ಜೀವರಕ್ಷಣೆಗಾಗಿ ಮೊರೆ ಇಡುತ್ತಿರುವ ಹದಿಯಾ ವಿಡಿಯೋ ಬಿಡುಗಡೆ

Webdunia
ಶುಕ್ರವಾರ, 27 ಅಕ್ಟೋಬರ್ 2017 (15:11 IST)
ಕೇರಳ: ನನ್ನನ್ನು ಇಲ್ಲಿಂದ ಪಾರು ಮಾಡಿ, ಇಲ್ಲದಿದ್ದರೆ ಯಾವ ಹೊತ್ತಿನಲ್ಲೂ ನನ್ನನ್ನು  ಕೊಂದು ಬಿಡುತ್ತಾರೆ ಎಂದು ಅಕಿಲಾ ಅಶೋಕನ್‌ ಅಥವಾ ಹದಿಯಾ ಗೋಗರೆಯುತ್ತಿರುವ ಎರಡನೇ ವಿಡಿಯೋ ಬಿಡುಗಡೆ ಮಾಡಲಾಗಿದೆ.

ಲವ್‌ ಜಿಹಾದ್‌ ಆರೋಪದಲ್ಲಿ ಶಫೀನ್‌ ಜಹಾನ್‌ ಜತೆ ನಡೆದಿರುವ ಮದುವೆಯನ್ನು ಕೇರಳ ಹೈಕೋರ್ಟ್‌ ರದ್ದು ಮಾಡಿದ ಬಳಿಕ ಹದಿಯಾಳನ್ನು ನ್ಯಾಯಾಲಯ ಆಕೆಯ ಹೆತ್ತವರ ವಶಕ್ಕೆ ಒಪ್ಪಿಸಿದೆ.

ಸಾಮಾಜಿಕ ಕಾರ್ಯಕರ್ತ ರಾಹುಲ್‌ ಈಶ್ವರ್‌ ಆ. 17ರಂದು ಚಿತ್ರೀಕರಿಸಿಕೊಂಡಿರುವ ಹದಿಯಾಳ ಎರಡನೇ ವಿಡಿಯೋದಲ್ಲಿ ಆಕೆ ಜೀವ ರಕ್ಷಣೆಗಾಗಿ ಗೋಗರೆಯುತ್ತಿರುವ ದೃಶ್ಯವಿದೆ. "ನೀವು ನನ್ನನ್ನು ಇಲ್ಲಿಂದ ಪಾರು ಮಾಡಲೇಬೇಕು. ಇಲ್ಲದಿದ್ದರೆ ನಾಳೆ ಅಥವಾ ನಾಡಿದ್ದರೊಳಗೆ ಯಾವುದೇ ಹೊತ್ತಿನಲ್ಲಿ ನನ್ನನ್ನು ಕೊಂದುಬಿಡಬಹುದು. ನನ್ನ ತಂದೆಗೆ ವಿಪರೀತ ಸಿಟ್ಟು ಬಂದಿದೆ ಎಂಬುದು ನನಗೆ ಗೊತ್ತಿದೆ. ನಾನು ನಡೆದಾಡಿದಾಗ ಆತ ನನ್ನನ್ನು ಹೊಡೆದು ಕಾಲಿನಿಂದ ತುಳಿಯುತ್ತಾನೆ. ನನ್ನ ತಲೆ ಅಥವಾ ದೇಹದ ಯಾವುದೇ ಭಾಗ ಎಲ್ಲಿಗಾದರೂ ಅಪ್ಪಳಿಸಿತೆಂದರೆ ನಾನು ಸಾಯುವುದು ನಿಶ್ಚಿತ’ ಎಂದು ಹದಿಯಾ ವಿಡಿಯೋದಲ್ಲಿ ಹೇಳಿದ್ದಾಳೆ.

25ರ ಹರೆಯದ ಹದಿಯಾ ಓರ್ವ ಹೊಮಿಯೋಪತಿಕ್‌ ವೈದ್ಯೆ; ಕಳೆದ ವರ್ಷ ಶಾಫೀನ್‌ ಜಹಾನ್‌ ಜತೆಗೆ ಮದುವೆಯಾದ ಬಳಿಕ ಆಕೆ ಇಸ್ಲಾಂ ಗೆ ಮತಾಂತರಗೊಂಡಿದ್ದಳು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉಡುಪಿಯಲ್ಲಿ ಪ್ರಧಾನಿ ಮೋದಿ: ಚಿತ್ರ ಹಿಡಿದು ನಿಂತಿದ್ದ ಮಕ್ಕಳಿಗೆ ಮೋದಿ ಹೇಳಿದ್ದೇನು

ಪ್ರಧಾನಿ ಮೋದಿ ಇನ್ನು ಭಾರತ ಭಾಗ್ಯವಿಧಾತ: ಉಡುಪಿಯಲ್ಲಿ ವಿಶೇಷ ಬಿರುದು ನೀಡಿ ಪುತ್ತಿಗೆ ಶ್ರೀ

ಮೋದಿಗಾಗಿ ಬಿಸಿಲಲ್ಲಿ ನಿಂತು ಕಾಯುತ್ತಿದ್ದ ವಿದ್ಯಾರ್ಥಿಗಳು: ನಿರಾಸೆ ಮಾಡದ ಪ್ರಧಾನಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಪ್ರಧಾನಿ ಮೋದಿ ಉಡುಪಿ ರೋಡ್ ಶೋ ಆರಂಭ live video

ಮುಂದಿನ ಸುದ್ದಿ
Show comments