Select Your Language

Notifications

webdunia
webdunia
webdunia
webdunia

ಗಣರಾಜ್ಯೋತ್ಸವ ಸಮಾರಂಭಕ್ಕೆ ಆಹ್ವಾನ ನೀಡದಿರುವುದಕ್ಕೆ ಕೇಜ್ರಿವಾಲ್ ಅಸಮಾಧಾನ

ಗಣರಾಜ್ಯೋತ್ಸವ ಸಮಾರಂಭಕ್ಕೆ ಆಹ್ವಾನ ನೀಡದಿರುವುದಕ್ಕೆ ಕೇಜ್ರಿವಾಲ್ ಅಸಮಾಧಾನ
ನವದೆಹಲಿ , ಶನಿವಾರ, 24 ಜನವರಿ 2015 (16:57 IST)
ತಮ್ಮನ್ನು ಜನವರಿ 26 ರ ಗಣರಾಜ್ಯೋತ್ಸವ ಪರೇಡ್‌ಗೆ ಆಹ್ವಾನಿಸಿಲ್ಲವೆಂದು  ಆಪ್ ನಾಯಕ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ನಾನು ಗಣರಾಜ್ಯೋತ್ಸವ  ಆಚರಣೆಯಲ್ಲಿ ಭಾಗವಹಿಸಲು ಬಯಸುತ್ತೇನೆ. ನಾನು ದೆಹಲಿಯ ಮಾಜಿ ಮುಖ್ಯಮಂತ್ರಿಯಾಗರೂ ನನಗೆ ಯಾಕೆ ಆಹ್ವಾನ ನೀಡಿಲ್ಲವೆಂದು ಆಪ್ ಮುಖ್ಯಸ್ಥ ಪ್ರಶ್ನಿಸಿದ್ದಾರೆ.  
 
ಭಾನುವಾರ ನವದೆಹಲಿಗೆ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅವರ ಆಗಮನವಾಗುತ್ತಿದ್ದು ದೆಹಲಿ ಭದ್ರ ಕೋಟೆಯಾಗಿ ಮಾರ್ಪಟ್ಟಿದೆ. ದೆಹಲಿಯ ರಸ್ತೆಗಳಲ್ಲಿ 45,000 ಭದ್ರತಾ ಸಿಬ್ಬಂದಿ  ಕಾವಲು ಕಾಯುತ್ತಿದ್ದು, ವಿವಿಧ ಪ್ರದೇಶಗಳಲ್ಲಿ  15,000 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. 
 
ಜನವರಿ 25 ರಿಂದ 20,000 ಸಿಬ್ಬಂದಿಯನ್ನು ನಿರ್ದಿಷ್ಟ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಒಬಾಮಾ ದೆಹಲಿಗೆ ಆಗಮಿಸುವ ದಿನ ಈ ಸಂಖ್ಯೆ ದುಪ್ಪಟ್ಟಾಗಲಿದೆ ದೆಹಲಿ ಪೊಲೀಸ್ ವಿಭಾಗ ತಿಳಿಸಿದೆ.
 
ಜನವರಿ 26 ರಂದು  ರಾಷ್ಟ್ರ ರಾಜಧಾನಿಯ ರಸ್ತೆಗಳಲ್ಲಿ 45,000 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಣರಾಜ್ಯೋತ್ಸವ ಸಮಾರಂಭದಲ್ಲಿ ಒಬಾಮಾ ಮುಖ್ಯ ಅತಿಥಿಗಳಾಗಿದ್ದಾರೆ. 

Share this Story:

Follow Webdunia kannada