಿಕೊಳ್ಳಲು ಅವರು ಇಷ್ಟಪಡುವುದಿಲ್ಲ. ಗಮನಿಸಬೇಕಾದ ಅಂಶವೆಂದರೆ ಅವರು ಆಟೋ ರಿಕ್ಷಾ, ಬಸ್ ಮೂಲಕ ಓಡಾಡುತ್ತಾರೆ.  ಆದರೂ ಬೆಂಗಾವಲು ವಾಹನ ಅವರ ಹಿಂದಿರುತ್ತದೆ. ಅವರದನ್ನು ಅಡಚಣೆ ಎಂದು ಪರಿಗಣಿಸುತ್ತಾರೆ. ಅವರು ಯಾವಾಗಲೂ ನನ್ನ ಹಿಂದಿರುತ್ತಾರೆ. ಈಗ ಮುಂಬೈನಲ್ಲೂ ನನ್ನ ಹಿಂದೆ ಬಂದಿದ್ದಾರೆ ಎನ್ನಾತ್ತಾರವರು. 
 
ಮೋದಿಯವರನ್ನು 1968ರಲ್ಲಿ ವಿವಾಹವಾಗಿದ್ದ ಅವರು 3 ವರ್ಷಗಳ ನಂತರ ಬೇರ್ಪಟ್ಟಿದ್ದರು. ನಂತರ ಆಕೆ ಶಿಕ್ಷಕಿಯಾಗಿ ತನ್ನ ವೃತ್ತಿಯನ್ನು ಆರಂಭಿಸಿದ್ದಳು. ಆಕೆಯ ತಂದೆ ಆಕೆಯ ಜೀವನಕ್ಕೆ ಒಂದು ಸ್ಪೂರ್ತಿಯಾಗಿದ್ದರು. ತಮ್ಮ ವೈವಾಹಿಕ ಜೀವನ  ಈ ರೀತಿಯ ತಿರುವು ಪಡೆದಿದ್ದುದಕ್ಕೆ ಅವರಿಗೆ ವಿಷಾದವಿಲ್ಲವಂತೆ. ಮೋದಿ ಇವರು ದೇಶ ಸೇವೆಯ ಹಾದಿ ಹಿಡಿದಿದ್ದು ಅವರಿಗೆ ಹೆಮ್ಮೆಯ ಸಂಗತಿಯಂತೆ. 
 
ವಾರದಲ್ಲಿ ನಾಲ್ಕು ದಿನ ಉಪವಾಸ ಆಚರಿಸುವ ಅವರು ಅನ್ನವನ್ನು ತಿನ್ನುವುದಿಲ್ಲ. ತಮ್ಮ ಎಲ್ಲ ಪ್ರಾರ್ಥನೆಗಳು ಮೋದಿಯವರ ಶ್ರೇಯೋಭಿಲಾಷೆಯನ್ನೇ ಗುರಿಯಾಗಿರಿಸಿಕೊಂಡಿರುತ್ತವೆ ಎನ್ನುತ್ತಾರೆ ಅವರು.
 
 "ಹೌದು, ಅಲ್ಲಿ ಒಟ್ಟಾಗಿರುವ ಆಸೆ ಯಾವಾಗಲೂ ಇದೆ. ಆದರೆ ಮಾಧ್ಯಮ ಇದನ್ನು ತಪ್ಪು ಚಿತ್ರಿಕರಿಸಿತು. ನಾನು ಅವರ ಬಳಿ ಇದ್ದು ಅವರ ಸೇವೆ ಮಾಡ ಬಯಸುತ್ತೇನೆ. ಅವರ ಒಂದು ಕರೆಗೆ ಕಾಯುತ್ತಿದ್ದೇನೆ. ಈಗ ನಾನಿರುವ ಕಟ್ಟಡದ ಕೆಳಗಡೆ ಬಂದು ನೀನು ನನ್ನ ಜತೆ ಬರಬೇಕೆಂದು ಹೇಳಿದರೆ ತಕ್ಷಣ ನಾನವರ ಜತೆ ಹೆಜ್ಜೆ ಹಾಕುತ್ತೇನೆ ಎಂದಾಗ ಅವರ ಮನಸ್ಸಿನ ತುಡಿತ ಯಾರನ್ನಾದರೂ ಮರುಗುವಂತೆ ಮಾಡುತ್ತದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments