Webdunia - Bharat's app for daily news and videos

Install App

ಈಗಲೂ ನನಗೆ ಪ್ರೇಮಪತ್ರಗಳು ಬರುತ್ತವೆ ಆದ್ರೆ ಪತ್ನಿ ಕ್ಯಾರೆ ಎನ್ನಲ್ಲ: ವೆಂಕಯ್ಯ ನಾಯ್ಡು

Webdunia
ಬುಧವಾರ, 17 ಡಿಸೆಂಬರ್ 2014 (17:24 IST)
ಚಳಿಗಾಲದ ಅಧಿವೇಶನ ಪ್ರಾರಂಭವಾಗಿದ್ದಾಗಿನಿಂದ ಪ್ರತಿಭಟನೆ, ಕಿರುಚಾಟದಲ್ಲೇ ಮುಳುಗಿ ಎದ್ದಿದ್ದ ಲೋಕಸಭೆ ಮಂಗಳವಾರ ಪ್ರಸ್ತಾಪವಾದ ಹಾಸ್ಯ ಪ್ರಸಂಗಗಳಿಂದಾಗಿ ನಗೆಗಡಲಲ್ಲಿ ತೇಲಿತು. ಈ ನಗುವಿನ ಹಿಂದಿನ ಕಾರಣ ಸಚಿವ ವೆಂಕಯ್ಯ ನಾಯ್ಡು. ನನಗೆ ಈಗ ಕೂಡ ಲವ್ ಲೆಟರ್‌ಗಳು ಬರುತ್ತವೆ. ನನ್ನ ಪತ್ನಿ ಈ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹಾಸ್ಯ ಚಟಾಕಿ ಹಾರಿಸಿದರು. 

 
ದೆಹಲಿಯಲ್ಲಿ ಅನಧಿಕೃತ ವಸಾಹತುಗಳನ್ನು ಕ್ರಮಬದ್ಧಗೊಳಿಸುವಿಕೆ ಕುರಿತಂತೆ ಬಿಲ್ ಜಾರಿ ಮಾಡಿದ್ದಕ್ಕಾಗಿ ನಾಯ್ಡು ಅವರನ್ನು ಹೊಗಳಿ ಬಿಜೆಪಿ ಸದಸ್ಯ ಮನೋಜ್ ತಿವಾರಿ ಹಾಡನ್ನು ಹಾಡಿದ್ದಕ್ಕೆ ಪ್ರತಿಯಾಗಿ ನಾಯ್ಡು ಈ ಮಾತುಗಳನ್ನಾಡಿದರು. 
 
ವೆಂಕಯ್ಯಾಜಿ ಐ ಲವ್ ಯೂ ಎಂದು ಮನೋಜ್ ತಿವಾರಿ ಹಾಡಿದರು. ಆಗ ನಾಯ್ಡು , ನನಗೇನೂ ಅಭ್ಯಂತರವಿಲ್ಲ. ನನ್ನ ಪತ್ನಿ ಕೂಡ ಈ ಕುರಿತು ತಪ್ಪು ತಿಳಿದುಕೊಳ್ಳುವುದಿಲ್ಲ. ಯಾಕೆಂದರೆ ನನ್ನ ತಾರುಣ್ಯದ ದಿನಗಳಿಂದಲೂ ನನ್ನನ್ನು ಅನೇಕ ಜನರು ಪ್ರೀತಿಸಿದ್ದಾರೆ  ಮತ್ತು ಪ್ರೇಮ ಪತ್ರಗಳನ್ನು ಬರೆದಿದ್ದಾರೆ ಎಂದರು.
 
ರಾಷ್ಟ್ರ ರಾಜಧಾನಿ ದೆಹಲಿ ಕಾನೂನುಗಳ (ವಿಶೇಷ ನಿಬಂಧನೆಗಳು) ಎರಡನೆಯ (ತಿದ್ದುಪಡಿ) ಮಸೂದೆ 2014, ಕುರಿತಂತೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ , ಪೂರ್ವ ದೆಹಲಿ ಸಂಸದ ತಿವಾರಿ,  "ಈ ಬಿಲ್ ಜಾರಿಗೆ ತಂದಿದ್ದಕ್ಕಾಗಿ ನಾನು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರನ್ನು ಪ್ರೀತಿಸುತ್ತೇನೆ "ಎಂದು ಹಾಡಿದರು.
 
ನಾನು ಜನರಿಂದ ಪ್ರೀತಿಸಲ್ಪಡುತ್ತೇನೆ. ಬೇರೆ ಕಾರಣಕ್ಕಲ್ಲ, ರಾಜಕೀಯ ಮತ್ತು ಸಾರ್ವಜನಿಕ ಚಟುವಟಿಕೆಗಳಿಗಾಗಿ ಎಂದು ನಾಯ್ಡು ತಿಳಿಸಿದರು.
 
ಹೀಗಾಗಿ  ಈ ವಿಷಯದಲ್ಲಿ ನನ್ನದೇನೂ ವಿರೋಧವಿಲ್ಲ.  ನನ್ನ ಪತ್ನಿ ಕೂಡ ದೆಹಲಿಯಲ್ಲಿಯೇ ಇದ್ದಾರೆ. ನನ್ನನ್ನು ಪ್ರೀತಿಸುವವರ ಸಾಲಿಗೆ ಇನ್ನೊಬ್ಬರು ಸೇರಿದರು ಎಂದು ನಾನವಳಿಗೆ ಹೇಳುತ್ತೇನೆ ಎಂದರು.
 
ಅದಕ್ಕೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ನಿಮಗೆ ಈ ರೀತಿಯ ಸಂದೇಹಗಳು ಯಾಕೆ ಬರುತ್ತಿವೆ ಎಂದು ಪ್ರಶ್ನಿಸಿದರು. 
 
ಅದಕ್ಕುತ್ತರಿಸಿದ ನಾಯ್ಡು ನನ್ನ ಮನಸ್ಸಿನಲ್ಲಿ ಯಾವ ಸಂದೇಹಗಳು ಇಲ್ಲ.  ನಿಮ್ಮಲ್ಲಿ ಈ ಬಗ್ಗೆ ಸಂದೇಹಗಳಿದ್ದರೆ ಅದನ್ನು ಕಿತ್ತು ಹಾಕಿ, ಅಷ್ಟೇ ಎಂದರು.
 
ಅದಕ್ಕೆ ಖರ್ಗೆ ನಿಮ್ಮ ಹೃದಯದಿಂದ ಈ ಮಾತುಗಳನ್ನಾಡುತ್ತಿದ್ದೀರಾ ಎಂದರು. ಪ್ರತಿಯಾಗಿ  ನಾಯ್ಡು, ಹೌದು ನಾನು ಅಂತರಾಳದಿಂದಲೇ ಮಾತನಾಡುತ್ತಿದ್ದೇನೆ. ಅದರಲ್ಲಿ ಯಾವುದೇ ಸಂದೇಹಗಳಿಲ್ಲ ಎಂದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments