Select Your Language

Notifications

webdunia
webdunia
webdunia
webdunia

ಗುರುತಿನ ಚೀಟಿ ವಿಚಾರ: ಕಿರಣ್ ಬೇಡಿಗೆ ಕ್ಲೀನ್ ಚಿಟ್

ಗುರುತಿನ ಚೀಟಿ ವಿಚಾರ: ಕಿರಣ್ ಬೇಡಿಗೆ ಕ್ಲೀನ್ ಚಿಟ್
ದೆಹಲಿ , ಗುರುವಾರ, 29 ಜನವರಿ 2015 (13:36 IST)
ಬಿಜೆಪಿಯ ನಿಯೋಜಿತ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರ ಮೇಲೆ ಎರಡು ಮತದಾರರ ಗುರುತಿನ ಚೀಟಿಯನ್ನು ಹೊಂದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಇಂದು ಕ್ಲೀನ್‌ಚಿಟ್ ನೀಡಿದೆ. 
 
ನಗರದ ಉದಯ್‌ ಪಾರ್ಕ್ ನಿವಾಸದ ಗುರುತಿನ ಚೀಟಿಯನ್ನು ಉಳಿಸಿಕೊಂಡಿದ್ದ ಕಿರಣ್ ಬೇಡಿ, ನವದೆಹಲಿಯ ಮತರದಾರರ ಪಟ್ಟಿಯಲ್ಲಿದ್ದ ಗುರುತಿನ ಚೀಟಿಯನ್ನು ರದ್ದುಗೊಳಿಸಿ ಎಂದು ಆಯೋಗಕ್ಕೆ ಈ ಹಿಂದೆಯೇ ಮನವಿ ಮಾಡಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಕಿರಣ್ ಬೇಡಿ ಅವರಿಗೆ ಆಯೋಗ ಕ್ಲೀನ್ ಚಿಟ್ ನೀಡಿದೆ. 
 
ನಗರದ ಉದಯ್‌ ಪಾರ್ಕ್ ಹಾಗೂ ನವದೆಹಲಿ ನಿವಾಸದ ವಿಳಾಸಗಳ ಹೆಸರಿನಲ್ಲಿ ಬೇಡಿ ಎರಡು ಮತದಾರರ ಗುರುತಿನ ಚೀಟಿಗಳನ್ನು ಬೇಡಿ ಹೊಂದಿದ್ದರು. ಇದೇ ವಿಷಯವು ಚರ್ಚೆಗೆ ಗ್ರಾಸವಾಗಿ ಬೇಡಿ ಅವರನ್ನು ಪೇಚಿಗೆ ಸಿಲುಕಿಸಿತ್ತು. 
 
ಕಿರಣ್‌ ಬೇಡಿ ಅವರ ಬಳಿ ಎರಡು ಪ್ರತ್ಯೇಕ ವಿಳಾಸದ ಮತದಾರರ ಗುರುತಿನ ಚೀಟಿಗಳು ಇವೆ ಎಂಬ ದೂರಿನ ಬಗ್ಗೆ ಆಯೋಗ ಪರಿಶೀಲನೆ ನಡೆಸುತ್ತಿತ್ತು. 

Share this Story:

Follow Webdunia kannada