Select Your Language

Notifications

webdunia
webdunia
webdunia
webdunia

ನಾನು ಮೋದಿ ಕುರ್ತಾ ಧರಿಸಲು ಬಯಸುತ್ತೇನೆ: ಬರಾಕ್ ಒಬಾಮಾ

ನಾನು ಮೋದಿ ಕುರ್ತಾ ಧರಿಸಲು ಬಯಸುತ್ತೇನೆ: ಬರಾಕ್ ಒಬಾಮಾ
ನವದೆಹಲಿ , ಸೋಮವಾರ, 26 ಜನವರಿ 2015 (13:39 IST)
ನಾನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತೆ ಕುರ್ತಾ ಧರಿಸಲು ಬಯಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ. 
 
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಯೋಜಿಸಿದ್ದ ಔತಣಕೂಟದಲ್ಲಿ ಮಾತನಾಡಿದ ಅವರು, ನೀವು ತೋರಿಸಿದ ಗೆಳೆತನಕ್ಕೆ, ಗೌರವಕ್ಕೆ ತುಂಬಾ ಧನ್ಯವಾದಗಳು. ನನಗೆ ತುಂಬಾ ಸಂತಸವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. 
 
ಮಿಶೆಲ್ ಒಬಾಮಾ ಹೊರತುಪಡಿಸಿ ಹೊಸ ಫ್ಯಾಶನ್ ದಿರಿಸುಗಳನ್ನು ಧರಿಲಸುವ ವ್ಯಕ್ತಿ ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ ಒಬಾಮಾ ಮೋದಿಯವರ ಕುರ್ತಾ ತುಂಬಾ ಚೆನ್ನಾಗಿದೆ. ನಾನು ಕೂಡಾ ಧರಿಸಲು ಬಯಸುತ್ತೇನೆ ಎಂದರು. 
 
ಅಮೆರಿಕದಲ್ಲಿ ನಾನು ತೋರಿದ ನಿಲುವಿನಂತೆ ಭಾರತದಲ್ಲಿ ನರೇಂದ್ರ ಮೋದಿ ಕೂಡಾ ಕಠಿಣ ನಿಲುವು ಹೊಂದಿದ್ದಾರೆ. ಅವರ ದೂರದೃಷ್ಟಿ ಮೆಚ್ಚುವಂತಹದ್ದು ಎಂದು ಹೊಗಳಿದರು.
 
ಮೋದಿಯವರ ಬಾಲ್ಯದ ದಿನಗಳ ಬಗ್ಗೆ ಮಾತನಾಡಿದ ಅವರು, ಮೋದಿಯವರ ತಂದೆ ಚಹಾ ಮಾರಾಟಗಾರ ತಾಯಿ ಬೇರೆ ಮನೆಗಳಲ್ಲಿ ಮನೆಗೆಲಸ ಮಾಡಿಕೊಂಡಿದ್ದಂತ ದಂಪತಿಗಳ ಪುತ್ರ ಇಂದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿಯಾಗಿ ಅಮೆರಿಕದ ಅಧ್ಯಕ್ಷರನ್ನು ಸ್ವಾಗತಿಸುವ ಮಟ್ಟಕ್ಕೆ ಮೋದಿ ಬೆಳೆದು ನಿಂತಿದ್ದಾರೆ.ಪ್ರತಿದಿನ ಮೂರು ತಾಸು ಮಾತ್ರ ನಿದ್ದೆ ಮಾಡುವ ಮೋದಿಯವರನ್ನು ಕಂಡು ನೋವಾಗಿದೆ. ನಾನು ಐದು ಗಂಟೆಗಳ ಕಾಲ ನಿದ್ರೆ ಮಾಡುತ್ತೇನೆ ಎಂದು ಬರಾಕ್ ಒಬಾಮಾ ತಿಳಿಸಿದರು. 

Share this Story:

Follow Webdunia kannada